Advertisement

ಕುಂದುವಾಡ ಕೆರೆ ಅಭಿವೃದ್ಧಿ ವೀಕ್ಷಣೆ

01:11 PM Mar 04, 2017 | Team Udayavani |

ದಾವಣಗೆರೆ: ರಾಣಿಬೆನ್ನೂರಿನ ಗಂಗಾಜಲ ದೊಡ್ಡಕೆರೆ ಸೌಂದಯೀಕರಣ ಸಂಬಂಧ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವ ಹಿನ್ನೆಲೆಯಲ್ಲಿ ವಿಧಾನ ಸಭಾ ಅಧ್ಯಕ್ಷ ಕೆ.ಬಿ. ಕೋಳಿವಾಡ ಶುಕ್ರವಾರ ಕುಂದುವಾಡ ಕೆರೆ ಹಾಗೂ ಟಿವಿ ಸ್ಟೇಶನ್‌ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. 

Advertisement

ಉಭಯ ಕೆರೆಗಳ ಭೇಟಿ ವೇಳೆ ಅವರು, ಮಹಾನಗರ ಪಾಲಿಕೆ ಆಯುಕ್ತ ಬಿ.ಎಚ್‌.ನಾರಾಯಣಪ್ಪ, ಮುಖ್ಯ ಇಂಜಿನಿಯರ್‌ ಸತೀಶ್‌ ಇತರರಿಂದ ಕೆರೆಗಳ ವಿಸೀರ್ಣ, ಅಭಿವೃದ್ಧಿಪಡಿಸಿದ ಬಗೆ, ನೀರು ಸಂಗ್ರಹಣಾ ಸಾಮರ್ಥ್ಯ, ನೀರಿನ ಮೂಲ, ಕುಂದುವಾಡ ಕೆರೆಯ ಮಧ್ಯೆದಲ್ಲಿರುವ ನಡುಗಡ್ಡೆ, ಕಾರಂಜಿ… ಹೀಗೆ ಪ್ರತಿಯೊಂದರ ಬಗ್ಗೆ ಸಮಗ್ರ ಮಾಹಿತಿ ಪಡೆದರು.

ಭದ್ರಾ ನಾಲೆಯಿಂದ ಕುಂದುವಾಡ ಹಾಗೂ ಟಿವಿ ಸ್ಟೇಷನ್‌ ಕೆರೆ ತುಂಬಿಸಿಕೊಳ್ಳಲಾಗುವುದು. ಈ ಬಾರಿ ಮಳೆಯ ಕೊರತೆ ಹಿನ್ನೆಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಆದರೂ, ಸಾರ್ವಜನಿಕರಿಗೆ ಸಮಸ್ಯೆ ಎದುರಾಗದಂತೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಆಯುಕ್ತ ಬಿ.ಎಚ್‌. ನಾರಾಯಣಪ್ಪ ಸ್ಪೀಕರ ಗಮನಕ್ಕೆ ತಂದರು. 

ಕುಂದುವಾಡ ಕೆರೆ ಒಟ್ಟಾರೆ 256 ಎಕರೆ ವಿಸೀ¤ರ್ಣ, 4.6 ಕಿಲೋ ಮೀಟರ್‌ ಸುತ್ತಳತೆ ಹೊಂದಿದೆ. ಕೆರೆಯಲ್ಲಿನ ಹೂಳು ತೆಗೆದು ಸಂದರ್ಭದಲ್ಲಿ ನಡುಗಡ್ಡೆ ನಿರ್ಮಿಸುವ ವಿಚಾರ ಹೊಳೆಯಿತು. ಈಚೆಗೆ ಫ್ಲೋಟಿಂಗ್‌ ಕಾರಂಜಿ ಪ್ರಾರಂಭಿಸಲಾಗಿದೆ. ಕೆರೆಯ ನೀರನ್ನು ಕುಡಿಯುವುದಕ್ಕೆ ಬಳಸುವುದರಿಂದ ಬೋಟಿಂಗ್‌ಗೆ ಅವಕಾಶ ನೀಡಲಾಗಿಲ್ಲ ಎಂದು ಆಯುಕ್ತರು ಮಾಹಿತಿ ನೀಡಿದರು. 

