Advertisement

ಟೆನಿಸ್‌ ವಾಲಿಬಾಲ್‌ಗೆ ಸೂಕ್ತ ಪ್ರೋತ್ಸಾಹದ ಕೊರತೆ

10:49 AM Apr 02, 2018 | |

ಬಜಪೆ: ಟೆನ್ನಿಸ್‌ವಾಲಿಬಾಲ್‌ ಪಂದ್ಯಾಟದಲ್ಲಿ ರಾಜ್ಯದ ಬಾಲಕ, ಬಾಲಕಿಯರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಆದರೆ ಈ ಕ್ರೀಡೆ ಇನ್ನೂ ಪದವಿ ಪೂರ್ವ ಕಾಲೇಜು ಮಟ್ಟಕ್ಕೆ ಮಾತ್ರ ಸೀಮಿತವಾಗಿದ್ದು, ಸೂಕ್ತ ಪ್ರೋತ್ಸಾಹವೂ ಲಭಿಸುತ್ತಿಲ್ಲ.

Advertisement

ಇತರ ರಾಜ್ಯಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಟ್ಟದಲ್ಲಿ ಈ ಪಂದ್ಯಾಟ ನಡೆಯುತ್ತಿದೆಯಾದರೂ ರಾಜ್ಯದಲ್ಲಿ ಪದವಿ ಪೂರ್ವ ಕಾಲೇಜಿನ ಮಟ್ಟಕ್ಕೆ (19ವಯೋಮಿತಿ) ಸೀಮಿತವಾಗಿದೆ. ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳು ಈ ಸ್ಪರ್ಧೆಯಿಂದ ವಂಚಿತರಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಜನಪ್ರಿಯ
ನಾಲ್ಕು ವರ್ಷಗಳಿಂದ ಸ್ಕೂಲ್‌ ಗೇಮ್‌ ಅಫ್‌ ಫೆಡರೇಶನ್‌ ಅಫ್‌ ಇಂಡಿಯಾ (ಎಸ್‌ಜಿಎಫ್‌ಐ ) ವತಿಯಿಂದ ರಾಷ್ಟ್ರಮಟ್ಟದಲ್ಲಿ ಈ ಸ್ಪರ್ಧೆಗಳು ಮೂರು ವಯೋಮಿತಿಯಲ್ಲಿ ನಡೆಯುತ್ತಿದೆ. ಮಹಾರಾಷ್ಟ್ರದ ಡಾ| ವೆಂಕಟೇಶ್‌ ವಾಗೇವಾಡ್‌ ಈ ಆಟದ ಸಂಸ್ಥಾಪಕರು. ಮಹಾರಾಷ್ಟ್ರದಲ್ಲಿ ಈ ಆಟ ಭಾರೀ ಜನಪ್ರಿಯತೆ ಗಳಿಸಿದೆ.

ಪ್ರೋತ್ಸಾಹ ಅಗತ್ಯ
ಈ ಪಂದ್ಯಾಟ ಪ್ರಾಥಮಿಕ, ಪ್ರೌಢ ವಿಭಾಗದಲ್ಲಿ ನಡೆದರೆ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಲಭಿಸಿದಂತಾಗುತ್ತದೆ. ರಾಜ್ಯದಲ್ಲಿ ಪದವಿ ಪೂರ್ವ ಕಾಲೇಜಿಗೆ ಮಾತ್ರ ಈ ಪಂದ್ಯ ಸೀಮಿತವಾದ ಕಾರಣ ತಂಡ ರಚನೆ ಕಷ್ಟವಾಗುತ್ತಿದೆ. ಈಗಾಗಲೇ ಈ ಪಂದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಲಾಗುತ್ತದೆ.ಮುಂದೇ ಒಲಂಪಿಕ್ಸ್‌ಗೂ ಬರಬಹುದು. ಈ ಬಗ್ಗೆ ಪ್ರಯತ್ನವೂ ಆಗುತ್ತಿದೆ. ಈ ಬಾರಿ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪ.ಪೂ.ಕಾಲೇಜು ತಂಡದ ಬಾಲಕಿಯರು ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದ ಪ್ರಥಮ ಪ್ರಶಸ್ತಿ ಗಳಿಸಿದ್ದಾರೆ. ಬಾಲಕರು ತೃತೀಯ ಸ್ಥಾನ ಪಡೆದಿದ್ದಾರೆ.

