Advertisement

Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು

10:24 PM Nov 19, 2024 | Team Udayavani |

ಚಿತ್ರದುರ್ಗ: ಮನೆಯ ಯಜಮಾನನ ಸಾವಿನಿಂದ ಆಘಾತಕ್ಕೊಳಗಾದ ಪತ್ನಿ ಮತ್ತು ಮಗಳು ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು 14 ದಿನಗಳ ಅನಂತರ ಕೊಳೆತ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ.

Advertisement

ಹೊಳಲ್ಕೆರೆ ತಾಲೂಕು ಚಿಕ್ಕಂದವಾಡಿ ಗ್ರಾಮದ ಪುಷ್ಪಾ (55), ಲಾವಣ್ಯ (17) ಮೃತಪಟ್ಟವರು. ಪುಷ್ಪಾ ಅವರ ಪತಿ ಬಸವರಾಜಪ್ಪ 6 ತಿಂಗಳ ಹಿಂದೆ ಹೃದಯಘಾತದಿಂದ ಮೃತಪಟ್ಟಿದ್ದರು. ಇದರಿಂದ ಅಮ್ಮ-ಮಗಳು ಮಾನಸಿಕವಾಗಿ ನೊಂದಿದ್ದರು.

ಮೃತರ ಸಂಬಂಧಿ ಯೊಬ್ಬರು ಗ್ರಾಮದ ಪರಿಚಯಸ್ಥರಿಗೆ ಕರೆ ಮಾಡಿ ಪುಷ್ಪಾ, ಲಾವಣ್ಯಳ ಮೊಬೈಲ್‌ ಸ್ವಿಚ್‌x ಆಫ್ ಆಗಿವೆ, ಏನಾಗಿದೆ ಎಂದು ವಿಚಾರಿಸುವಂತೆ ಕೋರಿದ್ದರು. ಅವರು ಬಂದು ನೋಡಿದಾಗ ಮನೆಗೆ ಬೀಗ ಹಾಕಲಾಗಿದ್ದು, ಒಳಗಿನಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ತಿಳಿಸಿದರು. ಸಂಬಂಧಿಕರ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next