ಧಾರವಾಡ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮತ್ತು ಸೌರ ವಿದ್ಯುತ್ ಆಧಾರಿತ ಪಂಪ್‌ಗ್ಳ ಪೂರೈಕೆಯಲ್ಲಿ ತೊಡಗಿಸಿಕೊಂಡಿರುವ ಬೆಂಗಳೂರು ಮೂಲದ ಮೆಕ್ವಿನ್ ಟೆಕ್ನಾಲಜೀಸ್ ಲಿ. ಬ್ಯಾಂಕಿನ ಆರ್ಥಿಕ ಸಹಾಯದ ಮೂಲಕ ಸೌರ ವಿದ್ಯುತ್ ಆಧಾರಿತ ಪಂಪ್‌ಗ್ಳನ್ನು ರೈತರಿಗೆ ಪರಿಚಯಿಸುವ ಉದ್ದೇಶಕ್ಕೆ ಸಂಬಂ ಧಿಸಿದಂತೆ ಶನಿವಾರ ಮಹತ್ವದ ಒಡಂಬಡಿಕೆಗೆ ಸಹಿ ಹಾಕಲಾಗಿದೆ.
ನಗರದ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ನಡೆದ ಒಡಂಬಡಿಕೆ ಕಾರ್ಯಕ್ರಮದಲ್ಲಿ ಬ್ಯಾಂಕ್ ಅಧ್ಯಕ್ಷ ಪಿ.ಗೋಪಿಕೃಷ್ಣ ಅವರ ಸಮ್ಮುಖದಲ್ಲಿ ಬ್ಯಾಂಕಿನ ಮಹಾಪ್ರಬಂಧಕ ಶ್ರೀನಿವಾಸ ರಾವ್ ಮತ್ತು ಮೆಕ್ವಿನ್ ಟೆಕ್ನಾಲಜೀಸ್‌ನ ಸಹ ಸಂಸ್ಥಾಪಕ ಮತ್ತು ನಿರ್ದೇಶಕ ಡಾ|ಶಿವಕುಮಾರ ಎಚ್.ಎಮ್ ಅವರು ಪರಸ್ಪರ ಸಹಿ ಮಾಡಿದರು.
ಈ ಒಡಂಬಡಿಕೆ ಹಸ್ತಾಂತರಿಸಿದ ಬಳಿಕ ಬ್ಯಾಂಕಿನ ಅಧ್ಯಕ್ಷ ಪಿ.ಗೋಪಿಕೃಷ್ಣ ಮಾತನಾಡಿ, ಕಳೆದ 25 ವರ್ಷಗಳಿಂದ ಸೆಲ್ಕೋ ಸಂಸ್ಥೆ ಸಹಯೋಗದಲ್ಲಿ ಸೌರ ವಿದ್ಯುತ್ ಅನುಷ್ಠಾನದಲ್ಲಿ ಬ್ಯಾಂಕ್ ಮಂಚೂಣಿಯಲ್ಲಿದೆ. ಸೌರ ವಿದ್ಯುತ್ ಕ್ಷೇತ್ರದಲ್ಲಿ ಉತ್ತೇಜಕರ ಸಂಶೋಧನೆಗಳಾಗಿದ್ದು, ರೈತ ಸ್ನೇಹಿ ಉಪಕರಣಗಳು ಹೊರ ಬಂದಿವೆ. ಅದರಲ್ಲೂ ನೀರಾವರಿ ಪಂಪ್‌ಗ್ಳು ಇತ್ತೀಚಿನ ಆವಿಷ್ಕಾರವಾಗಿದ್ದು, ಸೌರ ವಿದ್ಯುತ್‌ನ ಮೇಲೆ ರೈತರೇ ನೇರವಾದ ನಿಯಂತ್ರಣ ಹೊಂದುವಂತಾಗುತ್ತದೆ ಎಂದರು.
ಆರಂಭದಲ್ಲಿ ಬೆಲೆ ತುಸು ಹೆಚ್ಚಳವಾದಂತೆ ಕಂಡರೂ ಆ ಸಲಕರಣೆಗಳು 20 ರಿಂದ 25 ವರ್ಷಗಳ ಅವಧಿವರೆಗೂ ಬಾಳಿಕೆ ಬರುವುದರಿಂದ ವರ್ಷ ಕಳೆದಂತೆ ಅಗ್ಗದ ಮಾಧ್ಯಮವಾಗಬಲ್ಲದು. ಡಿಸೇಲ್ ಬಳಕೆಯ ಪಂಪ್‌ಗ್ಳೂ ಸಾಕಷ್ಟು ಸಂಖ್ಯೆಯಲ್ಲಿರುವುದರಿಂದ ಅವುಗಳನ್ನು ಸೌರ ವಿದ್ಯುತ್ ಪಂಪ್‌ಗ್ಳಿಗೆ ಬದಲಿಸಿದರೆ ವಾತಾವರಣಕ್ಕೆ ಕಾರ್ಬನ್ ಸೇರಿಸುವುದನ್ನು ಗಣನೀಯವಾಗಿ ಕಡಿಮೆ ಮಾಡಿದಂತಾಗುತ್ತದೆ.
