Advertisement

Kunigal; ಬಸ್ ಹಳ್ಳಕ್ಕೆ ಉರುಳಿ 12 ಮಂದಿಗೆ ಗಾಯ: ತಪ್ಪಿದ ಭಾರಿ ಅನಾಹುತ

09:14 PM Dec 17, 2023 | Team Udayavani |

ಕುಣಿಗಲ್:  ಬೀಗರ ಔತಣ ಕೂಟಕ್ಕೆ ಜನರನ್ನು ಕರೆತಂದಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಪರಿಣಾಮ 12 ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಕೊತ್ತಗೆರೆ ಹೋಬಳಿ ಶ್ರೀ ರಂಗನಾಥಸ್ವಾಮ ಬೆಟ್ಟದಲ್ಲಿ ಭಾನುವಾರ ಸಂಭವಿಸಿದೆ.

Advertisement

ಬೆಂಗಳೂರಿನ ರತ್ನ (38), ಮಾನಸ (15), ರವಿಕುಮಾರ್ (65), ಬಾಲಾಜಿ (35), ಶ್ವೇತ (36), ಪ್ರತೀಕ್ (8) ಅಪ್ಸರ (2), ಕುಣಿಗಲ್ ತಾಲೂಕಿನ ಲಕ್ಷ್ಮಮ್ಮ (40) ಶೋಭಾ (42), ರತ್ನಮ್ಮ (60), ಚನ್ನಪಟ್ಟಣದ ಗಿರೀಶ್ ಗಾಯಗೊಂಡ ವ್ಯಕ್ತಿಗಳು. ಗಾಯಗೊಂಡವರು ಕುಣಿಗಲ್ ಪಟ್ಟಣದ ಎಂ.ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಬೆಂಗಳೂರಿನ ಪ್ರಕಾಶ್ ಅವರ ಕುಟುಂಬ ರಂಗನಾಥಸ್ವಾಮಿ ಬೆಟ್ಟದಲ್ಲಿ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಬೀಗರ ಔತಣಕೂಟವನ್ನು ಏರ್ಪಡಿಸಿ, ಬೆಂಗಳೂರಿನಿಂದ ಬಸ್ ವ್ಯವಸ್ಥೆ ಕಲ್ಪಸಿದ್ದರು. ಸಂಬಂಧಿಕರು ಹಾಗೂ ಸ್ನೇಹಿತರು ಬೀಗರ ಔತಣಕ್ಕೆ ಬಂದು ಊಟ ಮುಗಿಸಿಕೊಂಡು ಬೆಂಗಳೂರಿಗೆ ವಾಪಸಾತ್ತಿದ್ದರು. ಬಸ್ ಚಾಲನೆ ಆಗದ ಕಾರಣ, ಚಾಲಕನ್ನು ಬಸ್ ಅನ್ನು ನೂಟಲ್ ಮಾಡಿ, ಜನರಿಂದ ಬಸ್ ಅನ್ನು ತಳ್ಳಿಸಿ ಸ್ಟಾಟ್ ಮಾಡುವ ವೇಳೆ, ಬಸ್ ಸ್ಟಾಟ್ ಆಗದೇ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದೆ.

ತಪ್ಪಿದ ಭಾರಿ ದುರಂತ
ಶ್ರೀ ರಂಗನಾಥಸ್ವಾಮಿ ಬೆಟ್ಟಕ್ಕೆ ಶನಿವಾರ, ಭಾನುವಾರ ಹಾಗೂ ರಜಾ ದಿನದಂದು ತಾಲೂಕು ಸೇರಿದಂತೆ ಬೆಂಗಳೂರು ಮತ್ತು ಇತರೆ ಕಡೆಯಿಂದ ಆನೇಕ ಮಂದಿ ಇಲ್ಲಿ ಬೀಗರ ಔರಣ ಕೂಟ, ಹರಸೇವೆ ನಡೆಯುತ್ತಿವೆ ಭಕ್ತರು ಹಾಗೂ ನಾಗರಿಕರು ಬೆಟ್ಟಕ್ಕೆ ಬರಲು ರಸ್ತೆ ನಿರ್ಮಾಣ ಮಾಡಲಾಗಿದೆ ರಸ್ತೆಯ ಎರಡು ಕಡೆ ಲೋಹದ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಭಾನುವಾರ ಔತಣ ಕೂಟಕ್ಕೆ ಬಂದಿದ್ದ ಬಸ್ ಜನರನ್ನು ತುಂಬಿಕೊಡು ಬೆಂಗಳೂರಿಗೆ ವಾಪಸ್ಸ್ ಆಗುತ್ತಿದ್ದ ವೇಳೆ ಬಸ್ ಹಳ್ಳಕ್ಕೆ ಉರುಳಿದೆ ಪಕ್ಕದಲ್ಲಿ ಲೋಹದ ತಡೆಗೋಡೆ ನಿರ್ಮಾಣ ಮಾಡದಿದ್ದಲ್ಲಿ ಬಸ್ ಬೆಟ್ಟದಿಂದ ಕೆಳಕ್ಕೆ ಉರುಳಿ ಬಿದ್ದು ಭಾರಿ ಅನಾಹುತ ಸಂಭವಿಸುತ್ತಿತ್ತು. ಲೋಹದ ತಡೆಗೋಡೆಯಿಂದ ಭಾರಿ ಅನುಹುತ ತಪ್ಪಿದೆ. ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next