Advertisement
ಸವಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಣ್ಚಪ್ಪಾಡಿ ಗ್ರಾಮದ ಕುಮಾರ ಮಂಗಲದಲ್ಲಿ ನಿವೇಶನ ರಹಿತರಿಗೆ ಗ್ರಾ.ಪಂ. ಕಾಯ್ದಿರಿಸಿದ ಜಾಗವನ್ನು ಅರ್ಹರನ್ನು ಗುರುತಿಸಿ ಹಕ್ಕುಪತ್ರ ನೀಡಲಾಗಿತ್ತು. ಆದರೆ ಸರ್ವೆ ಇಲಾಖೆಯವರು ಗಡಿಗುರುತು ಮಾಡದೇ ಯಾರಿಗೆ ಯಾವ ನಿವೇಶನ ಎಂಬುದೇ ತಿಳಿಯದಾಗಿತ್ತು. ಜಾಗದ ಮೂಲ ನಕಾಶೆ ಇಲ್ಲದ ಕಾರಣ ನಿವೇಶನ ಪಡೆಯಲು ತೊಡಕಾಗಿತ್ತು. ಇದಕ್ಕೆ ಪೂರಕವೆಂಬಂತೆ ಕಂದಾಯ ಹಾಗೂ ಸರ್ವೇ ಇಲಾಖೆಗಳ ಅಧಿಕಾರಿಗಳ ವಿಳಂಬ ಧೋರಣೆ ಯಿಂದ ನಿವೇಶನವು ಫಲಾನುಭವಿಗಳ ಕನವರಿಕೆಯಲ್ಲೇ ಉಳಿದಿತ್ತು.
ಜಯಂತಿ ರಮೇಶ್ ಆಚಾರ್ಯ, ಯಮುನಾ ರಮೇಶ, ರಾಮಕ್ಕ, ಕುಸುಮಾ ದಯಾನಂದ, ದೇವಕಿ ಗಂಗಾಧರ, ವಿಜಯಾ ರವಿ, ಲಕ್ಷ್ಮೀ ವಿಶ್ವನಾಥ, ಲಕ್ಷ್ಮೀ ವಿಜಯ, ಸುಂದರಿ ಕುಂಞ, ಅಮಿತಾ ಉಮೇಶ್, ನಿರ್ಮಲಾ ಕೃಷ್ಣಪ್ಪ, ಹೊನ್ನಮ್ಮ ಕುಶಾಲಪ್ಪ, ಜಯಾ ಶೇಖರ ಗೌಡ, ಕಮಲಾ ಬಾಲಣ್ಣ ಗೌಡ, ಸೇಸಮ್ಮ ತ್ಯಾಂಪಣ್ಣ ಗೌಡ, ಸೇಸಮ್ಮ ಬೆಳಿಯಪ್ಪ ಗೌಡ, ಗಾಯತ್ರಿ ಜನಾರ್ದನ ಗೌಡ, ಕಮಲಾ ಸೌಂದರ್ಯರಾಜನ್, ತಾರಾ ಕುಮಾರಿ ರೋಹಿತ್, ಕಮಲಾ ತಿಮ್ಮಪ್ಪ ಗೌಡ, ಶ್ಯಾಮಲಾ ರವಿ ಆಚಾರ್ಯ, ಶೋಭಾ ಕೃಷ್ಣಪ್ಪ ಹಕ್ಕುಪತ್ರ ಪಡೆದವರು.
Related Articles
ನಿವೇಶನ ಹಂಚಿಕೆ ಕುರಿತಂತೆ ಸವಣೂರು ಗ್ರಾ.ಪಂ., ತಾ.ಪಂ., ಕಂದಾಯ ಇಲಾಖೆ, ಸಹಾಯಕ ಆಯುಕ್ತರ ಕಚೇರಿ, ಭೂ ಮಾಪನ ಇಲಾಖೆ, ಸರ್ವೇಯರ್ ಹೀಗೆ ಎಲ್ಲರನ್ನು ಸಂಪರ್ಕಿಸಿ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಹಳೆ ನಕಾಶೆ ಸಿಗದಿರುವ ಕಾರಣ ಹೊಸದಾಗಿ ನಕಾಶೆ ರಚಿಸುವ ಸಲುವಾಗಿ ತಾ.ಪಂ.ಗೆ ಮನವಿ ನೀಡಿ, ನಕಾಶೆ ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ನಿವೇಶನ ವಿಂಗಡಣೆಯಾಗಿ ತಿಂಗಳೊಳಗೆ ಫಲಾನುಭವಿಗಳು ತಮಗೆ ಗುರುತಿಸಿದ ಸ್ಥಳದಲ್ಲಿ ಮನೆ ನಿರ್ಮಾಣ ಮಾಡಲು ಅವಕಾಶ ಕಲ್ಪಿಸಿಕೊಡಲಿದೆ.
