Advertisement
ದಿನ ಬೆಳಗಾದರೆ ಈ ಗಲೀಜು ದಾಟಿಕೊಂಡು ಮನೆ ಸೇರಬೇಕಿದೆ.
Related Articles
Advertisement
ನಿತ್ಯ ನೀರು ನಿಲ್ಲುತ್ತಿರುವ ಹಿನ್ನೆಲೆಯಲ್ಲಿ ಸೊಳ್ಳೆ ಕಾಟ ಅತಿಯಾಗಿದ್ದು, ಡೆಂಗ್ಯೂ, ಮಲೇರಿಯಾ, ಚಿಕೂನ್ ಗುನ್ಯಾ ಭೀತಿ ಸ್ಥಳೀಯರನ್ನು ಕಾಡುತ್ತಿದೆ. ಸ್ಥಳೀಯ ನಿವಾಸಿ ಸೋಮಶೇಖರ್ ಸೂಡಿ ಪ್ರತಿಕ್ರಿಯಿಸಿ ಈ ಕಾಮಗಾರಿಯನ್ನು ತುಂಡು ಗುತ್ತಿಗೆದಾರ ಪುರಸಭೆ ಸದಸ್ಯ ಸಯ್ಯದ್ ಖಾಜಾ ಮೈನುದ್ದೀನ್ ಮುಲ್ಲ ನಿರ್ವಹಿಸಿದ್ದು, ಸರಿಪಡಿಸಲು ವಿನಂತಿಸಿದರೆ ಕೆಲಸ ಇಷ್ಟಕ್ಕೆ ಮುಗಿಯಿತು ಎಂದು ತಿಳಿಸಿದ್ದರಿಂದ ಅವೈಜ್ಞಾನಿಕ ಸಿಸಿ ರಸ್ತೆ ಅಭಿವೃದ್ಧಿ ಹೊಂದಿದರೂ ತೊಂದರೆ ಅನುಭವಿಸುವಂತಾಗಿದೆ. ಸಿಸಿ ರಸ್ತೆಯಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಿ ಈ ಪ್ರದೇಶದಲ್ಲಿ ಕೊಳಗೇರಿ ನಿವಾಸಿಗಳಂತಾಗಿದ್ದೇವೆ ಎನ್ನುವುದು ಅವರ ಅಳಲು.
ಪುರಸಭೆ ಸದಸ್ಯ ರಾಜೇಶ ಪತ್ತಾರ ಪ್ರತಿಕ್ರಿಯಿಸಿ ಅವೈಜ್ಞಾನಿಕ ಸಿಸಿ ಕಾಮಗಾರಿಯಾಗಿರುವ ವಿಷಯ ಗಮನದಲ್ಲಿದ್ದು ಪುರಸಭೆ ಅಧ್ಯಕ್ಷರ ಗಮನಕ್ಕೆ ತಂದಿರುವೆ. ಕೆಲವೇ ದಿನಗಳಲ್ಲಿ ಸಿಮೆಂಟ್ ಕಾಂಕ್ರೀಟ್ ರೀ ಕೋಟಿಂಗ್ ಮಾಡಿಸಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವ ಭರವಸೆ ವ್ಯಕ್ತಪಡಿಸಿದರು.