Advertisement
ಕುಂದಾಪುರ ಹೆಸರು ಬರಲು ಮೂಲಕಾರಣನಾದ ಊರಿನ ಅಧಿದೇವತೆ ಶ್ರೀ ಕುಂದೇಶ್ವರ. ಶತ-ಶತಮಾನಗಳ ಇತಿಹಾಸವುಳ್ಳ ಶ್ರೀ ಕುಂದೇಶ್ವರ ಸಹಸ್ರ ಸಹಸ್ರ ಭಕ್ತಾದಿಗಳ ಹೃದಯದಲ್ಲಿ ನೆಲೆ ನಿಂತಿದ್ದಾನೆ. ಹಾಗಾಗಿ ಇಲ್ಲಿನ ದೀಪೋತ್ಸವ, ರಥೋತ್ಸವ ಭಕ್ತರಿಗೆ ಅಪೂರ್ವವಾಗಿದೆ. ಈಚೆಗೆ ಕೆಲವು ವರ್ಷಗಳಿಂದ ದೀಪೋತ್ಸವ ಹಾಗೂ ರಥೋತ್ಸವ ವೈಭವದಿಂದ ನಡೆಯುತ್ತಿದೆ. ಊರಿಗೆ ಊರೇ ಪಾಲ್ಗೊಳ್ಳುವ ಈ ಲಕ್ಷ ದೀಪೋತ್ಸವ ಅಕ್ಷರಶಃ ಒಂದು ಸಾರ್ವಜನಿಕ ಉತ್ಸವವಾಗಿದೆ. ನಗರದ ಬೀದಿಗಳ ಬದಿ ತಾತ್ಕಾಲಿಕ ಅಂಗಡಿಗಳ ಸಾಲಿನಿಂದ ತುಂಬಿವೆ. ಈ ಬಾರಿಯ ವಿಶೇಷ ಆಕರ್ಷಣೆ ಎಂಬಂತೆ ಕೋಟೇಶ್ವರ ಕೊಡಿ ಹಬ್ಬದಿಂದ ನೇರ ಇಲ್ಲಿಗೆ ಮನೋರಂಜನಾ ತೊಟ್ಟಿಲು ಸೇರ್ಪಡೆಯಾಗಿವೆ. ಸುಮಾರು 10 ಸಾವಿರ ಹೂವುಗಳಿಂದ ತಯಾರಿಸಲಾದ ಅಯ್ಯಪ್ಪನ ವಿಗ್ರಹ ಜನರನ್ನು ಆಕರ್ಷಿಸಿತು. ಮಧ್ಯಾಹ್ನದ ಅನ್ನಪ್ರಸಾದ ಭೋಜನಕ್ಕೂ ಭಕ್ತರು ಆಗಮಿಸಿದ್ದರು.