Advertisement

ಹೆಣ್ಣಿನ ಬಗ್ಗೆ ಹೇಗೆ ಮಾತಾಡಬೇಕು ಅಂತ ಕುಮಾರಸ್ವಾಮಿ ಅರ್ಥಮಾಡಿಕೊಳ್ಳಬೇಕು : ಸುಮಲತಾ

01:18 PM Jul 05, 2021 | Team Udayavani |

ಮೈಸೂರು : ಸಿಎಂ ಆಗಿದ್ದಾಗ ಅವ್ರು ಏನು ಮಾಡಿದ್ರು, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಯಾಕೆ ಮೈ ಶುಗರ್ ಪ್ರಾರಂಭ ಮಾಡಿಲ್ಲ. ಮೈಶುಗರ್ ಅನ್ನು ಯಾವುದಾದರು ಒಂದು ಮಾಡೆಲ್ ನಲ್ಲಿ ಪ್ರಾರಂಭ ಮಾಡಿ ಅಂತ ಸರ್ಕಾರಕ್ಕೆ ಮನವಿ ಮಾಡಿದ್ದೆ.
ನನ್ನ ಸಲಹೆ ಪಡೆದು ಸರ್ಕಾರ ನಿರ್ಧಾರ ಮಾಡಿದೆ ಅನ್ನೋ ಅಷ್ಟು ಪವರ್ ನನಗೆ ಇಲ್ಲ. ಯಾಕೆ ಕುಮಾರಸ್ವಾಮಿ ಹೀಗೆ ಮಾತಾಡಿದ್ರು ಅಂತ ಗೊತ್ತಿಲ್ಲ. ಯಾವುದಾದರು ಒಂದು ಮಾದರಿಯಲ್ಲಿ ಕಾರ್ಖಾನೆ ಓಪನ್ ಮಾಡಲಿ. 400 ಕೋಟಿ ಅಕ್ರಮ ಆಗಿದೆ ಅಂತ ಹೇಳಿದ್ರು. ರೈತರ ಪರವಾಗಿ ಆ ಕಾರ್ಖಾನೆ ಪ್ರಾರಂಭ ಆಗಬೇಕು ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ ನೀಡಿದ್ದಾರೆ.

Advertisement

ಈ ಬಗ್ಗೆ ಸರ್ಕಾರ ತೀರ್ಮಾನ ಮಾಡಲಿ. ಅಂತ ಮೂರ್ಖ ಕೆಲಸ ನಾನು ಮಾಡೊಲ್ಲ. ನಾನು ಖಾಸಗೀಕರಣ ಮಾಡಿ ಅಂತ ಹೇಳಿಲ್ಲ. ಎಲ್ಲರ ಜೊತೆ ಮಾತಾಡಿ ನಾನು ಕಾರ್ಖಾನೆ ಪ್ರಾರಂಭ ಮಾಡಿ ಅಂತ ಮನವಿ ಮಾಡಿದ್ದೇನೆ. ಮಾಜಿ ಸಿಎಂ ಆದವರು ಹೇಗೆ ಮಾತಾಡಬೇಕು ಅಂತ ಗೊತ್ತಿಲ್ಲ. ಮಾಜಿ ಸಿಎಂ ಆದವರು ಹೀಗೆ ಮಾತಾಡೋದು ಸರಿನಾ. ಮಹಿಳೆ ಬಗ್ಗೆ ಪರಸನಲ್ ಟೀಕೆ ಎಷ್ಟು ಸರಿ ಎಂದರು.

