Advertisement

ಭಾರತ-ಚೀನಾ ಗಡಿ ಸಂಘರ್ಷ: ಇಂದು ಸರ್ವಪಕ್ಷ ಸಭೆ, ತೀವ್ರ ಕುತೂಹಲ ಮೂಡಿಸಿದ ಪ್ರಧಾನಿ ಮೋದಿ ನಡೆ

01:09 PM Jun 19, 2020 | Mithun PG |

ನವದೆಹಲಿ: ಭಾರತ-ಚೀನಾ ಗಡಿ ಉದ್ವಿಗ್ನತೆಯ ಹಿನ್ನಲೇ ಪ್ರಧಾನಿ ಮೋದಿ ಇಂದು ಸರ್ವಪಕ್ಷಗಳ ಸಭೆ ಕರೆದಿದ್ದು 15 ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಭಾಗಿಯಾಗುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.

Advertisement

ಸಂಜೆ 5ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸರ್ವ ಪಕ್ಷಗಳ ನಾಯಕರ ಸಭೆ ನಡೆಯಲಿದ್ದು ಸದ್ಯದ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಯಲಿದೆ.  ಈಗಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಾಷ್ಟ್ರಪತಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಮುಖ್ಯಸ್ಥರಿಗೆ ಕರೆ ಮಾಡಿ ಸಭೆಯ ಉದ್ದೇಶದ ಬಗ್ಗೆ ತಿಳಿಸಿದ್ದಾರೆ.

ಈ ಸಭೆಯಲ್ಲಿ ಭಾರತದೊಂದಿಗೆ ಕಲಹಕ್ಕೆ ಮುಂದಾಗಿರುವ ಚೀನಾ ಬಗ್ಗೆ ಯಾವ ನಿಲುವು ಹೊಂದಬೇಕು ಎಂಬ ಕುರಿತಾಗಿ ಚರ್ಚೆ ನಡೆಸಲಾಗುತ್ತದೆ.

ಇಂದಿನ ಸಭೆಯಲ್ಲಿ ಕಾಂಗ್ರೆಸ್ ನಿಂದ  ಸೋನಿಯಾ ಗಾಂಧಿ, ಡಿಎಂಕೆ ಯಿಂದ ಸ್ಟ್ಯಾಲಿನ್, ಟಿಡಿಪಿ ಯಿಂದ ಚಂದ್ರಬಾಬು ನಾಯ್ಡು, ಆಂದ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ,  ಸಿಪಿಎಂ- ಸೀತಾರಾಮ್ ಯೆಚೂರಿ, ಸಿಪಿಐ- ಡಿ. ರಾಜ, ಅಕಾಲಿ ದಳ – ಸುಖ್ವೀರ್ ಸಿಂಗ್ ಬಾದಲ್, ಶಿವಸೇನೆ – ಉದ್ಧವ್ ಠಾಕ್ರೆ ಎಲ್ಜೆಪಿ- ಚಿರಾಗ್ ಪಾಸ್ವಾನ್, ತೃಣಮೂಲ ಕಾಂಗ್ರೆಸ್- ಮಮತಾ ಬ್ಯಾನರ್ಜಿ,ಎನ್‌ಸಿಪಿ- ಶರದ್ ಪವಾರ್, ಜೆಡಿಯು- ನಿತೀಶ್ ಕುಮಾರ್, ಸಮಾಜವಾದಿ ಪಕ್ಷ- ರಾಮ್ ಗೋಪಾಲ್ ಯಾದವ್, ಬಿಜೆಪಿ- ಜೆಪಿ ನಡ್ಡಾ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್, ಎಸ್ ಪಿ ಯಿಂದ ಅಖಿಲೇಶ್ ಯಾದವ್, ಜಾರ್ಖಂಡ್ ನಿಂದ ಹೇಮಂತ್ ಸೋರೆನ್, ಬಿಜೆಡಿಯಿಂದ ಪಿನಾಕಿ ಮಿಶ್ರಾ ಭಾಗಿಯಾಗಲಿದ್ದಾರೆ.

Advertisement

ಇದನ್ನೂ ಓದಿ: ಗಾಲ್ವಾನ್ ಘರ್ಷಣೆ: ಇಬ್ಬರು ಮೇಜರ್ ಸೇರಿದಂತೆ 10 ಭಾರತೀಯ ಯೋಧರನ್ನು ಬಿಡುಗಡೆ ಮಾಡಿದ ಚೀನಾ

ಆದರೆ ಸಭೆಗೆ ಮೊದಲೇ ಆಮ್ ಆದ್ಮಿ ಪಕ್ಷವನ್ನು ಆಹ್ವಾನಿಸಲಾಗಿಲ್ಲ ಎಂಬ ವಿವಾದ ಹುಟ್ಟಿಕೊಂಡಿದೆ. ಆದರೆ  ಐದಕ್ಕೂ ಹೆಚ್ಚು ಸಂಸದರನ್ನು ಹೊಂದಿರುವ ರಾಜಕೀಯ ಪಕ್ಷಗಳನ್ನು ಮಾತ್ರ ಆಹ್ವಾನಿಸಲಾಗಿದ್ದು,  ಎಎಪಿ ಸಂಸತ್ತಿನಲ್ಲಿ ನಾಲ್ಕು ಸಂಸದರನ್ನು ಮಾತ್ರ ಹೊಂದಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next