Advertisement

ಕುಂದಾಪುರ: ವಲಸೆ ಕಾರ್ಮಿಕರ ತಾಣವಾದ ಸಮುದಾಯ ಭವನ​​​​​​​

12:30 AM Feb 02, 2019 | Team Udayavani |

ಕುಂದಾಪುರ: ನಗರದ ಗಾಂಧಿ ಪಾರ್ಕ್‌ ಬಳಿ ಇರುವ ಸುಂದರ ಸಮುದಾಯ ಭವನ ಉಪಯೋಗಕ್ಕಿಲ್ಲದ ಕಟ್ಟಡ. ಇದೀಗ ಕಾರ್ಯಕ್ರಮಗಳಿಗೂ ದೊರೆಯದೇ, ಕಿಟಕಿಯ ಗಾಜು ಒಡೆದುಕೊಂಡು ಅಂದಗೆಡಿಸಿಕೊಂಡಿದೆ. ಸದ್ಯ ಭವನಕ್ಕೆ ಬೀಗ ಜಡಿಯಲಾಗಿದೆ.

Advertisement

ವಲಸೆ ಕಾರ್ಮಿಕರಿಂದ ಸಮಸ್ಯೆ!
ಅಂಬೇಡ್ಕರ್‌ ಭವನದಲ್ಲಿ ಸದ್ಯ ಸರಕಾರದ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ಸಮುದಾಯ ಭವನ ಖಾಲಿಯಾಗಿದೆ. ಆದರೆ ಇದರ ದುಸ್ಥಿತಿಗೆ ಕಾರಣ ವಲಸೆ ಕಾರ್ಮಿಕರು! 

ಸಾವಿರಾರು ಕಾರ್ಮಿಕರು ಮುಂಜಾನೆ ವೇಳೆಗೆ ಎಲ್‌ಐಸಿ ಕಚೇರಿ ರಸ್ತೆ ಸೇರಿದಂತೆ ಗಾಂಧಿಪಾರ್ಕ್‌ನ ಆವರಣದಲ್ಲಿ ರಸ್ತೆ ಬದಿ ಸೇರುತ್ತಾರೆ. ಅವರನ್ನು ದಿನಗೂಲಿಗೆ ಚೌಕಾಶಿ ಮಾಡಿ ಕರೆದೊಯ್ಯಲಾಗುತ್ತದೆ. ಅವರಿಗೆ ಯಾವುದೇ ಸವಲತ್ತುಗಳು ಇಲ್ಲದ್ದರಿಂದ ಮಾನವೀಯ ನೆಲೆಯಲ್ಲಿ ಭವನದಲ್ಲಿ ಇರಲು ಬಿಡಲಾಗಿತ್ತು. ಆದರೆ ಹಾಗೆ ಅಲ್ಲಿದ್ದ ಕಾರ್ಮಿಕರು ಭವನಕ್ಕೆ ಹಾನಿಯುಂಟು ಮಾಡಿದ್ದಾರೆ. ಕಿಟಕಿ ಗಾಜುಗಳು ಒಡೆದು ಹೋಗಿದ್ದು ಪುರಸಭೆ ಮುಂಜಾಗ್ರತಾ ಕ್ರಮವಾಗಿ ಬೀಗ ಜಡಿದಿದೆ. 

10 ಲಕ್ಷ ರೂ. ಕಟ್ಟಡ
ಸ್ವರ್ಣ ಜಯತಿ ಶಹರೀ ರೋಜ್‌ಗಾರ್‌ ಯೋಜನೆ ಮೂಲಕ 10 ಲಕ್ಷ ರೂ. ವೆಚ್ಚದಲ್ಲಿ ಪುರಸಭೆಯಿಂದ ನಿರ್ಮಾಣವಾದ ಈ ಭವನ 2011ರ ಮೇ 1ರಂದು  ಉದ್ಘಾಟಿಸಲ್ಪಟ್ಟಿತ್ತು.  

ಪ್ರಯೋಜನಕ್ಕಿಲ್ಲ
ಇತ್ತೀಚಿನ ದಿನಗಳಲ್ಲಿ ಭವನ ಹಾಳು ಕೊಂಪೆಯಾಗಿದೆ. ಕಾರ್ಯಕ್ರಮಗಳು ನಡೆಯುತ್ತಿಲ್ಲ. ಶಿಲಾಫ‌ಲಕದ ಅಂಚಿಗೆ ಹಾಕಿದ ಸಿಮೆಂಟ್‌ ಬಿದ್ದಿದೆ.  ಕೆಲವು ಕಿಟಕಿಗಳೇ ಇಲ್ಲ. ಸಭಾಂಗಣದ ಒಳಗಿನ ವ್ಯವಸ್ಥೆ ಅಚ್ಚುಕಟ್ಟಾಗಿದ್ದರೂ ಉಪಯೋಗಕ್ಕಿಲ್ಲ. ಭವನ ಸಮರ್ಪಕವಾಗಿದ್ದಾಗ ಬಾಡಿಗೆ ರಹಿತವಾಗಿಯೂ ನೀಡಲಾಗುತ್ತಿತ್ತು. ಸಂಘಗಳ ಮೀಟಿಂಗ್‌ ಕೂಡಾ ಇಲ್ಲೇ ನಡೆಯುತ್ತಿತ್ತು.

Advertisement

ಅಂಗನವಾಡಿ
ಸಮುದಾಯ ಭವನದ ಇನ್ನೊಂದು ಆವರಣದಲ್ಲಿ ಬಾಲಭವನ ಇದ್ದು ಅಲ್ಲಿ ಅಂಗನವಾಡಿ ನಡೆಯುತ್ತಿದೆ. ಪ್ರತ್ಯೇಕ ಅಂಗನವಾಡಿ ರಚನೆ ಕೂಡಾ ಆಗಬೇಕಿದ್ದು ಬಾಲಭವನ ಆಗ ಪೂರ್ಣವಾಗಿ ಪ್ರಯೋಜನಕ್ಕೆ ದೊರೆಯಲಿದೆ. 

 ಶೀಘ್ರ ದುರಸ್ತಿ
ಸಮುಮುದಾಯ ಭವನದ ದುರಸ್ತಿ ಕಾರ್ಯ ಶೀಘ್ರ ನಡೆಯಲಿದೆ. ನಂತರ ಸಮುದಾಯ ಭವನ ಸಾರ್ವಜನಿಕರ ಉಪಯೋಗಕ್ಕೆ ಸಿಗಲಿದೆ. ಅಂಗನವಾಡಿ ಕಟ್ಟಡ ರಚನೆಗೆ ನೀಲನಕಾಶೆ ಸಿದ್ಧ ಆಗುತ್ತಿದ್ದು ರಚನೆ ಬಳಿಕ ಬಾಲಭವನವೂ ಉಪಯೋಗಕ್ಕೆ ದೊರೆಯಲಿದೆ.
ಗೋಪಾಲಕೃಷ್ಣ ಶೆಟ್ಟಿ 
ಮುಖ್ಯಾಧಿಕಾರಿ ಪುರಸಭೆ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next