Advertisement
ಸೂರ್ಯನಾರಾಯಣ ರೆಡ್ಡಿ ಆಪ್ತ ಪರಮ ಶಿಷ್ಯನಾದ ಹಾಲಿ ಶಾಸಕ ಗಣೇಶ್ ಹಾಗೂ ರೆಡ್ಡಿ ಇವರ ಇಬ್ಬರ ನಡುವೆ ಕೆಲ ತಿಂಗಳಿಂದ ಅಸಮಾಧಾನ ಶುರುವಾಗಿದ್ದು, 2023 ಚುನಾವಣೆಯಲ್ಲಿ ರೆಡ್ಡಿ ರಾಮಸಾಗರ ಬಿ. ನಾರಾಯಣಪ್ಪ ಅವರಿಗೆ ಟಿಕೇಟ್ ನೀಡಿ ಗೆಲ್ಲಿಸಬೇಕು ಎಂಬ ನಿಟ್ಟಿನಲ್ಲಿ ಕುರುಗೋಡಲ್ಲಿ ಹುಟ್ಟುಹಬ್ಬ ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ ಎಂಬ ವಿಷಯ ಹುಟ್ಟು ಹಬ್ಬದ ಸಂಭ್ರಮಕ್ಕೆ ಬಂದ ಜನರಲ್ಲಿ ಕೇಳಿ ಬಂತು.
Related Articles
Advertisement
ಕಾರ್ಯಕ್ರಮದಲ್ಲಿ ಸೂರ್ಯನಾರಾಯಣ ರೆಡ್ಡಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುವ ವೇಳೆ ಸಿರುಗುಪ್ಪ ಮಾಜಿ ಶಾಸಕ ಹಾಗೂ ಬೇರೆ ಬೇರೆಯವರ ಹೆಸರು ಹೇಳಿದರು ಶಿಷ್ಯ ಶಾಸಕ ಗಣೇಶ್ ಅವರ ಹೆಸರು ಹೇಳದೆ ಭಾಷಣ ಮಾಡಿದ್ದು ಕಂಡು ಬಂತು.
ಇನ್ನೂ ಮಾದ್ಯಮದವರು ಕೇಳಿದ ಪ್ರೆಶ್ನೆಗೆ ರೆಡ್ಡಿ ಶಾಸಕ ಗಣೇಶ್ ಅವರ ಬಗ್ಗೆ ನೋ ಕಾಮೆಂಟ್ ಎಂದು ಉತ್ತರಿಸಿದರು.
2004 ರಲ್ಲಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಯಾವ ರೀತಿ ನನ್ನ ಜೊತೆ ಇದ್ರೋ ಅದೇ ರೀತಿ ಕೂಡ ಈಗಲೂ ನನ್ನ ಮೇಲೆ ಇಟ್ಟ ಪ್ರೀತಿ ವಿಸ್ವಾಸ ನಾನು ಎಂದಿಗೂ ಮರೆಯುವುದಿಲ್ಲ. ಇವತ್ತು ಇಷ್ಟೊಂದು ಜನ ಸಂಖ್ಯೆ ನೋಡಿದ್ರೆ ನಾನು ಶಾಸಕನಾಗಿದ್ದಾಗ ಮತ್ತು ಯಾವ ಮುಖ್ಯ ಮಂತ್ರಿ, ಸಚಿವರು, ಶಾಸಕರ ಕಾರ್ಯಕ್ರಮದಲ್ಲಿ ಕೂಡ ನೋಡಿಲ್ಲ ಅಂತ ಜನ ಸಂಖ್ಯೆಯಲ್ಲಿ ಸೇರಿದ್ದೀರಿ, ಯಾವತ್ತೂ ಅಧಿಕಾರ, ಹಣ ಮುಖ್ಯವಲ್ಲ ಜನರ ಪ್ರೀತಿ ವಿಸ್ವಾಸ, ವಾತ್ಸಲ್ಯ ಮುಖ್ಯ ಆದ್ದರಿಂದ ಸದಾ ಇದೆ ರೀತಿ ನಿಮ್ಮ ಪ್ರೀತಿ ಇರಲಿ ಎಂದು ಹರ್ಷ ವ್ಯಕ್ತಪಡಿಸಿದರು. ಅಲ್ಲದೆ ಕುರುಗೋಡು ಜನತೆ ಜೊತೆಗೆ ನಾನು ಯಾವಾಗಲು ಇರುತ್ತೀನಿ ಎಂದು ಭರವಸೆ ನೀಡಿದರು.
ಬೆಳಿಗ್ಗೆಯಿಂದ ಕುರುಗೋಡು ಶ್ರೀ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ, ಪೂಜೆ ಕಾರ್ಯಗಳು ನೆರೆವೇರಿಸಿದರು. ನಂತರ ಶ್ರೀ ಆಂಜನೇಯ ಸ್ವಾಮಿ ಪೂಜೆ, ಸುಂಕ್ಲಮ್ಮ ದೇವಿಗೆ ವಿಶೇಷ ಪೂಜೆ, ಯಲ್ಲಾಪುರ ಕ್ರಾಸ್ ನ ಖಾದರ ಲಿಂಗ ತಾತ ಪೂಜೆ, ಶ್ರೀ ಸಿರಿಡಿ ಸಾಯಿಬಾಬಾ ಗೆ ಪೂಜೆ, ತದ ನಂತರ ಬಾದನಹಟ್ಟಿ ಗ್ರಾಮದ ಉಡುಸಲಮ್ಮ ದೇವಿಗೆ ಪೂಜೆ ಸಲ್ಲಿಸಿದರು. ತದನಂತರ ಕುರುಗೋಡು ಸುತ್ತಮುತ್ತ ಎಲ್ಲ ಸಮುದಾಯದ ದೇವಸ್ಥಾನಗಳಿಗೆ ಭೇಟಿ ನೀಡಿ ವೆಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.
ಪಟ್ಟಣದ ಇಂದಿರಾ ನಗರದಿಂದ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಬಂದು ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಕುರುಗೋಡು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಹಾಗೂ ಕಾರ್ಯಕರ್ತರು, ಅಭಿಮಾನಿಗಳು, ಶಾಲೆಯ ಮಕ್ಕಳು ರೆಡ್ಡಿಗೆ ಸನ್ಮಾನಿಸಿ ಗೌರವಿಸಿ ಕೇಕ್ ಕತ್ತರಿಸಿದರು.
ಇದನ್ನೂ ಓದಿ: ಭಾರತ ಕ್ರಿಕೆಟ್ ತಂಡದಲ್ಲೂ ಮೀಸಲಾತಿ ನೀಡಬೇಕು: ಚೇತನ್ ಹೇಳಿಕೆಗೆ ಆಕ್ರೋಶ