Advertisement
ಹೌದು… ಕುಷ್ಟಗಿ ತಾಲೂಕಿನಲ್ಲಿ ಮುಂಗಾರು ವಿಫಲವಾಗಿದ್ದು, ಜೂನ್, ಜುಲೈ, ಅಗಸ್ಟ್ ತಿಂಗಳಾಗುತ್ತ ಬಂದರೂ ಹೇಳಿಕೊಳ್ಳುವ ಮಳೆ ಆಗಿಲ್ಲ. ಮುಂಗಾರು ಹಂಗಾಮಿನಲ್ಲಿ ಮಳೆಯ ಅಭಾವ ಪರಿಸ್ಥಿತಿ ಮುಂದುವರೆದಿದೆ. ಹೆಸರು, ಅಲಸಂದಿ, ಸೂರ್ಯಕಾಂತಿ, ಸಜ್ಜೆ ಮೆಕ್ಕೆಜೋಳ ಮೊದಲಾದ ಬೆಳೆಗಳು ಬಾಡಿದ್ದು, ಸಕಾಲಿಕ ಮಳೆ ಇಲ್ಲದೇ ಉತ್ಪನ್ನ ಕಡಿಮೆಯಾಗಿದೆ. ಈ ಪರಿಸ್ಥಿತಿಯಲ್ಲಿ ಸಜ್ಜೆಗೆ ಹಸಿರು ಹುಳು ಕಾಟ ವಿಪರೀತವಾಗಿದೆ. ಕಾಳು ಕಟ್ಟಿದ ಸಜ್ಜೆ ತೆನೆಗೆ ಹಸಿರು ಹುಳು ಮುತ್ತಿಕೊಂಡಿದ್ದು, ತೆನೆಯ ಕಾಳುಗಳನ್ನು ಭಕ್ಷಿಸುತ್ತಿವೆ.
Related Articles
Advertisement
ಕುಷ್ಟಗಿ ಸೀಮಾದಲ್ಲಿ6 ಎಕರೆ ಪ್ರದೇಶದಲ್ಲಿ ಸಜ್ಜೆ ಬೆಳೆದಿರುವ ನಿವೃತ್ತ ಬಸ್ ನಿಲ್ದಾಣ ನಿಯಂತ್ರಕ ಕಾಶೀಂಸಾಬ್ ಕಾಯಿಗಡ್ಡಿ, ಸಜ್ಜೆ ಬೆಳೆಗೆ ತೆನೆಗೆ ನಾಲ್ಕೈದು ಹುಳುಗಳು ಮುತ್ತಿಕೊಂಡು ಕಾಳು ತಿಂದು ಹಾಕಿ, ವಿಸರ್ಜನೆ ಮಾಡಿವೆ. ಇದರಿಂದ ಇಳುವರಿ ಕಡಿಮೆಯಾಗಿದೆ. ಸಜ್ಜೆ ತೆನೆಗೆ ಈ ರೀತಿಯ ಹಸಿರು ಹುಳು ಹಾವಳಿ ಕಂಡಿರುವುದು ಇದೇ ಮೊದಲು ಆಗಿದೆ. ಸಜ್ಜೆ ಬೆಳೆಗೆ ರೋಗ, ಕೀಟದ ಹಾವಳಿ ಇಲ್ಲ. ಈ ಕೀಟಗಳು ಯಾವ ಬೆಳೆಯನ್ನು ಬಿಡುತ್ತಿಲ್ಲ. ಈ ಹುಳುಗಳ ನಿಯಂತ್ರಿಸಲು 5,100 ರೂ. ಖರ್ಚಾಗಿದ್ದು ನಿಯಂತ್ರಿಸಲು ಸಾದ್ಯವಾಗಿಲ್ಲ ಎಂದು ಕಾಶೀಂಸಾಬ್ ವಿವರಿಸಿದರು.