Advertisement

ಕುಟ್ಟಿ ಬಜಕೂಡ್ಲು ಅವರಿಗೆ ಜಾನಪದ ಲೋಕ ಪ್ರಶಸ್ತಿ ಪ್ರದಾನ

01:00 AM Feb 20, 2019 | Team Udayavani |

ಬದಿಯಡ್ಕ: ಬೆಂಗಳೂರಿನ ರಾಮನಗರದಲ್ಲಿ ನಡೆದ ಕರ್ನಾಟಕ ಜಾನಪದ ಪರಿಷತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಪ್ರವಾಸಿ ಜಾನಪದ ಲೋಕೋತ್ಸವ-2019 ಕಾರ್ಯಕ್ರಮದಲ್ಲಿ ದೆ„ವ ಪಾತ್ರಿ ಕುಟ್ಟಿ ಬಜಕೂಡ್ಲು ಇವರಿಗೆ ಜಾನಪದ ಲೋಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಆದಿಚುಂಚನಗಿರಿ ಮಹಾಸಂಸ್ಥಾನಂನ ಪೀಠಾಧ್ಯಕ್ಷರಾದ ಪ.ಪೂ.ಜಗದ್ಗುರು ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಕೆ.ಎಲ್‌.ಮಂಜುನಾಥ ಪ್ರಶಸ್ತಿ ಪ್ರದಾನ ಮಾಡಿದರು.

Advertisement

ಆದಿಚುಂಚನಗಿರಿ ಮಠದ ಶಾಖಾಧೀಶರಾದ ಅನ್ನದಾನೇಶ್ವರ ಸ್ವಾಮೀಜಿ, ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಡಿ. ತಿಮ್ಮೇಗೌಡ ಐಎಎಸ್‌ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಕೆ.ಎಂ. ಜಾನಕಿ ಐಎಎಸ್‌, ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ, ಕಾರ್ಯದರ್ಶಿ ಆ. ದೇವೇಗೌಡ, ಕಾರ್ಯಕಾರಿಣಿ ಸದಸ್ಯ ಜಯಪ್ರಕಾಶ್‌ ಗೌಡ, ಮ್ಯಾನೇಜಿಂಗ್‌ ಟ್ರಸ್ಟಿ ಆದಿತ್ಯ ನಂಜರಾಜ್‌ ಮೊದಲಾದವರು ಉಪಸ್ಥಿತರಿದ್ದರು. ದೆ„ವನರ್ತಕನಾಗಿ ಗುರುತಿಸಲ್ಪಟ್ಟಿರುವ ಕುಟ್ಟಿ ಬಜಕೂಡ್ಲು ದೆ„ಪಾತ್ರಿಯಾಗಿ ಇಳಿವಯಸ್ಸಿನಲ್ಲಿಯೂ ದೆ„ವಸೇವೆ ಮಾಡುತ್ತಿದ್ದಾರೆ. ಮಾತ್ರವಲ್ಲದೆ ನಾಟಿ ವೈದ್ಯರಾಗಿಯೂ ಜನರಿಗೆ ನೆರವಾಗುತ್ತಿದ್ದಾರೆ. ಅವರ ನಿಷ್ಠಾವಂತ ಸೇವೆಗೆ ಸಂದ ಗೌರವ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next