Advertisement

Kundapura: ಲಾರಿಯಡಿಗೆ ಬಿದ್ದ ಸ್ಕೂಟರ್‌ ; ತಾಯಿ – ಮಗಳು ಅಪಾಯದಿಂದ ಪಾರು

12:48 AM Jun 24, 2024 | Team Udayavani |

ಕುಂದಾಪುರ: ಲಾರಿಯಡಿಗೆ ಸ್ಕೂಟರ್‌ ಬಿದ್ದ ಘಟನೆ ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಸಂಗಮ್‌ ಜಂಕ್ಷನ್‌ ಬಳಿ ರವಿವಾರ ಬೆಳಗ್ಗೆ 10ರ ಸುಮಾರಿಗೆ ಸಂಭವಿಸಿದೆ. ಅದೃಷ್ಟವಶಾತ್‌ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ತಾಯಿ ಹಾಗೂ ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advertisement

ಸಣ್ಣ ಪುಟ್ಟ ಗಾಯಗೊಂಡವರು ರೋಸಿ ಹಾಗೂ ಅವರ ಪುತ್ರಿ ರೆನಿಸ್‌ ಎಂದು ಗುರುತಿಸಲಾಗಿದೆ. ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಾರಿಯು ಹರಿಯಾಣದಿಂದ ಕೋಯಿಕ್ಕೋಡ್‌ಗೆ ಸಂಚರಿಸುತ್ತಿತ್ತು ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಸ್ಕೂಟರ್‌ ಸಂಪೂರ್ಣ ಜಖಂಗೊಂಡಿದೆ.

ಕುಂದಾಪುರ ಸಂಚಾರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದ್ದಾರೆ.

ಅಂದರ್‌ ಬಾಹರ್‌ : 7 ಮಂದಿ ಸೆರೆ
ಕುಂದಾಪುರ: ಕೊರ್ಗಿ ಗ್ರಾಮದ ಮೂಡು ಕೊರ್ಗಿಯಲ್ಲಿ ಅಂದರ್‌ ಬಾಹರ್‌ ಇಸ್ಪಿಟು ಆಡುತ್ತಿದ್ದ ಆರೋಪಿಗಳಾದ ದಿನೇಶ್‌ ಎಸ್‌., ಶೇಖರ, ಮಂಜುನಾಥ, ಉದಯ, ಹೆರಿಯ, ಸುಭಾಷ್‌ ಹಾಗೂ ಸುಭಾಶ್ಚಂದ್ರರನ್ನು ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಆರೋಪಿಗಳ ಬಳಿಯಿದ್ದ 11,820 ರೂ. ನಗದು ಹಾಗೂ ಆಟದ ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next