ದಾವಣಗೆರೆಗೆ 482 ಕೋಟಿ ಅನುದಾನದ ಜಲಸಿರಿ ಯೋಜನೆ ಮಂಜೂರಾಗಿದ್ದು, 24+7 ಮಾದರಿಯಲ್ಲಿ ನೀರು ಪೂರೈಸಲಾಗುವುದು. ಈಗ ನಗರದಲ್ಲಿರುವ  30 ಓವರ್‌ಹೆಡ್‌ ಟ್ಯಾಂಕ್‌ಗಳ ಜೊತೆಗೆ ಇನ್ನೂ 20 ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣವಾಗಲಿವೆ. ಪೈಪ್‌ಲೈನ್‌ ಮತ್ತಿತರ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದಾವಣಗೆರೆ ನಗರ ವ್ಯಾಪ್ತಿಯಲ್ಲಿ 400ಕ್ಕೂ ಹೆಚ್ಚು ಕೊಳವೆಬಾವಿಗಳಿವೆ. 

Advertisement

ಮಾರ್ಚ್‌ನಿಂದ ಮೇ ತಿಂಗಳವರೆಗೆ ಕುಡಿಯುವ ನೀರು ಪೂರೈಕೆಗೆ ಅವುಗಳನ್ನು ಮೀಸಲಿಡಲಾಗುವುದು. ಜಲಸಿರಿ ಯೋಜನೆ ಪೂರ್ಣಗೊಂಡ ನಂತರ 24+7 ಮಾದರಿ ನೀರು ಪೂರೈಸಲಾಗುವುದು ಎಂದು ಅವರು ತಿಳಿಸಿದರು. ಟಿವಿ ಸ್ಟೇಷನ್‌ ಕೆರೆ ವೀಕ್ಷಣೆಗೆ ತೆರಳುವು ಮುನ್ನ ಕುಂದುವಾಡ ಕೆರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್‌ ಕೋಳಿವಾಡ, ರಾಣಿಬೆನ್ನೂರಿನ 259 ಎಕರೆ ವ್ಯಾಪ್ತಿಯ ಗಂಗಾಜಲ ದೊಡ್ಡಕೆರೆ ಸೌಂದಯೀìಕರಣಕ್ಕೆ 30 ಕೋಟಿ ಮಂಜೂರಾಗಿದೆ.

ಕೆರೆಯ ಸೌಂದಯೀìಕರಣ, ವಾಯುವಿಹಾರ, ಮಕ್ಕಳಿಗೆ ಮನೋರಂಜನಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುತ್ತಿರುವ ಹಿನ್ನೆಲೆಯಲ್ಲಿ ಕುಂದುವಾಡ, ಟಿವಿ ಸ್ಟೇಷನ್‌ ಕೆರೆ ವೀಕ್ಷಿಸಲು ಬಂದಿರುವುದಾಗಿ ಹೇಳಿದರು. ಕುಡಿಯುವ ನೀರಿನ ಯೋಜನೆಗೆ ಪ್ರತ್ಯೇಕವಾಗಿ 100 ಕೋಟಿ ಅನುದಾನ ಮಂಜೂರಾಗಿದೆ. ತುಂಗಭದ್ರಾ  ನದಿ, ನಾಲೆಯ ಮೂಲಕ ನೀರು ತುಂಬಿಸಿಕೊಳ್ಳಲಾಗುವುದು. ರಾಣಿಬೆನ್ನೂರು, ಬ್ಯಾಡಗಿ, ದಾವಣಗೆರೆಗೆ 24ಹಿ7 ನೀರು ಪೂರೈಕೆಯ ಯೋಜನೆ ಸಂಬಂಧ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next