Advertisement

ದ್ವೇಶದ ಜ್ವಾಲೆ : ಕಟಾವಿಗೆ ಬಂದಿದ್ದ 600 ಬಾಳೇ ಬೆಳೆ ನಾಶ, ಪೊಲೀಸರಿಗೆ ದೂರು

09:15 PM Jul 21, 2022 | Team Udayavani |

ಕುಣಿಗಲ್ : ದ್ವೇಶದ ಜ್ವಾಲೆಗೆ ಕಟಾವಿಗೆ ಬಂದಿದ್ದ ಆರು ನೂರು ಬಾಳೇ ಬೆಳೆಯನ್ನು ಕಡಿದು ಹಾಕಿರುವ ಘಟನೆ ತಾಲೂಕಿನ ಕೊತ್ತಗೆರೆ ಹೋಬಳಿ ಶೆಟ್ಟಿಗೆರೆ ಗ್ರಾಮದಲ್ಲಿ ನಡೆದಿದೆ.

Advertisement

ಗ್ರಾಮದ ಜಯಲಕ್ಷ್ಮಮ್ಮ ಜಗದೀಶ, ಪುಪ್ಪಲತಾ, ಕುಮಾರ್ ಬೆಳೆ ನಾಶ ಮಾಡಿದ್ದಾರೆ ಎಂದು ಅವರ ವಿರುದ್ದ ಕುಣಿಗಲ್ ಪೊಲೀಸ್ ಠಾಣೆಗೆ ಎಸ್.ಕೆ. ರವಿಕುಮಾರ್ ದೂರು ನೀಡಿದ್ದಾರೆ.

ಘಟನೆ ವಿವರ : ಗ್ರಾಮದ ಜಯಲಕ್ಷ್ಮಮ್ಮ ಅವರಿಗೆ ಸೇರಿದ 20 ಗುಂಟೆ ಜಮೀನನ್ನು ಎರಡು ವರ್ಷಗಳ ಅವಧಿಗೆ ಎಸ್.ಕೆ.ರವಿಕುಮಾರ್ ಅವರಿಗೆ ಗುತ್ತಿಗೆ ಮಾಡಿಕೊಟ್ಟಿದ್ದರು ಜಮೀನಲ್ಲಿ ಬಾಳೆ ಬೆಳೆಯನ್ನು ಬೆಳೆದುಕೊಳ್ಳುವುದು, ಅವರಿಗೆ ತೆಂಗಿನ ಸಸಿಗಳನ್ನು ಬೆಳೆಸಿಕೊಡುವುದೆಂದು ರವಿಕುಮಾರ್ ಹಾಗೂ ಜಯಲಕ್ಷ್ಮಮ್ಮ ಅವರ ನಡುವೆ ಮಾತುಕೆತೆ ನಡೆದಿತ್ತು ಎನ್ನಲಾಗಿದ್ದು ಈ ನಡುವೆ ಒಂದು ವರ್ಷ ಯಾವುದೇ ತಂಟೆ ಇಲ್ಲದೆ ರವಿಕುಮಾರ್ ಬೆಳೆಯನ್ನು ಬೆಳೆದಿದ್ದನ್ನು ಆದರೆ ಜಯಲಕ್ಷ್ಮಮ್ಮ ಹಾಗೂ ರವಿಕುಮಾರ್ ನಡುವೆ ಹೋದಾಣಿಕೆಯಾಗದೇ ಇಬ್ಬರಲ್ಲಿ ವಿರಸ ಉಂಟಾಗಿತ್ತು ಎನ್ನಲಾಗಿದ್ದು ರವಿಕುಮಾರ್ ಬೆಳೆದಿದ್ದ 600ಬಾಳೆ ಬೆಳೆ ಕಟಾವಿಗೆ ಬಂದಿತ್ತು ಆದರೆ ಜಯಲಕ್ಷ್ಮಮ್ಮ ಹಾಗೂ ಆತನ ಮಗ ಜಗದೀಶ್ ಮಗಳು ಪುಪ್ಪಲತಾ, ಅಳಿಯಾ ಕುಮಾರ್ ನಾಲ್ಕು ಮಂದಿ ಸೇರಿ ಬಾಳೇ ಬೆಳೆಯನ್ನು ಕಡಿದು ನಾಶ ಮಾಡಿದ್ದಾರೆ ಇದನ್ನು ಪ್ರಶ್ನೆ ಮಾಡಿದಕ್ಕೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ರವಿಕುಮಾರ್ ಆರೋಪಿಸಿದ್ದಾರೆ. ಪೊಲೀಸರು ತನಿಖೆಕೈಗೊಂಡಿದ್ದಾರೆ.

ಇದನ್ನೂ ಓದಿ : ಹುಣಸೂರು : ಉಪನ್ಯಾಸಕರ ನಿಯೋಜನೆ ವಿರೋಧಿಸಿ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

Advertisement

Udayavani is now on Telegram. Click here to join our channel and stay updated with the latest news.

Next