Advertisement
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಶುಕ್ರವಾರ ಪತ್ರ ಕರ್ತರು ಪಿಲಿಕುಳದಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭ ನಿಸರ್ಗ ಧಾಮದಲ್ಲಿ ಕೆಲವೊಂದು ಕೊರತೆ ಇರುವುದು ಗಮನಕ್ಕೆ ಬಂದಿದೆ. ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಿರುವ ಪಿಲಿಕುಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾ ಸಿಗರು ರಾಜ್ಯದೆಲ್ಲೆಡೆಯಿಂದ ಬಂದು ಹೋಗುತ್ತಿದ್ದಾರೆ. ಎಪ್ರಿಲ್‌ನಿಂದ ಪಿಲಿ ಕುಳ ನಿಸರ್ಗಧಾಮದ ಆಡಳಿತ, ನಿರ್ವ ಹಣೆ ಹೊಣೆಯು ಅಧಿಕೃತವಾಗಿ ಪ್ರಾಧಿ ಕಾರದ ಕಡೆಯಿಂದ ನಡೆಯಲಿದ್ದು, ಅದಕ್ಕೆ ಬೇಕಾದ ಸಿದ್ಧತೆ ಕೂಡ ನಡೆಯುತ್ತಿದೆ.
Related Articles
ವಾರದ ದಿನಗಳಲ್ಲಿ ನೂರಾರು ಮಂದಿ, ವೀಕೆಂಡ್‌ಗಳಲ್ಲಿ ಸಾವಿರಾರು ಸಂಖ್ಯೆ ಯಲ್ಲಿ ಭೇಟಿ ನೀಡುವ ಪ್ರವಾಸಿಗರಿಗೆ ಸುತ್ತಾಡಲು ಸೂಕ್ತ ಮಾಹಿತಿ ಯನ್ನು ನೀಡುವ ಗೈಡ್‌ಗಳಿಲ್ಲ;
Advertisement
ಪ್ರಾಧಿಕಾರದಿಂದ ಹೆಚ್ಚಿನ ಅನುಕೂಲ
“ಸದ್ಯ ನಿಸರ್ಗಧಾಮದಲ್ಲಿ 80 ಮಂದಿ ಸಿಬಂದಿ ನೇರ ನೇಮಕಾತಿ, 75 ಮಂದಿ ಹೊರ ಗುತ್ತಿಗೆಯಡಿ (ಭದ್ರತೆ, ಹೌಸ್ ಕೀಪಿಂಗ್ ಸೇರಿದಂತೆ) ಕಾರ್ಯನಿರ್ವಹಿಸುತ್ತಿದ್ದಾರೆ. ತಿಂಗಳಿಗೆ ಸುಮಾರು 45 ಲಕ್ಷ ರೂ. ನಂತೆ ವಾರ್ಷಿಕ 5 ಕೋ.ರೂ. ಖರ್ಚು ತಗಲು ತ್ತಿದೆ. ಭೇಟಿ ನೀಡುವವರಿಂದ ಟಿಕೆಟ್ ರೂಪದಲ್ಲಿ ವಾರ್ಷಿಕ 3.5 ಕೋ.ರೂ. ಸಂಗ್ರಹವಾಗುತ್ತಿದೆ. ಕೊರೊನಾ ಸಂದರ್ಭ ಸುಮಾರು 8 ತಿಂಗಳುಗಳ ಕಾಲ ನಿಸರ್ಗ ಧಾಮ ಸಾರ್ವಜನಿಕರ ವೀಕ್ಷಣೆಗೆ ಬಂದ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಇಲ್ಲಿನ ಪ್ರಾಣಿ ಪಕ್ಷಿಗಳಿಗೆ ಆಹಾರದ ಖರ್ಚು ವೆಚ್ಚ ತೂಗಿಸಲು ಕಷ್ಟವಾಗಿತ್ತು.
ಎಂಆರ್‌ಪಿಎಲ್ ಸಂಸ್ಥೆ ಪ್ರಾಣಿಗಳನ್ನು ದತ್ತು ಪಡೆದ ಕಾರಣ ಸ್ವಲ್ಪ ಮಟ್ಟಿಗೆ ಖರ್ಚನ್ನು ಸುಧಾರಿಸಲಾಯಿತು. ಎಪ್ರಿಲ್‌ನಿಂದ ಪ್ರಾ ಧಿಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಿಸರ್ಗಧಾಮ ಮತ್ತಷ್ಟು ಹೊಸತನ ದೊಂದಿಗೆ ಕಾರ್ಯ ನಿರ್ವಹಿಸುವ ನಿರೀಕ್ಷೆ ಇದೆ.
-ಗೋಕುಲ್‌ದಾಸ್ ನಾಯಕ್, ಕಾರ್ಯನಿರ್ವಾಹಕ ನಿರ್ದೇಶಕರು, ಡಾ| ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