Advertisement
ಯುವತಿ ಪ್ರಿಯತಮನೊಂದಿಗೆ ಪರಾರಿಯಾಗಿರುವುದಾಗಿ ಸೂಚನೆಯಿದೆ. ಘಟನೆಗೆ ಸಂಬಂಧಿಸಿ ತಂದೆ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ನ. 25ರಂದು ಸಂಜೆ ಕಯ್ನಾರು ಶಾಂತಿಯೋಡು ನಿವಾಸಿ ಯುವತಿ ಕಾರಿನೊಂದಿಗೆ ಪರಾರಿಯಾಗಿದ್ದಾಳೆ. ಈಕೆಗೆ ಈ ಹಿಂದೆ ಓರ್ವ ಯುವಕನೊಂದಿಗೆ ಪ್ರೇಮವಿತ್ತೆನ್ನಲಾಗಿದೆ. ಈ ಮಧ್ಯೆ ಈಕೆಯನ್ನು ಬೇರೊಬ್ಬ ಯುವಕನೊಂದಿಗೆ ವಿವಾಹ ಮಾಡಿಸಲಾಗಿತ್ತು. ಆದರೆ ವಿವಾಹ ನಡೆದು ಎರಡು ತಿಂಗಳೊಳಗೆ ಆ ಸಂಬಂಧ ಮುರಿದು ಬಿದ್ದಿತ್ತು. ಅದರ ಬೆನ್ನಲ್ಲೇ ಯುವತಿ ಒಮ್ಮೆ ನಾಪತ್ತೆಯಾಗಿ ಮರುದಿನ ಮನೆಗೆ ವಾಪಸಾಗಿದ್ದಳು. ಯುವತಿಯನ್ನು ಬೇರೊಬ್ಬ ಯುವಕನೊಂದಿಗೆ ವಿವಾಹ ಮಾಡಿಸಲು ಮನೆಯವರು ಆಲೋಚಿಸುತ್ತಿರುವಂತೆಯೇ ಯುವತಿ ತಂದೆ, ತಾಯಿಯನ್ನು ಕೊಠಡಿಯಲ್ಲಿ ಕೂಡಿ ಹಾಕಿದ ಬಳಿಕ ಪರಾರಿಯಾಗಿದ್ದಾಳೆಂದು ಪೊಲೀಸರಿಗೆ ತಿಳಿಸಲಾಗಿದೆ. Advertisement
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
07:47 PM Nov 26, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.