Advertisement

ಕುಷ್ಟಗಿ: ಬಯಲು ಸೀಮೆಗೆ ಮಲೆನಾಡಿನ ಬೆಳೆಗಳ ಪರಿಚಯಿಸಲು ಮುಂದಾದ ಕೃಷಿಕ ದೇವೇಂದ್ರಪ್ಪ ಬಳೂಟಗಿ

02:55 PM Sep 22, 2022 | Team Udayavani |

ಕುಷ್ಟಗಿ: ಕುಷ್ಟಗಿಯ ಪ್ರಗತಿ ಪರ ಕೃಷಿಕ ದೇವೇಂದ್ರಪ್ಪ ಬಳೂಟಗಿ ಅವರು, ಬಿಸಿಲನಾಡು ಕುಷ್ಟಗಿ ಈ ಭಾಗಕ್ಕೆ ಮಲೆನಾಡಿನ ಪ್ರಮುಖ ಬೆಳೆಗಳನ್ನು ಪ್ರಾಯೋಗಿಕವಾಗಿ ಬೆಳೆಯಲು ಮುಂದಾಗಿದ್ದಾರೆ.

Advertisement

ಈ ಭಾಗ ಮೊದಲೇ ಬಿಸಿಲು ಹೆಚ್ಚು, ಮಳೆ ಕಡಿಮೆ. ಹೀಗಾಗಿ ಈ ಪ್ರದೇಶಕ್ಕೆ ಒಗ್ಗುವ ಬೆಳೆಗಳನ್ನು ಬೆಳೆಯುವುದು ಈ ಭಾಗದಲ್ಲಿ ಕಾಣಬಹುದು. ಮಲೆನಾಡಿನಲ್ಲಿ ಅಧಿಕ ಮಳೆ, ಕಾಡು ಹೆಚ್ಚು ಹೀಗಾಗಿ ಕಾಫಿ, ಏಲಕ್ಕಿ, ಲವಂಗ, ಅಡಿಕೆ, ಮೆಣಸು ಇತ್ಯಾದಿ ಬೆಳೆಗಳು ಸಹಜವಾಗಿ ಬೆಳೆಯುತ್ತಿವೆ. ಮಲೆನಾಡಿನ ಸೀಮಿತ ಬೆಳೆಗಳನ್ನು ಈ ಪ್ರದೇಶದಲ್ಲಿ ಪರಿಚಯಿಸುವ ಪ್ರಯತ್ನ ಇದಾಗಿದೆ.

ಈಗಾಗಲೇ ಶ್ರೀಗಂಧ 8 ಸಾವಿರ, ರಕ್ತ ಚಂದನ 6 ಸಾವಿರ, 600 ಮಾವು, 500 ಸಪೋಟ, 3 ಸಾವಿರ ತೇಗ ನೇರಳೆ ಇತ್ಯಾದಿ ಬೆಳೆದು ಈ ಪ್ರದೇಶ ಕಾಡಾಗಿ ಪರಿವರ್ತಿಸಿದ್ದಾರೆ. ಇದರಲ್ಲಿಯೇ ಮಲೆನಾಡಿನ ಪ್ರಮುಖ ಬೆಳೆಗಳಾದ ಕಾಫಿ, ಏಲಕ್ಕಿ, ಲವಂಗ ಅಡಿಕೆ, ಮೆಣಸು, ಬಟರ್ ಪ್ರೂಟ್ (ಬೆಣ್ಣೆ ಹಣ್ಣು) ಪ್ರಾಯೋಗಿಕವಾಗಿ ಬೆಳೆಸಿದ್ದಾರೆ. ಅಲ್ಲಿನ ಬೆಳೆಗಳು ಈ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಬೆಳೆಯಲಾಗಿದೆ.

ಈ ಪ್ರದೇಶದಲ್ಲಿ ಎಲೆ ಬಳ್ಳಿ ಚೆನ್ನಾಗಿ ಬೆಳೆಯುತ್ತದೆ. ಮೆಣಸು ಯಾಕೆ ಬೆಳೆಯುವುದಿಲ್ಲ ಎಂದು 4 ಎಕೆರೆಯಲ್ಲಿ ಪ್ರತಿ ತೇಗದ ಗಿಡಕ್ಕೆ ಮೆಣಸು ಬಳ್ಳಿ ಹಬ್ಬಿಸಲಾಗಿದೆ. ಮಲೆನಾಡಿನ ಸೀಮಿತ ಬೆಳೆಗಳನ್ನು ಇಲ್ಲೂ ಬೆಳೆಯಬಹುದಾಗಿದ್ದು, ಈ ಎಲ್ಲಾ ಬೆಳೆಗಳನ್ನು ಸಾವಯವ ಆಧಾರಿತವಾಗಿ ಶೂನ್ಯ ನಿರ್ವಹಣೆಯಲ್ಲಿ ಬೆಳೆದಿರುವುದು ವಿಶೇಷ.

ಈ ಬೆಳೆ ಮಾತ್ರವಲ್ಲದೇ ನುಗ್ಗೆ, ನೋನಿ, ಕರಿಬೇವು, ನೆಲ್ಲಿ, ಎಲೆಬಳ್ಳಿ, ರೇಷ್ಮೇ ಅಲ್ಲದೇ ಕೆಲವು ಔಷಧಿಯ ಬೆಳೆ ಬೆಳೆಯಲಾಗಿದೆ. ಈ ಬೆಳೆಗಳು ಆದಾಯ ತರುವ ಬೆಳೆಗಳಾಗಿದ್ದು ಮಾಸಿಕವಾಗಿ ಏನಿಲ್ಲವೆಂದರೂ ಎಕ್ರೆಗೆ 1 ಲಕ್ಷ ರೂ. ಆದಾಯ ನಿರೀಕ್ಷಿಸಬಹುದಾಗಿದೆ.

Advertisement

ತೇಗ, ಶ್ರೀಗಂಧ, ರಕ್ತ ಚಂದನ ದೀರ್ಘಾವಧಿಯ ಈ ಬೆಳೆಗಳ ನಿಶ್ಚಿತ ಠೇವಣಿ ಇದ್ದಂತೆ ಉಳಿದ ಬೆಳೆಗಳು ಅಯಾ ಕಾಲದಲ್ಲಿ ಆದಾಯ ನಿರೀಕ್ಷಿಸಬಹುದಾಗಿದ್ದು, ಕೃಷಿಯಿಂದ ವಿಮುಖರಾಗುವ ಈ ಸಂಧರ್ಭದಲ್ಲಿ ಸಾವಯವ ಕೃಷಿಯಿಂದ ಸಮಗ್ರ ಕೃಷಿಯಿಂದ ಪದ್ದತಿ ಅಳವಡಿಸಿಕೊಂಡು ಒಬ್ಬ ವ್ಯಕ್ತಿಯಿಂದ ನಿರ್ವಹಣೆ ಸಾದ್ಯ ಎನ್ನುತ್ತಾರೆ ದೇವೇಂದ್ರಪ್ಪ ಬಳೂಟಗಿ.

-ಮಂಜುನಾಥ ಮಹಾಲಿಂಗಪುರ ಕುಷ್ಟಗಿ

Advertisement

Udayavani is now on Telegram. Click here to join our channel and stay updated with the latest news.

Next