Advertisement
ಕಳೆದ ಫೆ.6ರಂದು ಶಾಸ್ತ್ರಿ ಸರ್ಕಲ್ ಬಳಿ ಉಪನ್ಯಾಸಕಿಯೊಬ್ಬರ 40 ಸಾವಿರ ರೂ. ಕಳವಾಗಿತ್ತು. ಈ ಕೃತ್ಯದಲ್ಲಿ ಮಹಿಳಾ ಗ್ಯಾಂಗ್ ಕೈವಾಡದ ಶಂಕೆ ವ್ಯಕ್ತವಾಗಿತ್ತು. ಫೆ. 11ರಂದು ಹೆಮ್ಮಾಡಿ ಸಮೀಪ ಬಸ್‌ನಲ್ಲಿ ಪ್ರಯಾಣಿಸು ತ್ತಿದ್ದ ವೃದ್ಧೆಯೊಬ್ಬರ 1 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಳ್ಳತನವಾಗಿದೆ. ಇದು ಕೂಡ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಫೆ.13ರಂದು ಕುಂದಾಪುರದ ಹೊಸ ಬಸ್ ನಿಲ್ದಾಣ ಸಮೀಪದ ವಿದ್ಯಾ ಬುಕ್ ಹೌಸ್ ಬಳಿ ಪುಸ್ತಕ ಖರೀದಿಯ ಸೋಗಿನಲ್ಲಿ ಬಂದ ಸುಮಾರು 45 ವರ್ಷ ಪ್ರಾಯದ ವ್ಯಕ್ತಿಯೊಬ್ಬ ಆ ಮಳಿಗೆಯ ಮಾಲಕರ ಕಾರಿನಲ್ಲಿದ್ದ 20 ಸಾವಿರ ರೂ. ಕಳವುಗೈದಿದ್ದ.
Related Articles
Advertisement
ಕುಂದಾಪುರ ಉಪ ವಿಭಾಗ ವ್ಯಾಪ್ತಿ ಯಲ್ಲಿ ಕಳೆದೊಂದು ವಾರದೊಳಗೆ 4 ಕಳ್ಳತನ ಪ್ರಕರಣಗಳು ನಡೆದಿದ್ದು, ಈವರೆಗೆ ಯಾವುದೇ ಪ್ರಕರಣದಲ್ಲಿಯೂ ಕಳ್ಳರ ಪತ್ತೆಯಾಗಿಲ್ಲ. ಹೀಗೇ ಬಿಟ್ಟರೆ ಇದು ಹೆಚ್ಚುವ ಆತಂಕ ಜನರಲ್ಲಿದ್ದು, ಶೀಘ್ರ ವಿಶೇಷ ಪೊಲೀಸ್ ತಂಡವನ್ನು ರಚಿಸಿ, ಕಳ್ಳರನ್ನು ಪತ್ತೆಹಚ್ಚಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶೀಘ್ರ ವಿಶೇಷ ತಂಡ :
ಕಳೆದ ಕೆಲ ದಿನಗಳಿಂದ ಅಲ್ಲಲ್ಲಿ ಕಳ್ಳತನ ಪ್ರಕರಣಗಳು ನಡೆದಿದ್ದು, ಈ ಬಗ್ಗೆ ಈಗಾಗಲೇ ಪ್ರಾಥಮಿಕ ಹಂತದ ತನಿಖೆಗಳು ನಡೆದಿವೆ. ಆದರೆ ಯಾವುದೇ ಮಹತ್ವದ ಸುಳಿವು ಲಭ್ಯವಾಗಿಲ್ಲ.
ಈ ಪ್ರಕರಣಗಳನ್ನು ಭೇದಿಸಲು ಶೀಘ್ರ ವಿಶೇಷ ಪೊಲೀಸರ ತಂಡವನ್ನು ರಚಿಸಲಾಗುವುದು ಎಂದು ಕುಂದಾಪುರ ಉಪ ವಿಭಾಗದ ಡಿವೈಎಸ್‌ಪಿ ಕೆ. ಶಂಕರ್ “ಉದಯವಾಣಿ’ಗೆ ತಿಳಿಸಿದ್ದಾರೆ.