Advertisement

ಕುವೈತ್‌, ಕತಾರ್‌ಗೆ ವಿದೇಶಾಂಗ ಸಚಿವರ ಪ್ರವಾಸ: ಕೊಲ್ಲಿ ರಾಷ್ಟ್ರಗಳ ಸ್ನೇಹಕ್ಕೆ ಇನ್ನಷ್ಟು ಬಲ

10:26 PM Dec 06, 2020 | sudhir |

ನವದೆಹಲಿ: ಒಂದುಕಡೆ ವಿಶ್ವಮಟ್ಟದಲ್ಲಿ ಪಾಕಿಸ್ತಾನವನ್ನು ಏಕಾಂಗಿ ಮಾಡುತ್ತಲೇ ಸಾಗಿರುವ ಭಾರತ, ಇನ್ನೊಂದು ಕಡೆ ಕೊಲ್ಲಿ ರಾಷ್ಟ್ರಗಳೊಂದಿಗಿನ ಸ್ನೇಹವನ್ನು ಇನ್ನಷ್ಟು ಬಲಗೊಳಿಸುವ ದಿಕ್ಕಿನಲ್ಲಿ ಮುನ್ನುಗ್ಗಿದೆ. ಇದೇ ನಿಟ್ಟಿನಲ್ಲಿ ಈ ಮಾಸಾಂತ್ಯದಲ್ಲಿ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಕುವೈತ್‌ ಮತ್ತು ಕತಾರ್‌ಗೆ ತೆರಳಲಿದ್ದಾರೆ. ಸಹಾಯಕ ವಿದೇಶಾಂಗ ಸಚಿವರಾದ ವಿ.ಮುರಳೀಧರನ್‌ ಒಮಾನ್‌ಗೆ ಹೋಗಲಿದ್ದಾರೆ. ಇದೇ ವೇಳೆ ಭೂಸೇನಾ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ ಯುಎಇ ಮತ್ತು ಸೌದಿ ಅರೇಬಿಯ ಪ್ರವಾಸ ಕೈಗೊಳ್ಳಲಿದ್ದಾರೆ.

Advertisement

ಈ ಭೇಟಿಯ ನಿಖರ ಉದ್ದೇಶ ಇನ್ನೂ ಬಹಿರಂಗವಾಗಿಲ್ಲ. ಆದರೆ ಕೊಲ್ಲಿ ರಾಷ್ಟ್ರಗಳಲ್ಲಿ ಕೊರೊನಾಪೂರ್ವ ಕೆಲಸ ಮಾಡುತ್ತಿದ್ದ ಭಾರತೀಯರ ಹಿತ ಕಾಪಾಡುವ ಉದ್ದೇಶವಿದೆ ಎನ್ನಲಾಗಿದೆ. ಕೊರೊನಾ ಶುರುವಾದ ನಂತರ ದೊಡ್ಡ ಪ್ರಮಾಣದಲ್ಲಿ ಭಾರತೀಯರು ದೇಶಕ್ಕೆ ಮರಳಿದ್ದರು. ಅವರನ್ನೆಲ್ಲ ಮರಳಿ ಕರೆಸಿಕೊಳ್ಳಿ ಎಂದು ಜೈಶಂಕರ್‌ ಒತ್ತಾಯಿಸುವ ಸಾಧ್ಯತೆಯಿದೆ. ವಿದೇಶದಲ್ಲಿ ವಾಸ ಮಾಡುತ್ತಿರುವ ಒಟ್ಟು ಭಾರತೀಯರ ಪೈಕಿ ಶೇ.70ರಷ್ಟು ಮಂದಿ, ಆರು ಪಶ್ಚಿಮ ಏಷ್ಯಾರಾಷ್ಟ್ರಗಳಾದ ಯುಎಇ, ಸೌದಿ ಅರೇಬಿಯ, ಕುವೈಟ್‌, ಒಮಾನ್‌, ಕತಾರ್‌, ಬಹ್ರೈನ್‌ನಲ್ಲಿಯೇ ಇದ್ದಾರೆನ್ನುವುದು ಗಮನಾರ್ಹ.

ಇದನ್ನೂ ಓದಿ:ಚಿಕ್ಕಬಳ್ಳಾಪುರ ಜಿಲ್ಲೆಯ 5ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳಿಸುವುದೇ ಗುರಿ: ಡಾ.ಕೆ.ಸುಧಾಕರ್

Advertisement

Udayavani is now on Telegram. Click here to join our channel and stay updated with the latest news.

Next