Advertisement

ಕುಂದಾಪುರ: ನಿವೃತ್ತ ಉಪನ್ಯಾಸಕ ಎಮ್. ಕೇಶವ ಮಯ್ಯ ನಿಧನ

04:23 PM Apr 08, 2022 | Team Udayavani |

ಉಡುಪಿ : ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ 33 ವರ್ಷಗಳ ಕಾಲ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದ ಪ್ರೊ.ಎಮ್. ಕೇಶವ ಮಯ್ಯ ಅವರು ಶುಕ್ರವಾರ ಮುಂಜಾನೆ ನಿಧನ ಹೊಂದಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಅಲ್ಪಕಾಲದಿಂದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಗಂಗೊಳ್ಳಿ ಸಮೀಪದ ಮಂಕಿಯ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.

Advertisement

1970-80ರ ದಶಕದಲ್ಲಿ ಯಕ್ಷಗಾನ ಪ್ರದರ್ಶನಗಳಿಗೆ ಹೋಗಿ ರಂಗಸ್ಥಳದ ಮುಂದಿನ ಸಾಲಿನಲ್ಲಿ ಕುಳಿತು ಟೇಪ್ ರೆಕಾರ್ಡರ್ ನಲ್ಲಿ ಧ್ವನಿಮುದ್ರಿಸಿಕೊಂಡು ಅವುಗಳನ್ನು ಇಂದಿನವರೆಗೂ ಕಾಪಿಟ್ಟುಕೊಂಡಿದ್ದರು.ಯಕ್ಷಗಾನ ಆಸಕ್ತರಿಗೆ ಅವುಗಳನ್ನು ಹಂಚಿಕೊಂಡು ಆ ಕಾಲದ ಸೊಬಗನ್ನು ಇಂದಿಗೂ ಜೀವಂತವಾಗಿ ಇರಿಸಿದ್ದರು.

ಇಡಗುಂಜಿ ಮೇಳದ ಮೇರು ಕಲಾವಿದರಾದ ಕೆರೆಮನೆ ಮಹಾಬಲ ಹೆಗಡೆ ಮತ್ತು ಶಂಭು ಹೆಗಡೆಯವರ ಕಟ್ಟಾ ಅಭಿಮಾನಿಯಾಗಿದ್ದ ಅವರ ಬಳಿ ಎಲ್ಲಾ ಹಳೆಯ ಭಾಗವತರ ಹಾಡುಗಾರಿಕೆಯ ಧ್ವನಿಮುದ್ರಣ ಸಂಗ್ರಹದಲ್ಲಿತ್ತು. ಬಹುಮುಖಿ ಆಸಕ್ತಿಯ ಮಯ್ಯರು ಶಾಸ್ತ್ರೀಯ ಸಂಗೀತದ ಧ್ವನಿ ಮುದ್ರಣಗಳ ದೊಡ್ಡ ಸಂಗ್ರಹವನ್ನು ಮಾಡಿಕೊಂಡಿದ್ದರು.

ಅವರ ಅಪೇಕ್ಷೆಯಂತೆ ದೇಹವನ್ನು ಮಕ್ಕಳು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾನವಾಗಿ ನೀಡಲು ಸಂಕಲ್ಪಿಸಿದ್ದಾರೆ.ಸಮಯಪಾಲನೆ ಮತ್ತು ಶಿಸ್ಟು ಬದ್ಧ ಜೀವನಕ್ಕೆ ಪ್ರಾಶಸ್ತ್ಯ ನೀಡುತ್ತಿದ್ದ ಮಯ್ಯರು ಪತ್ನಿ,ಇಬ್ಬರು ಪುತ್ರಿಯರು ಹಾಗೂ ಅಪಾರ ಶಿಷ್ಯರನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next