ಶಿರ್ವ: ಶಿರ್ವದ ಹಿರಿಯ ಸಾಮಾಜಿಕ ಧುರೀಣ ದಿ|ಗಂಗೆಜಾರ್ ಕುಟ್ಟಿ ಶೆಟ್ಟಿಯವರ ಸ್ಮರಣಾರ್ಥ ಅವರ ಅಭಿಮಾನಿಗಳು ದಾನಿಗಳ ನೆರವಿನಿಂದ ನಿರ್ಮಿಸಿದ ದಿ| ಕುಟ್ಟಿ ಶೆಟ್ಟಿ ಸ್ಮಾರಕ ವೃತ್ತವು ನ. 18 ರಂದು ಶಿರ್ವದಲ್ಲಿ ಉದ್ಘಾಟನೆಗೊಂಡಿತು.
ಗಣ್ಯರು,ದಾನಿಗಳು ಮತ್ತು ಕುಟುಂಬಸ್ಥರ ಉಪಸ್ಥಿತಿಯಲ್ಲಿ ದಿ| ಕುಟ್ಟಿ ಶೆಟ್ಟಿಯವರ ಪತ್ನಿ ಸುನಂದಾ ಶೆಟ್ಟಿಯವರು ಸರ್ಕಲ್‌ನ್ನು ಉದ್ಘಾಟಿಸಿದರು. ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಆಗಮ ವಿದ್ವಾಂಸ ಕುತ್ಯಾರು ಕೇಂಜ ಶ್ರೀಧರ ತಂತ್ರಿ ದೀಪ ಬೆಳಗಿಸಿ ಶುಭ ಹಾರೈಸಿದರು.
ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ ಸಾಮಾಜಿಕ,ಶೈಕ್ಷಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಮಂಚೂಯಲ್ಲಿದ್ದ ದಿ| ಕುಟ್ಟಿ ಶೆಟ್ಟಿಯವರು ಶಿರ್ವ ಗ್ರಾಮದ ಅಭಿವೃದ್ಧಿಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದ್ದರು. ಅಭಿಮಾನಿಗಳು ಅವರ ಸವಿನೆನಪಿಗಾಗಿ ನಿರ್ಮಿಸಿದ ವೃತ್ತವು ಅವರ ಸಾಮಾಜಿಕ ಕಳಕಳಿಗೆ ಗೌರವ ನೀಡುವಂತಾಗಿದ್ದು, ಶಿರ್ವ ಪೇಟೆಯ ಅಭಿವೃದ್ಧಿ ಕಾರ್ಯಗಳಿಗೆ ಮುಕುಟಪ್ರಾಯವಾಗಿದೆ ಎಂದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ ಜನರೊಂದಿಗೆ ಹುಮ್ಮಸ್ಸಿನಿಂದ ಬೆರೆಯುವ ಶ್ರೀಮಂತ ವ್ಯಕ್ತಿತ್ವದ ದಿ|ಕುಟ್ಟಿ ಶೆಟ್ಟಿಯವರ ನೆನಪು ಪೇಟೆಯ ಹೃದಯ ಭಾಗದಲ್ಲಿ ಶಾಶ್ವತವಾಗಿ ನೆಲೆಸುವಂತಾಗಲಿ ಎಂದರು. ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್. ಪಾಟ್ಕರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹತೋಭಾರ ಶಿರ್ವಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶಿರ್ವ ರಘುಪತಿ ಗುಂಡು ಭಟ್ ಹಾಗೂ ಶಿರ್ವ ಶ್ರೀನಿವಾಸ ಭಟ್,ಹಿರಿಯರಾದ ಅಟ್ಟಿಂಜೆ ಶಂಭು ಶೆಟ್ಟಿ, ಗಣೇಶ್ ಶೆಟ್ಟಿ ಕೇಂಜ, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ,ಕೇಂಜ ಸಾಯಿನಾಥ ಶೆಟ್ಟಿ, ರತನ್ ಶೆಟ್ಟಿ, ಪ್ರಶಾಂತ ಶೆಟ್ಟಿ ಸೂಡ, ಸಚ್ಚಿದಾನಂದ ಹೆಗ್ಡೆ ಸೊರ್ಕಳ,ಪಿಲಾರು ಗಂಗಾಧರ ಶೆಟ್ಟಿ ,ಶಿರ್ವ ನಡಿಬೆಟ್ಟು ನಿತ್ಯಾನಂದ ಹೆಗ್ಡೆ, ಮೀರನ್ ಅಬ್ದುಲ್ ಖಾದರ್,ವಿ. ಸುಬ್ಬಯ್ಯ ಹೆಗ್ಡೆ, ವೈ. ಭಾಸ್ಕರ ಶೆಟ್ಟಿ, ಕುದಿ ವಸಂತ ಶೆಟ್ಟಿ,ಗ್ರಾ.ಪಂ. ಉಪಾಧ್ಯಕ್ಷೆ ಗ್ರೇಸಿ ಕಾರ್ಡೋಜಾ, ಗ್ರಾ.ಪಂ. ಸದಸ್ಯರು,ದಿ|ಕುಟ್ಟಿ ಶೆಟ್ಟಿ ಕುಟುಂಬಸ್ಥರು, ಅಭಿಮಾನಿಗಳು ಉಪಸ್ಥಿತರಿದ್ದರು. ನಿವೃತ್ತ ಉಪನ್ಯಾಸಕ ಡಾ| ಸುಧಾಕರ ಮಾರ್ಲ ಸ್ವಾಗತಿಸಿ, ವಂದಿಸಿದರು.