Advertisement
ಸಮೀಪದ ಎಮ್ಮಿಗನೂರು ಗ್ರಾಮದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಯೋಜನೆಯಡಿ ಸುಮಾರು 16 ಕೋಟಿ 20 ಲಕ್ಷ ವೆಚ್ಚದಲ್ಲಿ 33/11 ಕೆ.ವಿ ವಿದ್ಯುತ್ ಉಪಕೇಂದ್ರದಿಂದ 110 ಕೆ.ವಿ ವಿದ್ಯುತ್ ಉಪ ಕೇಂದ್ರಕ್ಕೆ ಉನ್ನತೀಕರಿಸುವ ಕಾಮಗಾರಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಈ ಭಾಗದ ರೈತರಿಗೆ 110 ಕೆ.ವಿ ಕೊಡಿಸಬೇಕೆಂದು ಸತತ ನಾಲ್ಕು ವರ್ಷದ ನಿಂತರ ಪ್ರಯತ್ನದಿಂದಾಗಿ ಇಂದು 110 ಕೆ.ವಿ ವಿದ್ಯುತ್ ಉಪ ಕೇಂದ್ರ ಕಾಮಗಾರಿ ಕಾರ್ಯರೂಪಕ್ಕೆ ಬಂದಿದೆ. ಎಮ್ಮಿಗನೂರು, ಬಳಾಪುರ, ಒರ್ವಾಯಿ, ಶಂಕರ್ ಸಿಂಗ್ ಕ್ಯಾಂಪ್, ಸೇರಿದಂತೆ ಇತರೆ ಹಳ್ಳಿಗಳಿಗೆ ಎಮ್ಮಿಗನೂರು 110 ಕೆ.ವಿ ಅನುಕೂಲ ವಾಗಲಿದೆ ಎಂದರು.
Related Articles
Advertisement
ನಂತರ ಗ್ರಾಮದ ಮುಖಂಡರು ಮಾತನಾಡಿ, ಶಾಸಕರ ಮುತುವರ್ಜಿಯಿಂದಾಗಿ ಎಮ್ಮಿಗನೂರು ಗ್ರಾಮದಲ್ಲಿ 110 ಕೆ.ವಿ ವಿದ್ಯುತ್ ಉಪ ಕೇಂದ್ರವಾಗಿದೆ. ರೈತರಿಗೆ ನೀಡುವ 7 ತಾಸು ವಿದ್ಯುತ್ ಸಾಕಾಗುತ್ತಿಲ್ಲ. ಆದ್ದರಿಂದ ಸತತ ಹತ್ತು ತಾಸು ವಿದ್ಯುತ್ ನೀಡಬೇಕು ಎಂದರು.
ಪ್ರಾರಂಭದಲ್ಲಿ ಶಾಸಕ ಗಣೇಶ್ ಗ್ರಾಮದ ವಾಮದೇವ ಮಹಾ ಸ್ವಾಮಿಗಳು ಮಠಕ್ಕೆ ತೆರಳಿ ಶ್ರೀಗಳ ಅಶ್ರಿವಾದ ಪಡೆದು, ಮುಖ್ಯ ರಸ್ತೆಯಿಂದ ಕೆ. ವಿ. ವರೆಗೆ ಮೆರವಣಿಗೆ ಮೂಲಕ ಬಂದು ಭೂಮಿ ಪೂಜೆ ನೆರೆವೇರಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮಹಿಳೆ ಯರು, ಮುಖಂಡರು ಇದ್ದರು.
ಇದನ್ನೂ ಓದಿ: ತ್ರಿಪುರಾ ವಿಧಾನಸಭಾ ಚುನಾವಣೆ: 48 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