Advertisement
ಈಗಾಗಲೇ ಚುನಾವಣೆ ಅಧಿಕಾರಿಗಳು ಸಕಲ ಸಿದ್ಧತೆ ಗಳನ್ನು ಏರ್ಪಡಿಸಿಕೊಂಡಿದ್ದಾರೆ. ಈಗಾಗಲೇ 23 ಮತ ಗಟ್ಟೆಗಳಿಗೆ ಮತ್ತು ಸಾಮಾನ್ಯ ಮತ ಗಟ್ಟೆಗಳಿಗೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇವಿಎಂ ಮಿಷನ್ ಗಳ ಪರಿಕರಗಳ ಕಂಟ್ರೋಲ್ ಯೂನಿಟ್ ಹಾಗೂ ಬ್ಯಾಲೆಟ್ ಯೂನಿಟ್ ಹಾಗೂ ಮತದಾರರ ಮತ ಪಟ್ಟಿಗಳು ಸೇರಿದಂತೆ ವಿವಿಧ ಪರಿಕರಗಳನ್ನು ಪಿ ಆರ್ ಒ, ಎ ಪಿ ಆರ್ ಒ, ಪಿ ಒ ಮತಗಟ್ಟೆ ಅಧಿಕಾರಿಗಳು ಪರಿಶೀಲನೆ ನಡೆಸಿಕೊಂಡು ತಮ್ಮ ತಮ್ಮ ಮತಗಟ್ಟೆ ಗಳಿಗೆ ತೆರಳಿದ್ದಾರೆ.
ಸಹಾಯಕ ಚುನಾವಣೆ ಅಧಿಕಾರಿಯಾಗಿ ಕಿರಣ್ ಕುಮಾರ್, ಮಂಜುನಾಥ್,ಸೆಕ್ಟರ್ ಅಧಿಕಾರಿಗಳಾಗಿ ವಸಂತ, ಪ್ರವೀಣ್ ಜೋಷಿ, ಇವರುಗಳನ್ನು ನೇಮಕ ಮಾಡಲಾಗಿದೆ. ಚುನಾವಣೆ ಬಂದೋಬಸ್ತ್ ಗೆ ಪೊಲೀಸ್ ಇಲಾಖೆ ಯಿಂದ ಡಿ. ವೈ.ಎಸ್ಪಿ 1, ಸಿಪಿಐ 1, ಪಿ. ಎಸ್. ಐ. 3, ಎ ಎಸ್ ಐ 8, ಪೊಲೀಸ್ ಪೇದೆಗಳು 45, ಇದರಲ್ಲಿ ಮಹಿಳೆ ಪೊಲೀಸ್ ರು 5, ಡಿ ಆರ್ ಪೊಲೀಸ್ ವಾಹನಗಳು 01, ನೇಮಿಸಲಾಗಿದೆ.
Related Articles
Advertisement
ಇನ್ನೂ ನಿತ್ಯವಾಗಿ ಕುಟುಂಬದವರಿಗೆ ಮಂಡಕ್ಕಿ, ಮಾಂಸ ನೀಡುತ್ತಿದ್ದಾರೆ. ಮಹಿಳೆಯರನ್ನು ಕೂಲಿ ಕೆಲಸಕ್ಕೆ ಕಳಿಸದೆ ನಿತ್ಯ 300 ರಂತೆ ಕೂಲಿ ಕೊಟ್ಟು ಮನೆಯಲ್ಲಿ ಇರುವಂತೆ ತಿಳಿಸಿ ಇದರ ಮೂಲಕ ಮತ ಸೆಳೆಯಲು ಮುಂದಾಗಿದ್ದಾರೆ.
