Advertisement

‘ಕುವೆಂಪು ವಿಶ್ವ ಮಾನವರಾಗಿ ಬದುಕಿದವರು’

10:29 AM Dec 30, 2017 | |

ಬಂಟ್ಸ್‌ಹಾಸ್ಟೆಲ್ : ಕುವೆಂಪು ಅವರು ಜಾತ್ಯತೀತ ರಾಷ್ಟ್ರದ ಬದಲಾಗಿ ಸಮನ್ವಯ ರಾಷ್ಟ್ರದ ಪರಿಕಲ್ಪನೆಯನ್ನು ಹೊಂದಿದ್ದರು. ಸಮಾಜದಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎಂದು ಹೇಳಿದ ಅವರು ವಿಶ್ವ ಮಾನವನಾಗಿ ಬದುಕಿದವರು ಎಂದು ಮಂಗಳೂರು ವಿವಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಧನಂಜಯ ಕುಂಬ್ಲೆ ಹೇಳಿದರು. ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ‘ವಿಶ್ವ ಮಾನವ ದಿನಾಚರಣೆ’ಯಲ್ಲಿ ಅವರು ಶುಕ್ರವಾರ ಉಪನ್ಯಾಸ ನೀಡಿದರು.

Advertisement

ಯಾವ ಧರ್ಮ, ಜಾತಿಯಲ್ಲಿ ಬಂಧಿಯಾಗದೆ, ವಿಶ್ವದ ಮಾನವರೇ ತನ್ನ ಬಂಧುಗಳೆಂದು ತಿಳಿದು ಬದುಕಿದ ಮಹಾನ್‌ ವ್ಯಕ್ತಿ ಕವಿ ಕುವೆಂಪು. ನಮ್ಮ ಪರಂಪರೆಯು ವ್ಯಕ್ತಿ ಆರಾಧನೆಯದ್ದಲ್ಲ; ಮೌಲ್ಯ, ವ್ಯಕ್ತಿ ನೀಡಿದ ಉತ್ತಮ ಅಂಶಗಳನ್ನು ಆರಾಧಿಸುವ ಸಂಸ್ಕೃತಿ ನಮ್ಮದು. ಅದಕ್ಕಾಗಿಯೇ ಕುವೆಂಪು ಜನ್ಮ ದಿನವನ್ನು ವಿಶ್ವ ಮಾನವ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕುವೆಂಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಗಳ ಸಂಚಾಲಕ ಬೆಳ್ಳಿಪ್ಪಾಡಿ
ಕೃಷ್ಣ ಪ್ರಸಾದ್‌ ರೈ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಡಾ| ಕಿಶೋರ್‌ ಕುಮಾರ್‌ ರೈ ಶೇಣಿ, ಪದವಿ ಕಾಲೇಜು ಪ್ರಾಂಶುಪಾಲ ಶ್ರೀಕರ್‌, ಉಪನ್ಯಾಸಕರಾದ ಧನ್‌ರಾಜ್‌, ಯಶೋದಾ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಬಿ. ಸ್ವಾಗತಿಸಿದರು. ಉಮೇಶ ಕೆ. ಆರ್‌. ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next