Advertisement

ಆಧಾರ್‌ ತಿದ್ದುಪಡಿಗೆ ಕಾಡಿದ ಸಿಬಂದಿ ಕೊರತೆ, ಮೂಲಸೌಕರ್ಯ 

06:50 AM Aug 04, 2018 | |

ಉಡುಪಿ: ರಾಜ್ಯಾದ್ಯಂತ ಆಗಸ್ಟ್‌ ಎರಡನೇ ವಾರದಿಂದ ಆಧಾರ್‌ ನೋಂದಣಿ, ತಿದ್ದುಪಡಿ ಗ್ರಾ.ಪಂ.ಗಳಲ್ಲೇ ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ಹೆಬ್ರಿ, ತೆಕ್ಕಟ್ಟೆ, ಕೋಟೇಶ್ವರ ಭಾಗಗಳಲ್ಲಿ ಗ್ರಾ.ಪಂ.ಗಳ ಸಿದ್ಧತೆ ಹೇಗಿದೆ ಎನ್ನುವ ಬಗ್ಗೆ ಉದಯವಾಣಿ ಪರಿಶೀಲನೆ ನಡೆಸಿದ್ದು, ಈ ವೇಳೆ ಕಂಡುಬಂದ ಅಂಶಗಳು ಹೀಗಿವೆ.
  
ತೆಕ್ಕಟ್ಟೆ 
ತೆಕ್ಕಟ್ಟೆ ಗ್ರಾ.ಪಂ
.: ಗ್ರಾ.ಪಂ. ಕಚೇರಿಯಲ್ಲಿರುವ ಕಂಪ್ಯೂಟರ್‌ಗೆ ಸಾಫ್ಟ್ವೇರ್‌ ಅಪ್ಡೆàಟ್‌ ಮಾಡಲಾಗಿದೆ. ಆಧಾರ್‌ ನೋಂದಣಿ, ತಿದ್ದುಪಡಿ ಹೆಚ್ಚುವರಿ ಕೆಲಸವನ್ನು ಈಗಿರುವ ಓರ್ವ ಡಾಟಾ ಎಂಟ್ರಿ ಆಪರೇಟರ್‌ ಸಿಬಂದಿಯೇ ನಿರ್ವಹಿಸಬೇಕಿದೆ. ತಿದ್ದುಪಡಿಗೆ ಜನ ಹೆಚ್ಚಾದರೆ  ಒತ್ತಡ ಹೆಚ್ಚಾಗಲಿದೆ. ಈ ಹಿನ್ನೆಲೆ ಯಲ್ಲಿ  ಬಾಪೂಜಿ ಸೇವಾ ಕೇಂದ್ರ ಸಿಬಂದಿಯನ್ನು ನೇಮಿಸಿ ಕೊಳ್ಳಬೇಕಾದ ಅನಿವಾರ್ಯತೆ ಇದೆ.

Advertisement

ಕೆದೂರು ಗ್ರಾ.ಪಂ:  ಗ್ರಾ.ಪಂ. ಕಚೇರಿಯಲ್ಲಿರುವ ಕಂಪ್ಯೂಟರ್‌ಗೆ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಲಾಗಿದೆ. ಇಲ್ಲೂ ಕೆಲಸದ ಒತ್ತಡ ಇದೆ. ಕಚೇರಿಯಲ್ಲಿ ಸಿಬಂದಿಗಳ ಕೊರತೆ ಇದೆ. 

ಬೇಳೂರು ಗ್ರಾ.ಪಂ: ಬೇಳೂರು ಗ್ರಾ.ಪಂ.ನಲ್ಲಿ ಸಾಫ್ಟ್‌ ವೇರ್‌ ಕಂಪ್ಯೂಟರ್‌ಗೆ ಅಳವಡಿಸಲಾಗಿದ್ದು ಸಿಬಂದಿ ತರಬೇತಿಯಾಗಿದೆ. ಕಂಪ್ಯೂಟರ್‌ ಜ್ಞಾನ ಹೊಂದಿರುವ ಇಬ್ಬರು ಪುರುಷ ಸಿಬಂದಿಗಳು ನಿರ್ವಹಣೆಗೆ ಸಹಕರಿ ಸುತ್ತಿದ್ದಾರೆ. ಗ್ರಾ.ಪಂ.ಕಟ್ಟಡದ ವಿಸ್ತರಣೆಯ ಪರಿಣಾಮ ಬಿಎಸ್‌ಎನ್‌ಎಲ್‌ ಓಎಫ್‌ಸಿ ಸಮಸ್ಯೆಗಳಿವೆ.

