ಕುಣಿಗಲ್: ಟೈಲರ್ ಕನ್ನಯ್ಯಲಾಲ್ ಅವರನ್ನು ಬರ್ಬರವಾಗಿ ಹತ್ಯೆಗೈದಿರುವುದನ್ನು ಖಂಡಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳದ ಪದಾಧಿಕಾರಿಗಳು ತಾಲೂಕು ಕಚೇರಿ ಮುಂಭಾಗ ಪತ್ರಿಭಟನೆ ನಡೆಸಿದರು.
ರಾಜಸ್ಥಾನದ ಉದಯಪುರದಲ್ಲಿ ನಡೆದ ಅಮಾಯಕ ಹಿಂದು ಟೈಲರ್ ಕನ್ನಯ್ಯ ಲಾಲ್ ಅವರನ್ನು ಅಮಾನುಷವಾಗಿ ಕೊಲೆಗೈದ ಆರೋಪಿಗಳನ್ನು ಗಲ್ಲಿಗೆ ಏರಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದು ಪರಿಷತ್ ಬಜರಂಗ ದಳದ ಮುಖಂಡರಾದ ಬಿದನಗೆರೆ ದೇವರಾಜ್, ಕೋಟೆ ಸುನೀಲ್ ನೇತೃತ್ವದಲ್ಲಿ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಹತ್ಯೆಯನ್ನು ತೀವ್ರವಾಗಿ ಖಂಡಿಸಿ ಆರೋಪಿಗಳ ವಿರುದ್ದ ದಿಕ್ಕಾರ ಕೂಗಿದರು.
ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿದನಗೆರೆ ದೇವರಾಜ್ ಮಾತನಾಡಿ, ಯಾವುದೇ ತಪ್ಪು ಮಾಡದ ಕನ್ನಯ್ಯಲಾಲ್ ತಮ್ಮ ಪಾಡಿಗೆ ತಾವು ಟೈಲರಿಂಗ್ ಕೆಲಸ ಮಾಡುತ್ತಿದ್ದರು. ಗ್ರಾಹಕರಾಗಿ ಬಂದ ಹಂತಕರು ಬಳಿಕ ಕನ್ನಯ್ಯಲಾಲ್ ಅವರ ಕುತ್ತಿಗೆಯನ್ನು ಸೀಳಿ ಅಮಾನುಷವಾಗಿ ಹತ್ಯೆ ಗೈದಿದ್ದಾರೆ.
ಬಳಿಕ ವಿಡಿಯೋ ಮಾಡಿ ಸಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟು ವಿಕೃತಿ ಮೆರೆದಿದ್ದಾರೆ. ಇದೇ ರೀತಿ ಪ್ರಧಾನ ಮಂತ್ರಿ ನರೇಂದ್ರ ಮೊಂದಿ ಅವರನ್ನು ಸಹಾ ಇದೇ ಕತ್ತಿಯಿಂದ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿರುವುದು ಇಡೀ ದೇಶವೇ ಖಂಡಿಸುತ್ತದೆ ಎಂದರು.
ಕೊಲೆ ಮಾಡಿದ ಮೊಹಮದ್ ಗೌಸ್ ಹಾಗೂ ಮೊಹಮದ್ ರಿಯಾಜ್ ಅವರ ವಿರುದ್ದ ಬೇಗ ತನಿಖೆ ನಡೆಸಿ ಗಲ್ಲುಶಿಕ್ಷೆ ವಿಧಿಸಿ ಅವರ ಶವವನ್ನು ಬಹಿರಂಗವಾಗಿ ಸುಟ್ಟು ಹಾಕಬೇಕೆಂದು ಆಗ್ರಹಿಸಿದರು.
ಮನವಿ ಪತ್ರವನ್ನು ತಹಶೀಲ್ದಾರ್ ಮಹಬಲೇಶ್ವರ, ಡಿವೈಎಸ್ ಪಿ ಜಿ.ಆರ್ ರಮೇಶ್ ಅವರಿಗೆ ನೀಡಿದರು. ಪ್ರತಿಭಟನೆಯಲ್ಲಿ ಬಜರಂಗದಳದ ದೇವರಾಜ್, ತಿಮ್ಮರಾಜು, ಪ್ರಕಾಶ್ ಶಿವ ಮತ್ತಿತರರಿದ್ದರು.