ಇದಲ್ಲದೆ ಸತತವಾಗಿ ಮೂರು ನಾಲ್ಕು ದಿನಗಳಿಂದ ಎರಡು ಪಕ್ಷದ ಅಭ್ಯರ್ಥಿ ಗಳು ಬಿರುಸಿನಿಂದ ಪ್ರಚಾರ ನಡೆಸಿ ಲವಲವಿಕೆ ಯಿಂದ ಇದ್ದು, ಚುನಾವಣೆ ಬರುತ್ತಿದ್ದಂತೆ ಮುಖದಲ್ಲಿ ಲಕ್ಷಣಗಳು ಕುಗ್ಗಿವೆ.
ಇನ್ನೂ ಹಾಲಿ ಮತ್ತು ಮಾಜಿ ಶಾಸಕರು ತಮ್ಮ ಪ್ರತಿಷ್ಠೆಯ ಕಣ ಉಳಿಸಿಕೊಳ್ಳಲು ಜಿಲ್ಲೆಯ ಪಕ್ಷದ ಮುಖಂಡರ ಜೊತೆಗೆ ಮತ್ತು ಸ್ಥಳೀಯ ಕಾರ್ಯಕರ್ತರನ್ನು ಒಗ್ಗೂಡಿಸಿ ಮತ ಪಡಿಯಲು ಮತದಾರರಿಗೆ ಮನವೊಲಿಸಲು ನಾನಾ ಕಸರತ್ತು ನಡೆಸಿದ್ದಾರೆ.
ಎರಡು ಪಕ್ಷದ ಅಭ್ಯರ್ಥಿ ಗಳಿಂದ ಕೆಲ ವಾರ್ಡ್ ಗಳಲ್ಲಿ ತೀವ್ರ ಪೈಪೋಟಿ ಕಂಡುಬರುವುದರಿಂದ ಒಂದು ವೋಟಿಗೆ 5 ಸಾವಿರ ಕೊಡಲು ಮುಂದಾಗಿದ್ದಾರೆ ಎಂದು ಸುದ್ದಿ ಕೇಳಿ ಬರುತ್ತಿದೆ.
ಕಳೆದ ಬಾರಿ ಪುರಸಭೆ ಚುನಾವಣೆ ಯಲ್ಲಿ ಅತಿ ಹೆಚ್ಚು ಬಿಜೆಪಿ ಅಭ್ಯರ್ಥಿ ಗಳು ಜಯಗಳಿಸಿ ಪುರಸಭೆ ಬಿಜೆಪಿ ವಶ ವಾಗಿತ್ತು. ಈ ಬಾರಿ ಕೂಡ ತಮ್ಮ ವಶ ಮಾಡಿಕೊಳ್ಳಲು ಬಿಜೆಪಿಗರು ನಾನಾ ಕಸರತ್ತು ನಡೆಸಿದರೆ. ಕಾಂಗ್ರೆಸ್ ನವರು ಕೂಡ ಕಳೆದ ಬಾರಿ ಕಡಿಮೆ ಸ್ಥಾನ ಪಡೆದುಕೊಂಡಿರುವುದರಿಂದ ಈ ಬಾರಿ ಪುರಸಭೆ ಕಾಂಗ್ರೆಸ್ ವಶ ಮಾಡಿಕೊಂಡು ಮುಂಬರುವ ಚುನಾವಣೆ ಯಲ್ಲಿ ಪ್ರತಿಷ್ಠೆಯ ಕಣ ಉಳಿಸಿಕೊಳ್ಳುವ ಸಲುವಾಗಿ ಎಗ್ಗಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ.
ಒಟ್ಟಾರೆಯಾಗಿ ಇಂದು ಚುನಾವಣೆ ನಡೆಯುತ್ತಿದ್ದೂ ಹಾಲಿ ಮತ್ತು ಮಾಜಿ ಶಾಸಕರ ಪ್ರತಿಷ್ಠೆಯ ಕಣ ಯಾರ ಪಲಾಗಲಿದೆ ಎಂಬುವುದಕ್ಕೆ ಡಿ 30ಕ್ಕೆ ಉತ್ತರ ದೊರೆಯಲಿದೆ.