ಕೊರ್ಗಿ ಗ್ರಾ.ಪಂ: ಕೊರ್ಗಿ ಗ್ರಾ.ಪಂ.ನಲ್ಲಿ ಸಿಬಂದಿ ತರಬೇತಿಯಾಗಿದೆ. ಸಾಫ್ಟ್ವೇರ್‌ ಕೂಡ ಅಳವಡಿಸ ಲಾಗಿದೆ. ನೆಟ್‌ವರ್ಕ್‌ ಸಮಸ್ಯೆ ಇಲ್ಲಿದೆ. 

ಕುಂಭಾಸಿ ಗ್ರಾ.ಪಂ.: ಗ್ರಾ.ಪಂ.ನಲ್ಲೂ ಸಿಬಂದಿ ತರಬೇತಿ, ಸಾಫ್ಟ್ವೇರ್‌ ಅಳವಡಿಕೆಯಾಗಿದೆ. ಥಂಬ್‌, ಅಕ್ಷಿಪಟಲ ಸ್ಕ್ಯಾನರ್‌ ಏಕಕಾಲದಲ್ಲಿ ರೇಶನ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ಗೆ ಹೊಂದಾಣಿಕೆ ಆಗದ ಹಿನ್ನೆಲೆಯಲ್ಲಿ ಬೇರೆ ಹೊಸ ಸಿಸ್ಟಂ ಅನ್ನು ಅಳವಡಿಸಲು ಉದ್ದೇಶಿಸಲಾಗಿದ್ದು ಆ ಕಾರ್ಯ ಪೂರ್ಣವಾಬೇಕಿದೆ. 

Advertisement

ಕೋಟೇಶ್ವರ 
ಕೋಟೇಶ್ವರ ಗ್ರಾ.ಪಂ:
ಇರುವ ಸೌಕರ್ಯಗಳನ್ನೇ ಬಳಸಿಕೊಂಡು ಆಧಾರ್‌ ತಿದ್ದುಪಡಿಗೆ ಸಿದ್ಧತೆ ಮಾಡಿಕೊಳ್ಳ ಲಾಗಿದೆ. ಸಿಬಂದಿ ತರಬೇತಿ ಪೂರ್ಣಗೊಂಡಿದೆ. 

ಗೋಪಾಡಿ ಗ್ರಾ.ಪಂ.: ಈಗಿರುವ ಕಂಪ್ಯೂಟರ್‌ ಕಚೇರಿ ಕೆಲಸಕ್ಕೆ ಮೀಸಲಾಗಿದ್ದು ಹೊಸ ಕಂಪ್ಯೂಟರ್‌ ಬೇಕಿದೆ. ಜತೆಗೆ ಸಿಬಂದಿ ನೇಮಕಾತಿಗೆ ಕೇಳಿಕೊಳ್ಳಲಾಗಿದೆ. 

ವಂಡ್ಸೆ ಗ್ರಾ.ಪಂ.: ಈಗಿರುವ ಸಿಬಂದಿಯನ್ನೇ ಆಧಾರ್‌ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ತರಬೇತಿ ಆಗಿದೆ.
  
ಹೆಬ್ರಿ ಗ್ರಾ.ಪಂ.: ಸಿಬಂದಿ ತರಬೇತಿ ಪೂರ್ಣಗೊಂಡಿದೆ. ಸಿಬಂದಿಗೆ ಕೆಲಸದ ಒತ್ತಡವಿರುವುದರಿಂದ ವಾರದಲ್ಲಿ ಎರಡು ದಿನಗಳಲ್ಲಿ ಮಾತ್ರ ತಿದ್ದುಪಡಿ ಕೆಲಸ ಮಾಡಲು ಉದ್ದೇಶಿಸಲಾಗಿದೆ.  

