Advertisement
ಕಾರ್ತಿಕ ಬಹುಳ ಅಮಾವಾಸ್ಯೆಯ ದಿನವಾದ ಶನಿವಾರ ಬೆಳಗ್ಗೆ ಶ್ರೀ ಕುಂದೇಶ್ವರ ದೇವರ ಸನ್ನಿಧಿ ಯಲ್ಲಿ ಬ್ರಹ್ಮಕಲಶ ಸ್ಥಾಪನೆ, ಕಲಾಭಿವೃದ್ಧಿ ಹೋಮ, ಶತರುದ್ರಾಭಿಷೇಕ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ ನಡೆಯಿತು.
ಸೂರ್ಯೋದಯದಿಂದ ಸೂರ್ಯಾಸ್ತ ಮಾನದವರೆಗೆ ಕುಂದಾಪುರ ತಾಲೂಕಿನ ಭಜನ ಮಂಡಳಿಗಳ ಒಕ್ಕೂಟದವರಿಂದ ಶ್ರೀ ದೇವರ ನಾಮ ಸಂಕೀರ್ತನೆ ಮತ್ತು ಕುಣಿತ ಭಜನೆ ನಡೆಯಿತು. ಸಹಸ್ರಾರು ಭಕ್ತರು ಭಾಗಿ
ಕುಂದಾಪುರದ ಅಧಿದೇವತೆ ಶ್ರೀ ಕುಂದೇಶ್ವರ ದೇವರ ದೀಪೋತ್ಸವಕ್ಕೆ ಊರ- ಪರವೂರ ಸಹಸ್ರಾರು ಮಂದಿ ಭಕ್ತರು ಆಗಮಿಸಿದ್ದರು. ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿಯೂ ಸಾವಿರಾರು ಮಂದಿ ಭಾಗಿಯಾಗಿ, ಪ್ರಸಾದ ಸ್ವೀಕರಿಸಿದರು. ಕುಂದಾಪುರದ ಶಾಸ್ತಿÅ ಸರ್ಕಲ್‌ನಿಂದ ಆರಂಭಗೊಂಡು ಹಳೆಯ ಬಸ್ ನಿಲ್ದಾಣದವರೆಗಿನ ಮುಖ್ಯ ರಸ್ತೆಯ ಇಕ್ಕೆಲಗಳಲ್ಲೂ ವಿವಿಧ ಮಳಿಗೆಗಳನ್ನು ಹಾಕಲಾಗಿದ್ದು, ಭಕ್ತರು ಖರೀದಿಯಲ್ಲಿಯೂ ತೊಡಗಿದ್ದರು. ವಾರಾಂತ್ಯದ ದಿನವೇ ಈ ಬಾರಿ ದೀಪೋತ್ಸವ ಬಂದಿದ್ದರಿಂದ ಜನದಟ್ಟಣೆ ಇನ್ನಷ್ಟು ಹೆಚ್ಚಿತ್ತು.
Related Articles
Advertisement
ದೀಪೋತ್ಸವದ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಹಾಗೂ ದೇವಸ್ಥಾನವನ್ನು ವಿಶೇಷವಾಗಿ ಹೂವಿನಿಂದ, ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು.
ಸಾಂಸ್ಕೃತಿಕ ವೈವಿಧ್ಯಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ನೃತ್ಯ ವಿದುಷಿ ಪ್ರವಿತಾ ಅಶೋಕ ನಿರ್ದೇಶನದಲ್ಲಿ ನೃತ್ಯವಸಂತ ನಾಟ್ಯಾಲಯದ ಕಲಾವಿದೆಯರಿಂದ ನೃತ್ಯ ಸಿಂಚನ ಪ್ರದರ್ಶನಗೊಂಡಿತು. ಇನ್ನು ನಗರದ ಪ್ರಮುಖ ಕೇಂದ್ರಗಳಲ್ಲಿ ಭಕ್ತ ಜನರ ಸಾಮೂಹಿಕ ಪ್ರಯತ್ನದಿಂದ ವೈಭವದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ರಿಕ್ಷಾ ಚಾಲಕರಿಂದ ಪುರಸಭೆ ಸಮೀಪ ಧರ್ಮಸ್ಥಳ ಮೇಳದ ಯಕ್ಷಗಾನ, ಹೊಸ ಬಸ್ ಸ್ಟಾಂಡ್ ಸಮೀಪ ರಿಕ್ಷಾ ಚಾಲಕರ ಸಂಘದಿಂದ ವಿದ್ಯಾರ್ಥಿವೇತನ, ವಿಶೇಷ ಚೇತನರಿಗೆ ಸಹಾಯಧನ ವಿತರಣೆ, ವಿಜಯ ಕುಮಾರ್ ಕೊಡಯಾಲಬೈಲ್ ಅವರ ನಾಟಕ ದೈವರಾಜ ಬಬ್ಬುಸ್ವಾಮಿ ಪ್ರದರ್ಶನಗೊಂಡಿತು. ಹೂವಿನ ವ್ಯಾಪಾರಿಗಳ ಸಂಘದಿಂದ ಜೂನಿಯರ್ ಕಾಲೇಜು ಆವರಣದಲ್ಲಿ ಸಂಗೀತ ರಸಮಂಜರಿ ನೋಡುಗರನ್ನು ರಂಜಿಸಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಶೋಭಾ ಎಸ್. ಶೆಟ್ಟಿ, ತಂತ್ರಿಗಳು, ಅರ್ಚಕ ವೃಂದ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಸಿಬಂದಿ, ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು. ಬಾಲರಾಮ ಆಕರ್ಷಣೆ
ಕುಂದೇಶ್ವರ ಫ್ರೆಂಡ್ಸ್ ವತಿಯಿಂದ ಪ್ರತೀ ವರ್ಷದಂತೆ ಈ ಬಾರಿಯೂ ಹೂವಿನಿಂದ ನಿರ್ಮಿಸಲಾದ ಕಲಾಕೃತಿ ದೀಪೋತ್ಸವದ ವಿಶೇಷ ಆಕರ್ಷಣೆಯಾಗಿದೆ. ಈ ಬಾರಿ ಅಯೋಧ್ಯೆಯ ಬಾಲರಾಮನ ಮೂರ್ತಿಯನ್ನು ಸುಮಾರು 75 ಸಾವಿರ ರೂ.ಗೂ ಅಧಿಕ ಮೌಲ್ಯದ ವಿವಿಧ ಹೂವುಗಳಿಂದ ರಚಿಸಲಾಗಿತ್ತು. ದೀಪೋತ್ಸವಕ್ಕೆ ಬಂದ ಭಕ್ತರು ಅದರ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುತ್ತಿರುವುದು ಕಂಡು ಬಂತು.