ಈ ಆಟದ ಕೋರ್ಟ್‌ಗಳು ಟೆನ್ನಿಸ್‌ ಕೋರ್ಟನ್ನು ಹೋಲುತ್ತದೆ. 16ಮೀಟರ್‌ ಉದ್ದ ಹಾಗೂ 8ಮೀಟರ್‌ ಅಗಲವಾದ ಈ
ಕೋರ್ಟ್‌ನ ಮಧ್ಯದಲ್ಲಿರುವ ನೆಟ್‌ ಸ್ಪಲ್ಪ ಎತ್ತರವಾಗಿದೆ. ಬಾಲ್‌ವಾಲಿಬಾಲ್‌ಗಿಂತ ಸಣ್ಣದು. 240-250 ಗ್ರಾಂ ತೂಕ, 60 ಸೆಂ. ಮೀ.ತ್ರಿಜ್ಯ ಇದೆ. ಆಟ ಮಾತ್ರ ವಾಲಿಬಾಲ್‌ಗೆ ಹೋಲಿಕೆಯಾಗಿದೆ. ಇದರಲ್ಲೂ ಸಿಂಗಲ್ಸ್‌, ಡಬಲ್ಸ್‌ ಪಂದ್ಯಗಳು ಇರುತ್ತದೆ. 6 ಅಟಗಾರರು ಬೇಕು,4 ಮಂದಿ ಆಟಗಾರರು ಆಡಲು ಅವಕಾಶ ಇದೆ.

Advertisement

ಜಿಲ್ಲೆಯಲ್ಲಿರುವ ಪ.ಪೂ. ಕಾಲೇಜು ತಂಡಗಳು
ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪದವಿ ಪೂರ್ವ ಕಾಲೇಜು, ಎಡಪದವು ಸ್ವಾಮಿ ವಿವೇಕಾನಂದ ಪದವಿ ಪೂ.
ರ್ವ ಕಾಲೇಜು, ಮಂಗಳೂರಿನ ಸೈಂಟ್‌ಅಲೋಶಿಯಸ್‌ ಪದವಿ ಪೂರ್ವ  ಕಾಲೇಜು, ಉಜಿರೆ ಎಸ್‌ಡಿಎಂ ಪದವಿ ಪೂರ್ವ ಕಾಲೇಜು, ವಾಮಂಜೂರಿನ ಸೈಂಟ್‌ ರೇಮಂಡ್ಸ್‌ ಪ.ಪೂ.ಕಾಲೇಜು, ತಾಳಿಪಾಡಿಯ ಪೊಂಪೈ ಪದವಿ ಪೂರ್ವ
ಕಾಲೇಜು, ಮೂಡಬಿದಿರೆಯ ಜೈನ್‌ ಪದವಿ ಪೂರ್ವ ಕಾಲೇಜು, ಮಹಾವೀರ ಪದವಿ ಪೂರ್ವ ಕಾಲೇಜು, ಕೈಕಂಬದ ರೋಸಾ ಮಿಸ್ತಿಕಾ ಪ.ಪೂ.ಕಾಲೇಜು ತಂಡಗಳಿವೆ.

ರಾಕೆಟ್‌ ಬದಲು ಬಾಲ್‌!
ಆಟಗಾರರು ಇದರಲ್ಲಿ ಚಲನವಲನಗಳ ಜತೆಗೆ ಫಿಟ್‌ನೆಸ್‌, ಬುದ್ದಿವಂತಿಕೆಯನ್ನು ಉಪಯೋಗಿಸಬೇಕಾಗಿದೆ. ಟೆನ್ನಿಸ್‌ ಆಡಲು ರಾಕೆಟ್‌ ಬದಲು ಇಲ್ಲಿ ಬಾಲ್‌ನ್ನು ಉಪಯೋಗಿಸಲಾಗುತ್ತದೆ. ಈ ಬಾಲ್‌ ಅನ್ನು ಕೂಡ ಮಹಾರಾಷ್ಟ್ರದಿಂದಲೇ ತರಲಾಗುತ್ತದೆ.  ಇಲ್ಲಿ ಇದರ ಮಾರಾಟ ಇಲ್ಲ ಎಂದು ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು ತಿಳಿಸಿದ್ದಾರೆ.

ತರಬೇತುದಾರರ ಕೊರತೆ
ಹೊಸ ಆಟದ ನಿಯಮ ಹಾಗೂ ತರಬೇತುದಾರರ ಕೊರತೆ ಇದೆ. ಜೂನ್‌ನಲ್ಲಿ ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸಭೆಯಲ್ಲಿ ಈ ಆಟದ ಬಗ್ಗೆ ಪ್ರಸ್ತಾವನೆ ಮಾಡುತ್ತೇನೆ.
 – ರಘುನಾಥ,
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ

ಸರಕಾರದ ಪ್ರೋತ್ಸಾಹ ಅಗತ್ಯ
ರಾಷ್ಟ್ರಮಟ್ಟದಲ್ಲಿ 19,17,14 ವಯೋಮಿತಿಯ ಪಂದ್ಯಗಳು ನಡೆಯುತ್ತಿರುವ ಕಾರಣ ರಾಜ್ಯ ಸರಕಾರವೂ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಈ ಪಂದ್ಯ ನಡೆಸಲು ಕ್ರಮತೆಗೆದುಕೊಳ್ಳಬೇಕು. ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳು ಈ ಪಂದ್ಯದಲ್ಲಿ ಮಿಂಚುವ ಕಾರಣ ಸರಕಾರ ಪ್ರೋತ್ಸಾಹ ನೀಡದರೆ ಒಳ್ಳೆಯದು.
– ನವೀನ್‌ ಕುಮಾರ್‌,
ದೈಹಿಕ ಶಿಕ್ಷಣ ಉಪನ್ಯಾಸಕ

ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next