ಶಿವಪುರ ಗ್ರಾ.ಪಂ: ಸಿಬಂದಿ ತರಬೇತಿ ಆಗಿದೆ. ಇರುವ ಸೌಕರ್ಯವನ್ನೇ ಬಳಸಿ ತಿದ್ದುಪಡಿಗೆ ಉದ್ದೇಶಿಸಲಾಗಿದೆ.   
ನಾಡಾ³ಲು ಗ್ರಾ.ಪಂ.: ಕಂಪ್ಯೂಟರ್‌ಗೆ ಸಾಫ್ಟ್ವೇರ್‌ ಅಳವಡಿಸಲಾಗಿದೆ. ಕೆಲವೊಂದು ತಾಂತ್ರಿಕ ತೊಂದರೆಗಳು ಇಲ್ಲಿ ಗೋಚರಿಸಿವೆ. ಇರುವ ಸಿಬಂದಿಯನ್ನೇ ಇದಕ್ಕೂ ಬಳಸಲು ಉದ್ದೇಶಿಸಲಾಗಿದ್ದು ಗ್ರಾಂ.ಪಂ. ಕೆಲಸಗಳು ವಿಳಂಬಗೊಳ್ಳವ ಆತಂಕ ಇದೆ.  

ಚಾರ  ಗ್ರಾ.ಪಂ.: ಸಿಬಂದಿ ತರಬೇತಿ, ಕಂಪ್ಯೂಟರ್‌ ಅಪ್ಡೆàಟ್‌ ಮಾಡಲಾಗಿದೆ. ಈ ಗ್ರಾ.ಪಂ.ಗೆ ಸ್ವಂತ ಕಟ್ಟಡವಿಲ್ಲ. ಬಾಡಿಗೆ ಕೋಣೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಜಾಗದ ಕೊರತೆ ಇದ್ದು, ಆಧಾರ್‌ ತಿದ್ದುಪಡಿಗೆ ಹೆಚ್ಚಿನ ಜನ ಆಗಮಿಸಿದಾಗ ಸ್ಥಳಾವಕಾಶದ ಕೊರತೆ ಕಾಡುವ ಭೀತಿ ಇದೆ.  

ಕುಚ್ಚಾರು ಗ್ರಾ.ಪಂ.: ಈಗಾಗಲೇ ಸಿಬಂದಿಗೆ ತರಬೇತಿ ನೀಡಲಾಗಿದ್ದು, ತಿದ್ದುಪಡಿಗೆ ಬೇಕಾದ ಎಲ್ಲ ಕೆಲಸಗಳು ಪೂರ್ಣಗೊಂಡಿವೆ.  

ಮುದ್ರಾಡಿ ಗ್ರಾ.ಪಂ.: ಸಿಬಂದಿ ತರಬೇತಿ ಆಗಿದೆ. ಈಗಿರುವ ಕಂಪ್ಯೂಟರನ್ನೇ ತಿದ್ದುಪಡಿಗೆ ಸಜ್ಜುಗೊಳಿಸ ಲಾಗಿದೆ. ಪಂಚಾಯತ್‌ ಕಾರ್ಯಾವಧಿಯಲ್ಲಿ ತಿದ್ದುಪಡಿ ಮಾಡಿಕೊಡಲು ಉದ್ದೇಶಿಸಲಾಗಿದೆ. 

ವೇತನ ನಿರ್ವಹಣೆ ತ್ರಾಸ!
ಹಲವು ಗ್ರಾಮ ಪಂಚಾಯತ್‌ಗಳಲ್ಲಿ ಬಾಪೂಜಿ ಕೇಂದ್ರದ ಡಾಟಾ ಆಪರೇಟರ್‌ಗಳನ್ನು ಪಂಚಾಯತ್‌ ತಾತ್ಕಾಲಿಕ ನೆಲೆಯಲ್ಲಿ ಸೇರ್ಪಡೆಗೊಳಿಸಿದೆ.  ಆದರೂ ಕೂಡಾ ಗ್ರಾಮೀಣ ಭಾಗದಲ್ಲಿನ ಸಣ್ಣ ಗ್ರಾ.ಪಂ.ಗಳಲ್ಲಿ ಸಿಬಂದಿ ವೇತನ ನೀಡಲು ಕಷ್ಟಸಾಧ್ಯವಾಗುತ್ತಿದೆ ಎನ್ನುವುದು ಪಿಡಿಓಗಳ ಸಾರ್ವತ್ರಿಕ ಅಭಿಪ್ರಾಯ. ತಾತ್ಕಾಲಿಕ ನೆಲೆಯಲ್ಲಿ ಕಾರ್ಯನಿರ್ವಹಿಸುವ ಸಿಬಂದಿಗಳನ್ನು ಸರಕಾರ ಖಾಯಂಗೊಳಿಸುವ ಬಗ್ಗೆ ಚಿಂತನೆ ಮಾಡಿದರೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. 

Advertisement

Udayavani is now on Telegram. Click here to join our channel and stay updated with the latest news.

Next