Advertisement

ಕುಂಚಾವರಂ ಗಡಿ ತಾಂಡಾಗಳಿಗೆ ಮೂಲ ಸೌಕರ್ಯ

03:18 PM Jul 24, 2017 | Team Udayavani |

ಚಿಂಚೋಳಿ: ತೆಲಂಗಾಣ ಗಡಿಭಾಗಕ್ಕೆ ಹೊಂದಿಕೊಂಡಿರುವ ಅತಿ ಹಿಂದುಳಿದ ಪ್ರದೇಶ ಕುಂಚಾವರಂ ಗಡಿಭಾಗದಲ್ಲಿ ಇರುವ ಗ್ರಾಮ/ ತಾಂಡಾಗಳಿಗೆ ಮೂಲ ಸೌಕರ್ಯಗಳನ್ನು ವಿವಿಧ ಯೋಜನೆ ಅಡಿಯಲ್ಲಿ ಮಂಜೂರಿಗೊಳಿಸಿಅನುಕೂಲ ಮಾಡಿಕೊಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ್‌ ಹೇಳಿದರು.

Advertisement

ಕುಂಚಾವರಂ ಗಡಿಭಾಗದ ಪೋಚಾವರಂ, ಮಗದಂಪುರ, ಶಿವರಾಮಪುರ, ಶಿವರೆಡ್ಡಿಪಳ್ಳಿ ಹಾಗೂ ಕುಂಚಾವರಂ ಗ್ರಾಮಗಳಲ್ಲಿ ಸಮುದಾಯ ಭವನ, ಸಿಮೆಂಟ ರಸ್ತೆ, ನೀರಿನ ಟ್ಯಾಂಕ್‌ ನಿರ್ಮಾಣ ಸೇರಿದಂತೆ ಒಟ್ಟು 2 ಕೋಟಿ ರೂ.ವೆಚ್ಚದ ಕಾಮಗಾರಿಗಳ ಅಡಿಗಲ್ಲು ಸಮಾರಂಭ ನೆರವೇರಿಸಿದ ನಂತರ ಕುಂಚಾವರಂ ಪ್ರವಾಸಿ ಮಂದಿರ ಆವರಣದಲ್ಲಿ ಏರ್ಪಡಿಸಿದ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಕುಂಚಾವರಂ ಗಡಿಭಾಗದ ಜನರಿಗೆ ಸರಕಾರದ ಸವಲತ್ತು ಸಿಗುವುದಕ್ಕಾಗಿ ಜನಸ್ನೇಹಿ ಕೇಂದ್ರ ಮತ್ತು ಬಡವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರಕಾರಿ ಕೈಗಾರಿಕೆ ತರಬೇತಿ ಕೇಂದ್ರ ಮತ್ತು ಪ್ರಸಕ್ತ ಸಾಲಿನಲ್ಲಿ ಡಾ|ಬಿ.ಆರ್‌.ಅಂಬೇಡ್ಕರ್‌ ಆಂಗ್ಲ ಮಾಧ್ಯಮ ಶಾಲೆ ಮಂಜೂರಿಗೊಳಿಸಲಾಗಿದೆ ಎಂದು ಹೇಳಿದರು.

ತಾಪಂ ಸದಸ್ಯ ಚಿರಂಜೀವಿ ಶಿವರಾಮಪುರ, ಡಿ. ಉಮಾಪತಿ, ನರಸಿಂಹಲೂ ಕುಂಬಾರ, ನರಸಿಂಹ ಸವಾರಿ, ಕುಂಚಾವರಂ ಗ್ರಾಪಂ ಅಧ್ಯಕ್ಷ ಗೋಪಾಲ ಮಾತನಾಡಿದರು. ಎಇಇ ಶಿವಾಜಿ ಡೋಣಿ, ಎಇ ಕಲಿಮೋದ್ದೀನ್‌, ಎಇ ಮುಸಾ ಖಾದ್ರಿ, ಜೆಇ ಅರ್ಷದ, ವೆಂಕಟಾಪುರ ಗ್ರಾಪಂ ಮಾಜಿ ಅಧ್ಯಕ್ಷ ಗೋಪಾಲ ಜಾಧವ್‌, ಕೆ.ಎಂ.ಬಾರಿ, ಲಕ್ಷ್ಮಣ ಆವಂಟಿ, ರಾಮಶೆಟ್ಟಿ ಪವಾರ, ಚಂದ್ರಶೆಟ್ಟಿ ರಾಠೊಡ, ಅಶೋಕ, ಸ್ಯಾಮುವೆಲ್‌, ರಾಜು ರುಸ್ತಂ, ಮೊಗಲಪ್ಪ ಇನ್ನಿತರರಿದ್ದರು. ರಮೇಶ ಸಂಕಟಿ ಸ್ವಾಗತಿಸಿದರು. ಖೀಮು ರಾಠೊಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next