Advertisement

ಇಂಡಿಗೋ ಸಂಸ್ಥೆಗೆ ಲೀಗಲ್ ನೋಟಿಸ್ ನೀಡಿದ ಕುನಾಲ್ ಕಾಮ್ರಾ: 25 ಲಕ್ಷ ರೂ. ಪರಿಹಾರಕ್ಕೆ ಆಗ್ರಹ

10:00 AM Feb 02, 2020 | keerthan |

ಹೊಸದಿಲ್ಲಿ: ಸ್ಟ್ಯಾಂಡ್ ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ತನಗೆ ಪ್ರಯಾಣ ನಿರ್ಬಂಧ ವಿಧಿಸಿರುವ ಇಂಡಿಗೋ ವಿಮಾನಯಾನ ಸಂಸ್ಥೆಯ ವಿರುದ್ಧ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

Advertisement

ಪತ್ರಕರ್ತ ಅರ್ನಾಬ್ ಗೋಸ್ವಾಮಿಯನ್ನು ವಿಮಾನದಲ್ಲಿ ತರಾಟೆಗೆ ತೆಗೆದುಕೊಂಡ ಕಾರಣಕ್ಕೆ ಕುನಾಲ್ ಕಾಮ್ರಾಗೆ ಇಂಡಿಗೋ ಆರು ತಿಂಗಳ ಕಾಲ ಹಾರಾಟ ನಿರ್ಬಂಧ ವಿಧಿಸಿತ್ತು.

ಕುನಾಲ್ ಕಾಮ್ರಾ ಪರ ವಕೀಲರು ಇಂಡಿಗೋ ಸಂಸ್ಥೆಗೆ ನೋಟೀಸ್ ನೀಡಿದ್ದು, ಪ್ರಕರಣದಿಂದ ತನ್ನ  ಕಕ್ಷಿದಾರರಿಗೆ ಮಾನಸಿಕ ಕಿರುಕುಳವಾಗಿದೆ ಮತ್ತು ಪ್ರಯಾಣ ನಿರ್ಬಂಧದಿಂದ ದೇಶ ವಿದೇಶಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಲಾಗದೇ ನಷ್ಟ ಅನುಭವಿಸಿದ್ದಾರೆ. ಈ ಕಾರಣಕ್ಕಾಗಿ ಸಂಸ್ಥೆ 25 ಲಕ್ಷ ರೂಪಾಯಿಗಳನ್ನು ಪರಿಹಾರ ರೂಪದಲ್ಲಿ ನೀಡಬೇಕು ಎಂದು ನೋಟಿಸ್ ನೀಡಲಾಗಿದೆ.

ಜನವರಿ 28ರಂದು ಮುಂಬೈನಿಂದ ಲಕ್ನೋಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪತ್ರಕರ್ತ ಅರ್ನಾಬ್ ಗೋಸ್ವಾಮಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಆ ಪ್ರಶ್ನೆಗಳಿಗೆ ಅರ್ನಾಬ್ ಉತ್ತರಿಸದೇ ಸುಮ್ನನಿದ್ದರು. ಇದನ್ನು ವಿಡಿಯೋ ಮಾಡಿದ್ದ ಕುನಾಲ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಕುನಾಲ್ ರ ಈ ವರ್ತನೆ ಒಪ್ಪಿಕೊಳ್ಳತಕ್ಕದ್ದಲ್ಲ ಎಂದಿದ್ದ ಇಂಡಿಗೋ ಸಂಸ್ಥೆ ಅವರಿಗೆ ಆರು ತಿಂಗಳ ಕಾಲ ಪ್ರಯಾಣ ನಿರ್ಬಂಧ ಹೇರಿತ್ತು. ನಂತರ ಇತರ ವಿಮಾನ ಯಾನ ಸಂಸ್ಥೆಗಳು ಕೂಡಾ ನಿರ್ಬಂಧ ಹೇರಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next