Advertisement

ಮಂಗಳವಾದ್ಯದವರಿಗೆ ಕೋವಿಡ್ ಅಮಂಗಳ!

12:45 PM May 01, 2020 | Naveen |

ಕುರುಗೋಡು: ಮದುವೆ ಸೀಸನ್‌ನಲ್ಲೇ ಮಹಾಮಾರಿ ಕೋವಿಡ್ ಒಕ್ಕರಿಸಿಕೊಂಡಿದ್ದರಿಂದ ಮಂಗಳವಾದ್ಯರಿಗೆ ಕೆಲಸವೇ ಇಲ್ಲದಂತಾಗಿದೆ. ಇದರಿಂದ ಈ ವೃತ್ತಿಯ ಕಲಾವಿದರು ಸಂಕಷ್ಟದಲ್ಲಿ
ದಿನ ಕಳೆಯುವಂತಾಗಿದೆ. ಪ್ರತಿವರ್ಷ ಮಾರ್ಚ್‌, ಏಪ್ರಿಲ್‌ ಹಾಗೂ ಮೇ ತಿಂಗಳಲ್ಲೇ ಮದುವೆಗಳು ಹೆಚ್ಚು ನಡೆಯುತ್ತವೆ. ಈ ಮೂರು ತಿಂಗಳು ಬಿಡುವಿಲ್ಲದೆ ಕೆಲಸ ಮಾಡಿ ಮಂಗಳವಾದ್ಯರು ಹಣ ಗಳಿಸುತ್ತಿದ್ದರು. ಆದರೆ ಲಾಕ್‌ಡೌನ್‌ದಿಂದಾಗಿ ಮಾರ್ಚ್‌ ಕೊನೆಯ ವಾರದಿಂದ ಮಂಗಳ ಕಾರ್ಯಗಳು ಬಂದ್‌ ಆಗಿದ್ದರಿಂದ ಇವರಿಗೆ ಕೆಲಸ ಇಲ್ಲದಂತಾಗಿದೆ.

Advertisement

ಮೇ ತಿಂಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವ ಲಕ್ಷಣಗಳು ಗೋಚರಿಸುತ್ತಿಲ್ಲ. ಮೇ ನಲ್ಲಿ ನಿಗದಿಯಾಗಿದ್ದ ಅನೇಕ ಮದುವೆ ಮತ್ತು ಇತರೆ ಕಾರ್ಯಕ್ರಮ ರದ್ದುಗೊಂಡಿವೆ. ಇದು ಮಂಗಳವಾದ್ಯರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ. ಕುರುಗೋಡು ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ 200ಕ್ಕೂ ಹೆಚ್ಚು ಅಧಿಕ ಮಂಗಳವಾದ್ಯರು ಇದ್ದಾರೆ. ಮಂಗಳವಾದ್ಯ ಕಲಾ ತಂಡದವರು ಕನಿಷ್ಠ ಒಂದು ಮದುವೆ ಕಾರ್ಯಕ್ರಮದಲ್ಲಿ 5ರಿಂದ 6 ಜನ ಕೆಲಸ ನಿರ್ವಹಿಸುತ್ತಾರೆ. ಕ್ಲಾರ್‌ನಾಟ್‌, ಟ್ರಾಂಪಿಟ್‌ ಡೋಲ್‌, ಶೇಲ್ರಾಮ್‌, ಗೆಜ್ಜೆನಾದ ಸೇರಿದಂತೆ ಇತರೆ ಕೆಲಸ ಮಾಡುತ್ತಾರೆ. ಗಣ್ಯ, ಅತಿ ಗಣ್ಯರ ಮದುವೆ ಸಮಾರಂಭಗಳಲ್ಲಿ 25 ಜನ ಸೇರಿ ಒಂದು ತಂಡದಂತೆ ಕೆಲಸ ನಿರ್ವಹಿಸುತ್ತಾರೆ.

ಮೂರು ತಿಂಗಳು ಕೈತುಂಬ ಕೆಲಸದ ಜತೆಗೆ ಹೆಚ್ಚು ಹಣ ಸಂಪಾದಿಸುತ್ತಿದ್ದರು. ಈಗ ಅವರೆಡೂ ಇಲ್ಲದಂತಾಗಿದೆ. ತಾಲೂಕು ಸಂಘದಲ್ಲಿ 24 ಜನ ಮಂಗಳವಾದ್ಯರು ಹೆಸರು ನೋಂದಣಿ
ಮಾಡಿಸಿಕೊಂಡಿದ್ದಾರೆ. ಅದರಂತೆ ಗ್ರಾಮ ಮಟ್ಟದಲ್ಲಿ ಕೂಡ ಒಂದೊಂದು ಸಂಘ ನಿರ್ಮಾಣ ಮಾಡಲಾಗಿದೆ. ಅದರಲ್ಲಿ ಒಂದು ಸಂಘಕ್ಕೆ 24 ಜನ ಇದ್ದಾರೆ. ಕೊರೊನಾದಿಂದ ಕೆಲಸವಿಲ್ಲದೆ ಅತಂತ್ರರಾಗಿದ್ದಾರೆ ಎಂದು ಮಂಗಳವಾದ್ಯ ಕಲಾವಿದರ ತಂಡದ ತಾಲೂಕು ಕಾರ್ಯದರ್ಶಿ ಅಂಜಿನಪ್ಪ ತಮ್ಮ ಅಳಲು ತೊಡಿಕೊಂಡಿದ್ದಾರೆ.

ಭಜಂತ್ರಿ ಸಮುದಾಯದವರ ಕುಲಕಸುಬು ಆಗಿರುವ ಮ್ಯಾಳ ಬಾರಿಸುವುದಕ್ಕೆ ಕೊರೊನಾದಿಂದ ಕೆಲಸವಿಲ್ಲದೆ ಅವರ ಸ್ಥಿತಿ ಅತಂತ್ರವಾಗಿದೆ. ಈ ಮೂರು ತಿಂಗಳ ಮದುವೆ ಸೀಸನ್‌ಲ್ಲೇ
ಕೆಲಸ ಇಲ್ಲವಾಗಿದೆ. ಇದೇ ವೃತ್ತಿ ನಂಬಿದವರು ತುಂಬಾ ಸಂಕಷ್ಟದಲ್ಲಿದ್ದಾರೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಸರಕಾರ ಅವರ ನೆರವಿಗೆ ಬರಬೇಕು.
ಆಂಜಿನಪ್ಪ, ಮಂಗಳವಾದ್ಯ ಕಲಾವಿದರ
ಸಂಘದ ತಾಲೂಕು ಕಾರ್ಯದರ್ಶಿ, ಕುರುಗೋಡು

ಸುಧಾಕರ್‌ ಮಣ್ಣೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next