Advertisement

LAC; ಮಾಸಾಂತ್ಯಕ್ಕೆ ಚೀನ ಗಡಿಯಿಂದ ಸೇನೆ ವಾಪಸಾತಿ ಮುಕ್ತಾಯ!

01:21 AM Oct 26, 2024 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ನಡುವೆ ರಷ್ಯಾದ ಕಜಾನ್‌ನಲ್ಲಿ ನಡೆಸಲಾಗಿದ್ದ ದ್ವಿಪಕ್ಷೀಯ ಮಾತುಕತೆಯ ಬೆನ್ನಲ್ಲೇ ಗಡಿ ಪ್ರದೇಶದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸಿವೆ. ಬಿಕ್ಕಟ್ಟಿನಿಂದ ಕೂಡಿದ್ದ ಚೀನ ಗಡಿಯಿಂದ ಸೇನಾಪಡೆ ಯನ್ನು ಹಿಂಪಡೆಯಲು ಉಭಯ ದೇಶಗಳು ಒಪ್ಪಿಗೆ ಸೂಚಿಸಿವೆ. ಅ. 28, ಅ. 29ರ ಒಳಗಾಗಿ ಇದು ಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

Advertisement

ಇತ್ತೀಚಿಗಷ್ಟೇ 4 ವರ್ಷಗಳ ಸೇನಾ ಬಿಕ್ಕಟ್ಟಿಗೆ ಅಂತ್ಯ ಹಾಡುವ ಉದ್ದೇಶದಿಂದ ಪೂರ್ವ ಲಡಾಖ್‌ನ ವಾಸ್ತವ ಗಡಿ ರೇಖೆ(ಎಲ್‌ಎಸಿ)ಯ ಬಳಿ ಕೇವಲ ಗಸ್ತು ಮಾತ್ರ ನಡೆಸಲು ಉಭಯ ದೇಶಗಳು ಒಪ್ಪಂದ ಮಾಡಿಕೊಂಡಿದ್ದವು. ಅದರ ಮುಂದುವರಿದ ಭಾಗವಾಗಿ ಇದೀಗ ಸೇನೆಯನ್ನು ಹಿಂಪಡೆಯಲು ಆರಂಭಿಸಿವೆ.

2020ಕ್ಕೂ ಮೊದಲಿದ್ದ ಪ್ರದೇಶಕ್ಕೆ ಸೇನೆ: ಇದೀಗ ಉಭಯ ದೇಶಗಳ ನಡುವೆ ನಡೆದಿರುವ ಒಪ್ಪಂದದ ಪ್ರಕಾರ, ದೆಪ್ಸಾಂಗ್‌ ಮತ್ತು ಡೆಮಾcಕ್‌ ಪ್ರದೇಶಗಳಲ್ಲಿ ಬೀಡು ಬಿಟ್ಟಿರುವ ಸೇನಾಪಡೆಗಳು ಗಲ್ವಾನ್‌ ಬಿಕ್ಕಟ್ಟು ಆರಂಭವಾಗುವುದಕ್ಕೂ ಮೊದಲು ಇದ್ದ ಪ್ರದೇಶಗಳಿಗೆ ತೆರಳಲಿವೆ. ಚೀನದ ಸೇನೆ 18 ಕಿ.ಮೀ. ಹಿಂದಕ್ಕೆ ಸರಿಯಲಿದೆ. ಉಭಯ ದೇಶಗಳು ಒಮ್ಮೆ ತಮ್ಮ ಸೇನೆಯನ್ನು ಹಿಂದಕ್ಕೆ ಪಡೆದುಕೊಂಡ ಬಳಿಕ ಈ ಪ್ರದೇಶದಲ್ಲಿ ಮತ್ತೂಮ್ಮೆ ಗಸ್ತು ಆರಂಭವಾಗಲಿದೆ.

ಗಸ್ತು ಬಗ್ಗೆ ಮೊದಲೇ ಮಾಹಿತಿ ಕೊಡಬೇಕು: ಗಡಿ ಪ್ರದೇಶದಲ್ಲಿ ಉಂಟಾಗುವ ಸಮಸ್ಯೆಯ ಪ್ರಮಾಣವನ್ನು ತಗ್ಗಿಸಲು ಉಭಯ ದೇಶಗಳು ಮೊದಲೇ ತಮ್ಮ ಗಸ್ತಿನ ಬಗ್ಗೆ ಮಾಹಿತಿ ನೀಡಬೇಕು. ಅಲ್ಲದೇ ಪ್ರತೀ ಗಸ್ತು ತಂಡದಲ್ಲಿ 14-15 ಮಂದಿ ಮಾತ್ರ ಇರಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ. 2020ರಲ್ಲಿ ಭಾರತ ಸೇನೆ ಡೆಮಾcಕ್‌ ಮತ್ತು ದೆಪ್ಸಾಂಗ್‌ಗಳನ್ನು ನಿರ್ಮಾಣ ಮಾಡಿದ್ದ ಟೆಂಟ್‌ ಹಾಗೂ ಇತರ ಸೌಕರ್ಯಗಳನ್ನು ತೆರವು ಮಾಡುವ ಕೆಲಸವನ್ನು ಈಗಾಗಲೇ ಆರಂಭಿಸಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.

ಭಾರತ-ಬಾಂಗ್ಲಾ ಗಡಿ ಮಾತುಕತೆ ಮುಂದೂಡಿಕೆ
ಮುಂದಿನ ತಿಂಗಳು ಹೊಸದಿಲ್ಲಿಯಲ್ಲಿ ನಡೆಯಬೇಕಾಗಿದ್ದ ಭಾರತ-ಬಾಂಗ್ಲಾದೇಶ ಗಡಿ ಮಾತುಕತೆ ಮುಂದೂಡಲಾಗಿದೆ. ಶೇಖ್‌ ಹಸೀನಾ ಸರಕಾರದ ಪದಚ್ಯುತಿಯ ಬಳಿಕ ಮೊದಲ ಬಾರಿ, ಬಿಎಸ್‌ಎಫ್ ಮತ್ತು ಬಾರ್ಡರ್‌ ಗಾರ್ಡ್‌ ಬಾಂಗ್ಲಾದೇಶ್‌ ಮಹಾನಿರ್ದೇಶಕರ ನಡುವೆ ನ.18ರಿಂದ 22ರ ವರೆಗೆ ನಡೆಯಬೇಕಾಗಿತ್ತು. ನಿಯೋಜಿತ ದಿನಾಂಕಕ್ಕಿಂತಲೂ ಮೊದಲೇ ಸಭೆ ನಡೆಸಲು ಬಾಂಗ್ಲಾದೇಶ ಉದ್ದೇಶಿಸಿದ್ದು, ಈ ಬದಲಾವಣೆಗಾಗಿ ಬಾಂಗ್ಲಾ ಅಧಿಕಾರಿಗಳು ಭಾರತೀಯ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ.

Advertisement

ಉಭಯ ರಾಷ್ಟ್ರಗಳು 1975ರಿಂದ 1992ರ ವರೆಗೆ ವಾರ್ಷಿಕವಾಗಿ ಮತ್ತು 1993ರಿಂದ ದ್ವೆ„ವಾರ್ಷಿಕ ಮಾತುಕತೆಗಳನ್ನು ಹೊಸದಿಲ್ಲಿ ಅಥವಾ ಢಾಕಾದಲ್ಲಿ ನಡೆಸುತ್ತಾ ಬಂದಿವೆ.

 

Advertisement

Udayavani is now on Telegram. Click here to join our channel and stay updated with the latest news.

Next