Advertisement

ಯಡಿಯೂರಪ್ಪ ಮುಂದುವರಿಯಲಿ, ಬದಲಾದರೆ ಈಶ್ವರಪ್ಪಗೆ ಅವಕಾಶ ಕೊಡಿ: ಕುರುಬ ಸಮಾಜ ಆಗ್ರಹ

12:07 PM Jul 24, 2021 | Team Udayavani |

ವಿಜಯಪುರ: ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ ಮಾಡಬೇಡಿ. ಒಂದೊಮ್ಮೆ ಅವರನ್ನು ಸಿಎಂ ಸ್ಥಾನದಿಂದ ಬದಲಿಸಿದರೆ, ಬಿಜೆಪಿ ಕಟ್ಟುವಲ್ಲಿ ಶ್ರಮಿಸಿದ ಕೆ.ಎಸ್. ಈಶ್ವರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನದ ಅವಕಾಶ ನೀಡಬೇಕು ಎಂದು ವಿಜಯಪುರ ಕುರುಬ ಸಮಾಜ ಆಗ್ರಹಿಸಿದೆ.

Advertisement

ಶನಿವಾರ ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಖಣಾಪೂರ ಸೋಮೇಶ್ವರ ಶ್ರೀಗಳು, ಹುಲಜಂತಿ ಮಾಳಿಂಗರಾಯ ಮಹಾರಾಜರು, ಬಿಜೆಪಿ ಪಕ್ಷದಲ್ಲಿ ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರೆಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಅಂಬೇಡ್ಕರ್ ಗೆ ಅತೀ ಹೆಚ್ಚು ಅವಮಾನ ಮಾಡಿದ್ದು ಕಾಂಗ್ರೆಸ್: ನಳಿನ್ ಕಟೀಲ್ ವಾಗ್ದಾಳಿ

ಯಡಿಯೂರಪ್ಪ, ಅನಂತ್ ಕುಮಾರ ಹಾಗೂ ಈಶ್ವರಪ್ಪ ಅವರು ಸೈಕಲ್ ಮೇಲೆ ತಿರುಗಿ ಪಕ್ಷ ಕಟ್ಟಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರನ್ನು ಬದಲಿಸಿದರೆ ಹಿಂದುಳಿದ ವರ್ಗಗಳ ನಾಯಕರಾಗಿರುವ ಹಿರಿಯ ನಾಯಕರೂ ಆಗಿರುವ ಈಶ್ವರಪ್ಪ ಅವರು ಎಂದೂ ನನ್ನನ್ನು ಮುಖ್ಯಮಂತ್ರಿ ಮಾಡಿ ಕೇಳಿಲ್ಲ. ಹೀಗಾಗಿ ಎರಡು ವರ್ಷದ ಉಳಿಕೆ ಅವಧಿಗೆ ಅವಕಾಶ ನೀಡಿದರೆ ರಾಜ್ಯದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಆಗ್ರಹಿಸಿದರು.

ಒಂದೊಮ್ಮೆ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಬದಲಾವಣೆ ಮಾಡಿದಲ್ಲಿ ಈಶ್ವರಪ್ಪ ಅವರಿಗೆ ಅವರಿಗೆ ಅವಕಾಶ ನೀಡಬೇಕು ಎಂದು‌ ಆಗ್ರಹಿಸಿದರು.

Advertisement

ಇಷ್ಟಕ್ಕೂ ಈಶ್ವರಪ್ಪ ಸಿಎಂ ಆಗುವ ಸಮರ್ಥ ನಾಯಕರಾಗಿದ್ದು, ಪಕ್ಷಕ್ಕೆ ದುಡಿದಿರುವರಿಗೆ ಅವಕಾಶ ನೀಡಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಎಚ್ಚರಿಸಿದರು‌

ಯಡಿಯೂರಪ್ಪ ಅವರ ಸಮಕಾಲೀನ, ಪಕ್ಷದ ನಿಷ್ಠಾವಂತ ನಾಯಕ ಈಶ್ವರಪ್ಪ ಅವರಿಗೆ ಸಿಎಂ ಆಗುವ ಎಲ್ಲ ಅರ್ಹತೆ ಇದೆ. ತಮಗಿಂತ ಬಿಜೆಪಿ ಪಕ್ಷದಲ್ಲಿ ಕಿರಿಯರಾಗಿದ್ದ ಸದಾನಂದ ಗೌಡ, ಜಗದೀಶ ಶಟ್ಟರ ಸಿಎಂ ಆದರೂ ಪಕ್ಷದಲ್ಲಿ ಹಿರಿಯರಾಗಿದ್ದ ಈಶ್ವರಪ್ಪ ನನ್ನನ್ನು ಸಿಎಂ ಮಾಡಿ ಎಂದು ಕೇಳದೇ ಪಕ್ಷನಿಷ್ಠೆ ತೋರಿದ್ದಾರೆ ಎಂದು ವಿವರಿಸಿದರು.

ಹಾಲಿ ಬಿಜೆಪಿ ಸರ್ಕಾರದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ 17 ಶಾಸಕರಲ್ಲಿ ಎಚ್.ವಿಶ್ವನಾಥ, ಭೈರತಿ ಬಸವರಾಜ, ಆರ್.ಶಂಕರ್, ಎಂ.ಟಿ.ಬಿ.ನಾಗರಾಜ ಹಾಲುಮತ ಸಮಾಜಕ್ಕೆ ಸೇರಿದ್ದು, ಲಿಂಗಾಯತ ಸಮುದಾಯದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬದಲಾದರೆ ಲಿಂಗಾಯತರಿಗೆ ಮತ್ತೆ ಆದ್ಯತೆ ನೀಡಿದರೆ ಬಿಜೆಪಿ ಪಕ್ಷಕ್ಕೆ ಶಕ್ತಿ ಬರಲಿದೆ ಎಂದರು.

ಹನುಮಾಪುರ ಅಮರೇಶ್ವರ ಮಹಾರಾಜರು, ಅರಕೇರಿ ಅಮೋಘಸಿದ್ಧೇಶ್ವರ ಮಠದ ಶ್ರೀಗಳು, ಕುರುಬ ಸಮುದಾಯದ ರಾಜು ಕಂಬಾಗಿ, ರಾಜು ಬಿರಾದಾರ, ಶಿಲ್ಪಾ ಕುದರಗೊಂಡ, ಸಾಬು ಮಾಶಾಳ, ರವಿ ಕಿತ್ತೂರ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next