ಇಂತಹ ಮಾತುಗಳಿಗೆ ನಾನು ಐ ಡೋಂಟ್ ಕೇರ್. ಮಾಜಿ ಸಿಎಂ ಆದವರು ಹೇಗೆ ಮಾತಾಡಬೇಕು ಅಂತ ಗೊತ್ತಿಲ್ಲವಾ. ಚುನಾವಣೆ ಸಮಯದಲ್ಲಿ ನಾನು ಇಂತಹ ಪದ ಬಳಿಕೆ ಮಾಡಿಲ್ಲ. ಜನ ಈಗಾಗಲೇ ಪಾಠ ಕಲಿಸಿದ್ದಾರೆ. ಸಂಸದರು ಅನ್ನೋದು ಬಿಡು ಒಂದು ಹೆಣ್ಣಿನ ಬಗ್ಗೆ ಹೇಗೆ ಮಾತಾಡಬೇಕು ಅಂತ ಮಾಜಿ ಸಿಎಂ ಅರ್ಥ ಮಾಡಿಕೊಳ್ಳಬೇಕು. ಕೆಆರ್.ಎಸ್ ಬಿರುಕು ವಿಚಾರದಲ್ಲಿ ನಾನು ಯಾರ ಬಗ್ಗೆಯೂ ಮಾತನಾಡಿಲ್ಲ ಎಂದರು.

ನಾನು ಗಣಿ ಸಚಿವರನ್ನ ಕರೆದುಕೊಂಡು ಹೋಗಿ ತೋರಿಸಿದ್ದೇನೆ. ಆಗ 100 ಕೋಟಿ ದಂಡ ಹಾಕಿದ್ದಾರೆ. ಯಾಕೆ ಕುಮಾರಸ್ವಾಮಿ ಹೀಗೆ ಮಾತಾಡ್ತಿದ್ದಾರೆ ಗೊತ್ತಿಲ್ಲ. ಅಕ್ರಮ ಗಣಿಗಾರಿಕೆ ತನಿಖೆಗೆ ನಾನು ಒತ್ತಾಯ ಮಾಡ್ತೀನಿ. ಕುಮಾರಸ್ವಾಮಿ ಅವ್ರಿಗೆ ಯಾಕೆ ಈ ಆತಂಕ ಗೊತ್ತಿಲ್ಲ. ಮಂಡ್ಯ ಹಾಲು ಉತ್ಪಾದಕ ಮಂಡಳಿ ಅಕ್ರಮ ವಿಚಾರವಾಗಿ ಮಾತನಾಡಿದ ಅವರು, ಗೊತ್ತಿದ್ರು ಕುಮಾರಸ್ವಾಮಿ ಯಾಕೆ ಸುಮ್ಮನೆ ಇದ್ದಾರೆ. ಇದಕ್ಕೆ ಯಾವುದೇ ಉತ್ತರ ಇಲ್ಲ. ಸ್ಕ್ಯಾಮ್ ಮಾಡೋವಾಗ ಕುಮಾರಸ್ವಾಮಿ ಸುಮ್ಮನೆ ಇದ್ದರು. ನಾನು ಕೆ.ಆರ್.ಎಸ್ ಬಗ್ಗೆ ಮಾತಾಡಿದಾಗ ಯಾಕೆ ಕುಮಾರಸ್ವಾಮಿ ಮಾತಾಡಬೇಕು. ಕುಮಾರಸ್ವಾಮಿ ಮಾತಿನಿಂದ ಅವ್ರ ಸಂಸ್ಕಾರ, ಅವ್ರ ವ್ಯಕ್ತಿತ್ವ ಏನು ಅಂತ ತೋರಿಸುತ್ತಿದ್ದಾರೆ ಎಂದರು.

ಹೀಗೆ ಹಗುರವಾದ ವಯಕ್ತಿಕ ಟೀಕೆ ಮಾಡೋದು ಯಾವ ಸಂಸ್ಕಾರ. ಮಾಜಿ ಸಿಎಂ ಆದವರಿಗೆ ಪದಗಳು ಮತ್ತು ಭಾಷೆಯ ಮೇಲೆ ಹಿಡಿತ ಇಲ್ಲವಾ? ಯಾವ ಮಾತು ಅಡಬೇಕು, ಯಾವ ಮಾತು ಆಡಬಾರದು ಅನ್ನೋ ಜ್ಞಾನ ಇಲ್ಲವಾ? ಈ ರೀತಿಯ ಮಾತು ಒಪ್ಪುವುದಾ? ಎಂದು ಕುಮಾರಸ್ವಾಮಿ ವಿರುದ್ದ ಸುಮಲತಾ ಆಕ್ರೋಶ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next