ಕೆ.ವಿ. ಅಕ್ಷರ ರಚನೆಯ ಅಪರೂಪದ ಪರಿಕಲ್ಪನೆ ಎನ್ನುವಂಥ ನಾಟಕ, “ಭಾರತ ಯಾತ್ರೆ’ ಇದೀಗ ರಂಗದ ಮೇಲೆ ಪ್ರಯೋಗಗೊಳ್ಳುತ್ತಿದೆ. ಇದು ಭಾರತ ಯಾತ್ರೆ ಮಾತ್ರವೇ ಅಲ್ಲ, ಭಾರತದ ಅಷ್ಟೂ ಸಂಸ್ಕೃತಿಯ ಜೀವಾಳವನ್ನು ಇಲ್ಲಿ ಕಟ್ಟಿಕೊಡಲಾಗುತ್ತಿದೆ. ದಕ್ಷಿಣ ಭಾರತದಿಂದ ಉತ್ತರದ ಭಾರತದ ವರೆಗೆ ರಾಮಕೃಷ್ಣ ಜೋಯಿಸ್ ನಡೆಸುವ ಯಾತ್ರೆಯ ಅನುಭವ ಈ ನಾಟಕದ ಹೂರಣ. ಈ ಯಾತ್ರೆಯಲ್ಲಿ ಎದುರಾದ ಪ್ರಶ್ನೆಯನ್ನು ನಂತರದಲ್ಲಿ ಬದರಿನಾಥನ ಮುಂದಿಡುವ ಜೋಯಿಸರ ಕತೆಯೇ “ಭಾರತ ಯಾತ್ರೆ’. ವಸುಕೇಶನ್ ನಿರ್ದೇಶನದ ಈ ನಾಟಕದಲ್ಲಿ ಅನಿಲ್ ಕುಲಕರ್ಣಿ, ಶಾಂತಿರಾವ್ ಅಭಿನಯಿಸುತ್ತಿದ್ದಾರೆ.
ಯಾವಾಗ?: ಜ.20, ಶನಿವಾರ, ಸಂ.7
ಎಲ್ಲಿ?: ಕೆ.ಎಚ್. ಕಲಾಸೌಧ, ಹನುಮಂತ ನಗರ
ಪ್ರವೇಶ: 100 ರೂ.
ಟಿಕೆಟ್‌ಗೆ: bookmyshow.com