Advertisement
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೇನೆಯ ಕಾರ್ಯಧ್ಯಕ್ಷ ಕೊತ್ತಗೆರೆ ಚಂದ್ರಪ್ಪ, ಅಧ್ಯಕ್ಷ ಜಗದೀಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್ ಜಗದೀಶ್ ಅವರ ಜಂಟಿ ಪತ್ದಿಕಾಗೋಷ್ಠಿಯಲ್ಲಿ ಮಾತನಾಡಿ, ಜೂ 27 ರಂದು ನಡೆದ ಕೆಂಪೇಗೌಡ ಅವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಗೌಡರ ಪ್ಲೇಕ್ಸ್ ಅನ್ನು ಪುರಸಭೆಯ ಕಸದ ವಾಹನಕ್ಕೆ ಕಟ್ಟಿ ಮೆರವಣಿಗೆ ಮಾಡಿದ್ದನ್ನು ಖಂಡಿಸಿ, ಇದಕ್ಕೆ ಪ್ರತಿಯಾಗಿ ಯಾವ ಸ್ಥಳದಲ್ಲಿ ಕೆಂಪೇಗೌಡ ಅವರಿಗೆ ಅಪಮಾನ ಮಾಡಲಾಯಿತೋ ಆ ಸ್ಥಳದಲ್ಲಿ ಮೂರು ತಿಂಗಳ ಒಳಗೆ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಿ ಪ್ರತಿಮೆಯನ್ನು ಅದಿಚುಂಚನಗಿರಿ ಸಂಸ್ಥಾನ ಮಠದ ನಿರ್ಮಾಲನಂದ ಸ್ವಾಮಿಜಿ ಅವರಿಂದ ಅನಾವರಣಗೊಳಿಸುವ ಜತೆಗೆ ಅದ್ದೂರಿಯಾಗಿ ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಮಾಡಲಾಗುವುದು ಎಂದರು. ಇದಕ್ಕೆ ತಾಲೂಕು ಆಡಳಿತ ಹಾಗೂ ಪುರಸಭೆ ಅವಕಾಶ ನೀಡಬೇಕೆಂದು ಹಾಗೂ ನಿರ್ಮಾಣ ಕ್ಕೆ ಜಾಗ ಒದಗಿಸಬೇಕೆಂದು ಒತ್ತಾಯಿಸಿದರು.
Related Articles
Advertisement
ಪುರಸಭೆ ಮಾಜಿ ಅಧ್ಯಕ್ಷ ಕೆ.ಎಲ್ ಹರೀಶ್, ಮಾಜಿ ಸದಸ್ಯರಾದ ಜಯರಾಮಯ್ಯ, ಈ ಮಂಜು, ದಲಿತ ಮುಖಂಡ ವರದರಾಜು, ಗ್ರಾ.ಪಂ ಸದಸ್ಯ ತರಿಕೆರೆ ಪ್ರಕಾಶ್ ಮಾಜಿ ಸದಸ್ಯ ಮೂರ್ತಿ, ಮುಖಂಡರಾದ ತೋಪೇಗೌಡ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.