Advertisement
ಕುಂದಾಪುರ ಪುರಸಭೆಯ 23 ವಾರ್ಡುಗಳಿಗೆ ಕಾಂಗ್ರೆಸ್ 30, ಬಿಜೆಪಿ 51, ಜೆಡಿಎಸ್ 5, ಸಿಪಿಐಎಂ 7, ಬಿಎಸ್‌ಪಿ 4, ಪಕ್ಷೇತರರಿಂದ 16 ನಾಮಪತ್ರಗಳು ಸಲ್ಲಿಕೆಯಾಗಿವೆ. ಈ ಪೈಕಿ ಬಿಜೆಪಿ ಹಾಗೂ ಕಾಂಗ್ರೆಸ್ ಎಲ್ಲ 23 ವಾರ್ಡ್‌ಗಳಲ್ಲಿ ಅಧಿಕೃತ ಅಭ್ಯರ್ಥಿಗಳಲ್ಲದೆ ಡಮ್ಮಿ ಅಭ್ಯರ್ಥಿಗಳನ್ನು ನಿಲ್ಲಿಸಿದ್ದಾರೆ. ಅವರು ನಾಮಪತ್ರ ಹಿಂತೆಗೆಯುವ ಸಾಧ್ಯತೆಯಿದೆ. ಉಳಿದಂತೆ ಬಿಎಸ್‌ಪಿಯ ಇಬ್ಬರು ಅಭ್ಯರ್ಥಿಗಳು ತಲಾ ಎರಡರಂತೆ 4 ನಾಮಪತ್ರ ಸಲ್ಲಿಸಿದ್ದಾರೆ.
ಸೆಂಟ್ರಲ್ ವಾರ್ಡ್ ಕುತೂಹಲದ ಕಣವಾಗಿದ್ದು, ಬಿಜೆಪಿಯಿಂದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮಾಜಿ ಪುರಸಭಾಧ್ಯಕ್ಷ ಮೋಹನ್‌ದಾಸ್ ಶೆಣೈ, ಹಾಲಿ ಉಪಾಧ್ಯಕ್ಷ ರಾಜೇಶ್ ಕಾವೇರಿ ಇಬ್ಬರೂ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಮೋಹನ್‌ದಾಸ್ ಶೆಣೈ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿದ್ದು, ರಾಜೇಶ್ ಕಾವೇರಿ ಯವರು ಕೂಡ ಬಿಜೆಪಿ ಪರ ಹಾಗೂ ಮತ್ತೂಂದು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಆ.20ರಂದು ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯಲು ಆ.23 ಕೊನೆ ದಿನ, ಆ. 31ರಂದು ಮತದಾನ, ಸೆ. 3ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
Related Articles
ಹಾಲಿ ಅಧ್ಯಕ್ಷ – ಉಪಾಧ್ಯಕ್ಷ ಸಹಿತ ಮಾಜಿ ಅಧ್ಯಕ್ಷರ ಸಹಿತ ಘಟಾನುಘಟಿಗಳು ಚುನಾವಣಾ ಕಣದಲ್ಲಿದ್ದಾರೆ. ಹಾಲಿ ಅಧ್ಯಕ್ಷೆ ವಸಂತಿ ಮೋಹನ ಸಾರಂಗ ಅವರು ಬಿಜೆಪಿ ಅಭ್ಯರ್ಥಿಯಾಗಿ ಖಾರ್ವಿಕೇರಿ ವಾರ್ಡ್‌ನಿಂದ, ಉಪಾಧ್ಯಕ್ಷ ರಾಜೇಶ್ ಕಾವೇರಿ ಸೆಂಟ್ರಲ್ ವಾರ್ಡ್‌ನಿಂದ ಬಿಜೆಪಿ ಬಂಡಾಯ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ. ಸೆಂಟ್ರಲ್ ವಾರ್ಡ್‌ನಿಂದ ಮಾಜಿ ಅಧ್ಯಕ್ಷ ಮೋಹನ್‌ದಾಸ್ ಶೆಣೈ ಬಿಜೆಪಿಯಿಂದ, ಇತ್ತೀಚೆಗಷ್ಟೇ ಕಮ್ಯೂನಿಸ್ಟ್ ತೊರೆದು ಬಿಜೆಪಿ ಸೇರಿದ ನಿಕಟಪೂರ್ವಾಧ್ಯಕ್ಷೆ ಗುಣರತ್ನಾ ಕೋಡಿ ಉತ್ತರ ವಾರ್ಡ್, ಮಾಜಿ ಉಪಾಧ್ಯಕ್ಷ ನಾಗರಾಜ್ ಕಾಮಧೇನು ಮೀನು ಮಾರ್ಕೆಟ್ ವಾರ್ಡ್‌ನಿಂದ ಸ್ಪರ್ಧಿಗಿಳಿದಿದ್ದಾರೆ.
Advertisement
ಕಾಂಗ್ರೆಸ್‌ನಿಂದ ನಿಕಟ ಪೂರ್ವಾಧ್ಯಕ್ಷೆ ದೇವಕಿ ಸಣ್ಣಯ್ಯ ಸರಕಾರಿ ಆಸ್ಪತ್ರೆ ವಾರ್ಡ್‌ನಿಂದ, ಮಾಜಿ ಉಪಾಧ್ಯಕ್ಷ ಜಾಕೂಬ್‌ಡಿಸೋಜಾ ಚಿಕ್ಕನ್‌ಸಾಲು ಎಡಬದಿ ವಾರ್ಡ್ ಸ್ಪರ್ಧಿಗಿಳಿದಿದ್ದಾರೆ. ನಿಕಟಪೂರ್ವ ಸದಸ್ಯರು ಕಣದಲ್ಲಿದ್ದು, ಕಾಂಗ್ರೆಸ್‌ನಿಂದ ಚಂದ್ರಶೇಖರ ಖಾರ್ವಿ, ಶ್ರೀಧರ ಶೇರೆಗಾರ್, ರವಿಕಲಾ ಗಣೇಶ್ ಶೇರೆಗಾರ್, ಕೆ.ಜಿ.ನಿತ್ಯಾನಂದ, ಬಿಜೆಪಿಯಿಂದ ಪುಷ್ಪಾ ಶೇಟ್, ಜ್ಯೋತಿ ಗಣೇಶ್ ಮೊಗವೀರ ಮತ್ತೂಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.