ಮೆಕ್ವಿನ್ ಟೆಕ್ನಾಲಜೀಸ್ ಲಿ.ಸೌರ ವಿದ್ಯುತ್ ನೀರಾವರಿ ಪಂಪ್‌ಗ್ಳ ಉತ್ಪಾದನೆ ಹಾಗೂ ನಿರ್ವಹಣೆಯಲ್ಲಿ ಪ್ರಾವೀಣ್ಯತೆ ಹೊಂದಿರುವುದರಿಂದ ಹಾಗೆಯೇ ತಮ್ಮ ಬ್ಯಾಂಕ್ ಗ್ರಾಮೀಣ ಭಾಗದಲ್ಲೇ ಅತಿ ಹೆಚ್ಚು ಶಾಖೆಗಳನ್ನು ಹೊಂದಿರುವುದರಿಂದ ರೈತ ಬಾಂಧವರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು. ಮೆಕ್ವಿನ್ ಟೆಕ್ನಾಲಜೀಸ್‌ನ ಸಹ ಸಂಸ್ಥಾಪಕ ಹಾಗೂ ನಿರ್ದೇಶಕ ಡಾ|ಶಿವಕುಮಾರ ಎಚ್. ಎಮ್. ಮಾತನಾಡಿ, ಮೆಕ್ವಿನ್ ಸೋಲಾರ್ ಪಂಪ್ ಜನಪ್ರಿಯಗೊಳ್ಳುತ್ತಲಿದ್ದು, ಈಗಾಗಲೇ 15 ಸಾವಿರಕ್ಕೂ ಹೆಚ್ಚಿನ ಸಂತೃಪ್ತ ರೈತರು ರಾಜ್ಯಾದ್ಯಂತ ಇರುವರು. ಮೆಕ್ವಿನ್ ಟೆಕ್ನಾಲಜೀಸ್ ಬೆಂಗಳೂರು ಮೂಲದ್ದಾದರೂ 25 ಕ್ಕೂ ಹೆಚ್ಚಿನ ರಾಜ್ಯ ಮತ್ತು 18 ದೇಶಗಳಲ್ಲಿ ಸೇವಾ ಜಾಲ ವಿಸ್ತರಿಸಿದೆ ಎಂದರು.
1ಎಚ್‌ಪಿಯಿಂದ 50 ಎಚ್‌ಪಿಯವರೆಗೂ ಪಂಪ್ ಗಳು ಲಭ್ಯವಿದ್ದು, ಕೊಳವೆ ಬಾವಿ, ತೆರೆದ ಬಾವಿ ಮತ್ತು ಇನ್ನಿತರೆ ನೀರಾವರಿ ಯೋಜನೆಗಳಿಗೆ ಸೂಕ್ತವಾಗಿದೆ. ಹನಿ ನೀರಾವರಿ, ತುಂತುರು ನೀರಾವರಿಗಳಿಗೂ ಈ ತಂತ್ರಜ್ಞಾನ ಅಳವಡಿಸಬಹುದು. ಇವುಗಳು ಇಂಧನ-ನಿರ್ವಹಣಾ ವೆಚ್ಚ ರಹಿತ ಪಂಪ್‌ಗ್ಳಾಗಿ ರುವುದರಿಂದ ರೈತರು ದೀರ್ಘಾವ ಧಿಯಲ್ಲಿ ವೆಚ್ಚರಹಿತ ನೀರಾವರಿ ಕೈಗೊಳ್ಳಬಹುದಾಗಿದೆ ಎಂದರು. ಬ್ಯಾಂಕ್‌ನ ಮಹಾಪ್ರಬಂಧಕ ಬಿ.ಸಿ.ರವಿಚಂದ್ರ, ಮೆಕ್ವಿನ್ ಟೆಕ್ನಾಲಜೀಸ್‌ನ ಇನ್ನೋರ್ವ ಸಹ ಸಂಸ್ಥಾಪಕಿ ಮತ್ತು ನಿರ್ದೇಶಕಿ ಆಶಾರಾಣಿ , ಬ್ಯಾಂಕ್‌ನ ಸಾಲಗಳ ವಿಭಾಗದ ಮುಖ್ಯ ಪ್ರಬಂಧಕ ವಿಶ್ವೇಶ್ವರ ಯಾಜಿ, ಮಾರುಕಟ್ಟೆ ಮುಖ್ಯ ಪ್ರಬಂಧಕ ಉಲ್ಲಾಸ ಗುನಗಾ ಇದ್ದರು.