Advertisement
ತಾಲೂಕು ಹಿಂದುಳಿದ ತಾಲೂಕು ಎಂದು ಹಣೆಪಟ್ಟಿ ಇದ್ದರೂ ಇಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುವುದೇ ಅಪರೂಪ.ತಾಲೂಕಿನಲ್ಲಿ ರಸ್ತೆ ಮೇಲೆ ಸಂಚರಿಸುವುದೆಂದರೆ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ಸ್ಥಿತಿ ನಿರ್ಮಾಣಗೊಂಡಿದೆ.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ 3ನೇ ಹಂತದ ಕಾಮಗಾರಿಯಲ್ಲಿ 7 ಕಿಮೀ ರಸ್ತೆ ಅಭಿವೃದ್ಧಿಗೆ ಅನುದಾನ
ಬಿಡುಗಡೆಗೊಳಿಸಲಾಗಿತ್ತು. ಗುತ್ತಿಗೆದಾರರು ಸಹ ಕಾಮಗಾರಿ ಪೂರ್ಣಗೊಳಿಸಿ ಕೇವಲ 6 ತಿಂಗಳು ಕಳೆಯುವುದರೊಳಗೆ ರಸ್ತೆಗೆ ಹಾಕಿರುವ ಡಾಂಬರ್ ಕಿತ್ತುಹೋಗಿ ಕಲ್ಲುಗಳು ರಸ್ತೆ ತುಂಬ ಕಾಣತೊಡಗಿವೆ. ಈ ರಸ್ತೆ ನೋಡಿದರೆ ಹಲವು ವರ್ಷಗಳ ಹಿಂದೆಯೇ ರಸ್ತೆ ನಿರ್ಮಿಸಲಾಗಿದೆ ಎಂದು ಭಾಸವಾಗುತ್ತದೆ. ಇದೀಗ ಈ ರಸ್ತೆಯ ಮೇಲೆ ದ್ವಿಚಕ್ರ ವಾಹನ ಸಹ ಸಂಚರಿಸದಂತಾಗಿದ್ದು ಸ್ವಲ್ಪ ಯಾಮಾರಿದರೂ ಕಲ್ಲುಗಳು ಹಾಗೂ ಗುಂಡಿ ತಪ್ಪಿಸಲು ಹೋಗಿ ಬೀಳುವ ಸ್ಥಿತಿ ನಿರ್ಮಾಣಗೊಂಡಿದೆ. ತಾಲೂಕಿಗೆ ಅಭಿವೃದ್ಧಿ ಯೋಜನೆಗಳು ಬರುವುದೇ ಅಪರೂಪ. ಬಂದ
ಅನುದಾನವಾದರೂ ಸಮರ್ಪಕವಾಗಿ ಅನುಷ್ಠಾನಗೊಂಡು ಉತ್ತಮ ರಸ್ತೆ ನಿರ್ಮಿಸಿ ಸಂಚಾರಕ್ಕೆ ನೀಡಬೇಕಾದ ಇಲಾಖೆ
ಕಣ್ಣುಮುಚ್ಚಿ ಕುಳಿತಿರುವುದರಿಂದ ರಸ್ತೆ ಈಗ ಸಂಪೂರ್ಣ ಹಾಳಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ. ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗ್ರಾಮ ಸಡಕ್ ಯೋಜನೆ ಗುತ್ತಿಗೆದಾರರ ಅಸಮರ್ಪಕ ಕಾಮಗಾರಿಯಿಂದ ಹಳ್ಳ ಹಿಡಿಯುತ್ತಿದೆ. ಈಗಲಾದರೂ ಈ ಭಾಗದ ಸಂಸದರು, ಶಾಸಕರು,ಅಧಿ ಕಾರಿಗಳು ಸರ್ಕಾರದ ಹಣ ಪೋಲಾಗದಂತೆ ಕ್ರಮ ಕೈಗೊಳ್ಳಬೇಕಿದೆ.
Related Articles
ಎಂ.ಎಚ್.ದಿವಟರ
ಪಿಎಂಜಿಎಸ್‌ವೈ ಅಧಿಕಾರಿ
Advertisement
*ಶೀತಲ ಎಸ್.ಎಂ.