Advertisement

ಕುತ್ತಿಕೋಲ್‌ ಅಕ್ಷರ ಪ್ರಿಂಟರ್ಸ್‌ ಮಹಿಳೆಯರ ಯಶೋಗಾಥೆ

01:00 AM Jan 31, 2019 | Harsha Rao |

ಕಾಸರಗೋಡು: ಆತ್ಮವಿಶ್ವಾಸ ಸಹಿತ ಅಪಾರ ದುಡಿಮೆಯೊಂದಿಗೆ ಮಹಿಳೆ ಯರಿಗೆ ಸ್ವಾವಲಂಬಿ ಬದುಕು ನೀಡುವ ಮೂಲಕ ಕುತ್ತಿಕೋಲ್‌ನ ಅಕ್ಷರ ಪ್ರಿಂಟರ್ಸ್‌ ಸಂಸ್ಥೆ ನಾಡಿಗೆ ಮಾದರಿಯಾಗಿದೆ.

Advertisement

ನೆರೆಕೂಟಗಳ ಸಂಸ್ಥೆ: ಮಹಿಳೆಯರ ಸ್ವಸಹಾಯ ಸಂಘಗಳಾಗಿರುವ ನೆರೆಕೂಟ ಗಳ ಮೂಲಕ ಸದಸ್ಯೆಯರನ್ನು (ಒಂದು ನೆರೆಕೂಟದಿಂದ ತಲಾ ಹತ್ತು ಮಂದಿಯಂತೆ) ಆಯ್ಕೆ ಮಾಡಿ ಆರಂಭಿಸಲಾದ ಸಂಸ್ಥೆ ಆರೇ ವರ್ಷಗಳಲ್ಲಿ ಯಶೋಗಾಥೆ ರಚಿಸಿ ಇತರರಿಗೆ ಪ್ರೇರಣೆಯಾಗಿದೆ. ಹೆಚ್ಚುವರಿ ಶಿಕ್ಷಣಾರ್ಹತೆಯಿಲ್ಲದ, ಗ್ರಾಮೀಣ ಹೆಣ್ಣುಮಕ್ಕಳು ಸಮಾಜದಲ್ಲಿ ತಲೆಎತ್ತಿ ಬಾಳುವುದಕ್ಕೆ ಮತ್ತು ತಂತ್ರ ವಿಜ್ಞಾನ ಮೂಲಕ ಅನುಭವದ ಪಾಠ ಕಲಿಯುವುದಕ್ಕೆ ಈ ಸಂಸ್ಥೆ ಅನುವು ಮಾಡಿಕೊಟ್ಟಿದೆ. ಜತೆಗೆ ಉತ್ತಮ ಆದಾಯವನ್ನೂ ಒದಗಿಸುತ್ತಿದೆ.

ಕುಟುಂಬಶ್ರೀ ಬೆಂಬಲ: ಕುತ್ತಿಕೋಲ್‌ ಗ್ರಾಮ ಪಂಚಾಯತ್‌ ಆಡಳಿತೆ ಸಮಿತಿಯ ನೇತೃತ್ವದಲ್ಲಿ ಮಹಿಳೆಯರಿಗಾಗಿ ಸ್ವಂತ ಆದಾಯ ಕಂಡುಕೊಳ್ಳುವ ಉದ್ದೇಶ ದೊಂದಿಗೆ ಯೋಜನೆಯೊಂದನ್ನು ಜಾರಿ ಗೊಳಿಸಲು ನಿರ್ಧರಿಸಲಾಗಿತ್ತು. ಇದರ ಅಂಗವಾಗಿ ಅರ್ಜಿ ಆಹ್ವಾನಿಸಿ, ಸಂದರ್ಶನವನ್ನೂ ನಡೆಸಲಾಗಿತ್ತು. ಇದಕ್ಕೆ ಕುಟುಂಬಶ್ರೀಯ ಪೂರ್ಣ ಬೆಂಬಲವೂ ಲಭಿಸಿತ್ತು. ಆರಂಭದ ಹಂತದಲ್ಲಿ ಮುದ್ರಣಾಲಯಕ್ಕೆ ಬೇಕಾದ ಯಂತ್ರ ಸಹಿತ ಸಾಮಗ್ರಿಗಳನ್ನು ಕುತ್ತಿಕೋಲ್‌ ಗ್ರಾ. ಪಂ. ವತಿಯಿಂದಲೇ ಒದಗಿಸಲಾಗಿತ್ತು. ಅನಂತರ ಕುತ್ತಿಕೋಲ್‌ ಸೇವಾ ಸಹಕಾರಿ ಬ್ಯಾಂಕ್‌ನಿಂದ 5 ಲಕ್ಷ ರೂ. ಸಾಲ ಪಡೆದು ವ್ಯವಸ್ಥೆ ಮಾಡಲಾಗಿತ್ತು.

ಆರಂಭದ ಹಂತದಲ್ಲಿ 50 ಸಾವಿರ ರೂ.ನ ಕಾಯಕಗಳು ಈ ಮುದ್ರಣಾಲಯಕ್ಕೆ ಸಿಗುತ್ತಿದ್ದರೆ ಇಂದು ಲಕ್ಷಾಂತರ ರೂ.ನ ಕಾಯಕಗಳು ನಡೆಯುತ್ತಿವೆ. ಪ್ರತಿ ಸದಸ್ಯೆಗೆ 6 ಸಾವಿರ ರೂ.ಗೂ ಅಧಿಕ ವೇತನ ದೊರೆಯುತ್ತಿದೆ. ಸಂಸ್ಥೆಯ ಕಾಯಕದಲ್ಲಿ ತಮಗೆ ತೃಪ್ತಿಯಿದೆ ಎಂದು ಸಂಸ್ಥೆಯ ಸದಸ್ಯೆಯರು ಅಭಿಪ್ರಾಯಪಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next