Advertisement
ಗ್ರಾಹಕರು ಹೆಚ್ಚು ಇಷ್ಟ ಪಡುವ ಬಂಗುಡೆ, ಬೂತಾಯಿ ಜತೆಗೆ ಅಂಜಲ್, ಪಾಂಪ್ರಟ್ ಮೀನಿನ ಪೂರೈಕೆಯಲ್ಲಿ ಕೊರತೆ ಕಾಣಿಸಿದ್ದು ಮಾರುಕಟ್ಟೆಯಲ್ಲಿ ಇಂತಹ ಮೀನುಗಳ ದರವೂ ಎರಡು ಪಟ್ಟು ಏರಿದೆ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ದರ ಬಲು ದುಬಾರಿ ಎನ್ನುತ್ತಾರೆ ಮಲ್ಪೆ ಕನ್ನಿ ಮೀನುಗಾರರ ಸಂಘದ ಅಧ್ಯಕ್ಷ ದಯಾಕರ ವಿ. ಸುವರ್ಣ.
ಬಂಗುಡೆ ದೊಡ್ಡ ಗಾತ್ರದ ಮೀನು ಕೆ.ಜಿ. ಒಂದಕ್ಕೆ 250 ರೂ. ಇದೆ. ಕಳೆದ ಬಾರಿ 150-180 ರೂ. ಅಸುಪಾಸಿನಲ್ಲಿ ಇತ್ತು. ಬೂತಾಯಿ ಮಧ್ಯಮ ಗಾತ್ರದ್ದಕ್ಕೆ 200 ರೂ. ಇದೆ. ದೊಡ್ಡ ಗಾತ್ರದ್ದು ಸಿಗುವುದೇ ಅಪರೂಪ. ಅಂಜಲ್ ದರ ಕೆ.ಜಿ.ಗೆ 800ರಿಂದ 1 ಸಾವಿರ ರೂ. ವರೆಗೆ ಇದೆ. ಸಣ್ಣ ಗಾತ್ರದ ಅಂಜಲ್ ಕೆಜಿಗೆ 600ರಿಂದ 650 ರೂ.ಗೆ ಇದೆ. 800ರಿಂದ 900 ರೂ. ತನಕ ಇದ್ದ ದೊಡ್ಡ ಪಾಂಪ್ರಟ್ ಪ್ರಸ್ತುತ 1, 400 ರೂ. ದಾಟಿದೆ. ಕೊಡ್ಡಯಿ ಕಲ್ಲುರು ದೊಡ್ಡದು 400, ಸಣ್ಣದು 250 ರೂ. ಇದೆ. ವಿವಿಧ ಬಗೆಯ ಸಿಗಡಿಗೆ 650 ರೂ., 500 ರೂ., 350 ರೂ. ಇದೆ. ಬೊಳಂಜಿರ್ ಕೆ.ಜಿ.ಗೆ 600, ತೊರಕೆ 400 ರೂ. ಇದೆ. ಮೀನುಗಾರರ ಪ್ರಕಾರ ಒಳ್ಳೆಯ ಗಾಳಿ, ನೀರು ಇದ್ದರೆ ಮಾತ್ರ ಮೀನುಗಳು ಇರುತ್ತವೆ. ಇಲ್ಲದಿದ್ದರೆ ವಲಸೆ ಹೋಗುತ್ತವೆ. ಜತೆಗೆ ಕರಾವಳಿಯಲ್ಲಿ ಈಗ ಹೆಚ್ಚಿನ ಬಿಸಿಲಿನ ಪರಿಣಾಮ ಮೀನುಗಳು ತಂಪು ಪ್ರದೇಶವನ್ನು ಆರಿಹೋಗುತ್ತವೆ. ಹಾಗಾಗಿ ಮೀನು ಸರಿಯಾಗಿ ಸಿಗುತ್ತಿಲ್ಲ ಎನ್ನುತ್ತಾರೆ ಮೀನುಗಾರ ಕೃಷ್ಣ ಎಸ್. ಸುವರ್ಣ.
Related Articles
– ಬೇಬಿ ಎಚ್. ಸಾಲ್ಯಾನ್, ಅಧ್ಯಕ್ಷೆ, ಮಹಿಳಾ ಹಸಿ ಮೀನು ಮಾರಾಟಗಾರರ ಸಂಘ, ಮಲ್ಪೆ
Advertisement
– ನಟರಾಜ್ ಮಲ್ಪೆ