ಕುಂದಾಪುರ: ಕುಂದಾಪುರ ಕನ್ನಡ ಮಾತನಾಡುವ ಕುಂದಾಪುರ, ಬೈಂದೂರು, ಹೆಬ್ರಿ, ಬ್ರಹ್ಮಾವರ ಮಾತ್ರವಲ್ಲದೆ ರಾಜಧಾನಿ ಬೆಂಗಳೂರು, ತುಳುನಾಡಿನ ರಾಜಧಾನಿ ಬಾಕೂìರು ಸಹಿತ ನಾಡಿನ ವಿವಿಧೆಡೆ ಆಷಾಢ ಅಮಾವಾಸ್ಯೆ ದಿನ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ರವಿವಾರ ನಡೆಯಿತು. ಇನ್ನೂ ಕೆಲವು ದಿನಗಳ ಕಾಲ ಈ ಆಚರಣೆ ಹಲವೆಡೆ ನಡೆಯಲಿದೆ.
ಬಾಕೂìರು ಸಮೀಪದ ಯಡ್ತಾಡಿಯಲ್ಲಿ ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ವತಿಯಿಂದ ಸಿನೆಮಾ ನಟ ದಿ| ಸುನಿಲ್ ಅವರ ಮನೆಯಲ್ಲಿ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆರಂಭಿಸುವ ಉದ್ದೇಶದಿಂದ ಅಸಾಡಿ ಅಮಾಸಿಯ ರವಿವಾರ ಹೋರಿಗೆ ಯೆರ್ಥ ಕೊಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಕುಂದಾಪುರದ ಬೋರ್ಡ್ ಹೈಸ್ಕೂಲಿನ ಕಲಾ ಮಂದಿರದಲ್ಲಿ, ಬಂಟರ ಸಂಘ, ಕುಂದಪ್ರಭ ಸಂಸ್ಥೆ ಸಹಯೋಗದಲ್ಲಿ ಬಂಟರ ಸಂಘದಲ್ಲಿ ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆ ರಚನೆ ಕುರಿತು ಸಮಾಲೋಚನೆ, ಕುಂದ ಅಧ್ಯಯನ ಕೇಂದ್ರ ಉಪ್ಪುಂದ, ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್, ಕುಂದಾಪ್ರ ಡಾಟ್ ಕಾಂ ಸಂಯುಕ್ತ ಆಶ್ರಯದಲ್ಲಿ ವಿಶ್ರ ಕುಂದಾಪ ಕನ್ನಡ ದಿನಾಚರಣೆ ಉಪ್ಪುಂದ ಶಂಕರ ಕಲಾಮಂದಿರದಲ್ಲಿ, ಕುಡ್ಲಗಿಪ್ಪ ಕುಂದಾಪ್ರದರ್ ಆಶ್ರಯ ದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಕನ್ನಡ ಹಬ್ಬ 2024 ಉಣR, ತಿನ್ಕ, ಪಣ್R ಮಾಡುಕಾಗ ಕಾರ್ಯಕ್ರಮ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ರಾಮಕೃಷ್ಣ ಕಾಲೇಜು ರಂಗ ಮಂದಿರದಲ್ಲಿ, ವಿಟuಲವಾಡಿ ಫ್ರೆಂಡ್ಸ್ ಕುಂದಾಪುರ ವತಿಯಿಂದ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ ಸ್ಪರ್ಧೆ, ಟೀಮ್ ಅಂಪಾರು ಟ್ರಸ್ಟ್ ಅರ್ಪಿಸುವ ಅಂಶಂ (ಅಂಪಾರು ಶಂಕರನಾರಾಯಣ ಕುಂದಾಪ್ರ ಕನ್ನಡ ಕುಟುಂಬ) 3ನೇ ವರ್ಷದ ಆಟ ಓಟ ಊಟ ಕಾರ್ಯಕ್ರಮ ಅಂಪಾರು ಶಾನ್ಕಟ್ಟು ಹೇರಿಗದ್ದೆಯಲ್ಲಿ ನಡೆಯಿತು.
ಕಾರ್ಕಳ, ಬಾಕೂìರು ಮೊದಲಾದೆ ಡೆಯೂ ಕಾರ್ಯಕ್ರಮ ನಡೆಯಿತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್, ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬಿ.ವೈ. ರಾಘವೇಂದ್ರ, ಶಾಸಕ ಕಿರಣ್ ಕುಮಾರ್ ಕೊಡ್ಗಿ ಮೊದಲಾದವರು ಶುಭಕೋರಿದ್ದಾರೆ.