Advertisement

Kundapura: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು

11:29 PM Sep 23, 2024 | Team Udayavani |

ಕುಂದಾಪುರ: ಹಟ್ಟಿಯಂಗಡಿ ರೈಲ್ವೇ ಸೇತುವೆ ಬಳಿ ವಿದ್ಯುತ್‌ ಕಂಬದ ಬುಡದಲ್ಲಿ ವ್ಯಕ್ತಿಯೊಬ್ಬರು ರೈಲು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದ ಘಟನೆ ನಡೆದಿದೆ.

Advertisement

ವೋಕಾ -ಎರ್ನಾಕುಲಂ ರೈಲಿನ ಲೋಕೋ ಪೈಲಟ್‌ ಅಂಕುಲ್‌ ಎಮ್‌. ಮೂಡ್ಲಕಟ್ಟೆ ರೈಲ್ವೇ ಸ್ಟೇಷನ್‌ನಲ್ಲಿ ಮಾಹಿತಿ ನೀಡಿದ ಮೇರೆಗೆ ಪರಿಶೀಲಿಸಿದಾಗ ಅಬ್ಬಿಗುಡ್ಡಿಯ ನಾಗೇಶ್‌ ಅವರ ಮುಖಕ್ಕೆ ರೈಲು ಢಿಕ್ಕಿಯಾಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಸದ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆರಂಜೆ: ರೈಲು ಢಿಕ್ಕಿ ಹೊಡೆದು ಸಾವು
ಬ್ರಹ್ಮಾವರ: ಹೆರಂಜೆ ರೈಲ್ವೇ ಗೇಟ್‌ ಬಳಿ ರವಿವಾರ ಸಂಜೆ ರೈಲು ಢಿಕ್ಕಿ ಹೊಡೆದ ಪರಿಣಾಮ ಉಪ್ಪೂರಿನ ಮಂಜುನಾಥ ಯಾನೆ ಮಿಜಿರಾ (65) ಮೃತಪಟ್ಟಿದ್ದಾರೆ.

ಅವರು ತಂಗಿ ಮನೆಯಿಂದ ಲಕ ನಡೆದುಕೊಂಡು ಹೋಗುತ್ತಿದ್ದಾಗ ಘಟನೆ ನಡೆದಿದೆ. ಬ್ರಹ್ಮಾವರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next