Advertisement
ಉದಯವಾಣಿ ಸುದಿನ ವರದಿಗ್ರಾ.ಪಂ.ನ ಈ ಹಿಂದಿನ ಮತ್ತು ಪ್ರಸ್ತುತ ಆಡಳಿತದ ಅವಧಿಯಲ್ಲಿ ಸಾಮಾನ್ಯ ಸಭೆ, ಗ್ರಾಮಸಭೆ, ಕಂದಾಯ ಅದಾಲತ್ ಹೀಗೆ ಎಲ್ಲ ಸಭೆಗಳಲ್ಲೂ ನಿವೇಶನದ ಸಮಸ್ಯೆ ಕುರಿತಂತೆ ಸಾಕಷ್ಟು ಬಾರಿ ಪ್ರಸ್ತಾವವಾಗಿತ್ತು. ಫಲಾನುಭವಿಗಳು ನಿವೇಶನ ಪಡೆಯಲು ನಡೆಸಿದ ಅಲೆದಾಟದ ಕುರಿತಂತೆ ಮೊದಲ ಬಾರಿಗೆ ಉದಯವಾಣಿ ಸುದಿನ ಜೂ. 25ರಂದು ವಿಸ್ತೃತ ವರದಿ ಪ್ರಕಟಿಸಿತ್ತು. ಇದ ರಿಂದ ಎಚ್ಚೆತ್ತ ಸರ್ವೇಯರ್ ನಿವೇ ಶನದ ಸೂಕ್ತ ದಾಖಲೆ ರಚನೆ ಮಾಡಿ ಕೊಡುವಂತೆ ಗ್ರಾ.ಪಂ.ಗೆ ತಿಳಿಸಲಾಗಿದ್ದು, ಕಡತ ವಿಲೇವಾರಿ ಕೆಲಸಗಳು ನಡೆಯು ತ್ತಿವೆ. ದಾಖಲೆ ತಯಾರಿಯಾದ ಕೂಡಲೇ ಎಲ್ಲ ಫಲಾನುಭವಿಗಳಿಗೂ ಹಂಚಿಕೆ ಯಾದ ನಿವೇಶನದ ಗಡಿಗುರುತು ಮಾಡಲಾಗು ವುದು ಎಂದು ತಿಳಿಸಿದ್ದರು. ಹಲವರ ಪ್ರಯತ್ನ
ಅನೇಕ ಅಡೆತಡೆಗಳನ್ನು ನಿವಾರಿಸಿ ಕೊನೆಗೂ 24 ಕುಟುಂಬಗಳಿಗೆ ನಿವೇಶನದ ಗುರುತು ಮಾಡಲಾಗಿದೆ.. ಫಲಾನುಭವಿಗಳಿಗೆ ನಿವೇಶನ ಒದಗಿಸಿಕೊಡುವಲ್ಲಿ ಹಲವರ ಪ್ರಯತ್ನ ಇದೆ. ಎಲ್ಲರಿಗೂ ಗ್ರಾ.ಪಂ. ವತಿಯಿಂದ ಕೃತಜ್ಞತೆಗಳು.
– ಇಂದಿರಾ ಬಿ.ಕೆ.,
ಅಧ್ಯಕ್ಷೆ, ಸವಣೂರು ಗ್ರಾ.ಪಂ. ಸಂತಸ
ಕುಮಾರಮಂಗಲ ನಿವೇಶನಕ್ಕಾಗಿ ಕಾದಿರಿಸಿದ ಸ್ಥಳದ ಗಡಿಗುರುತು ಕಾರ್ಯ ಪೂರ್ಣ ಗೊಂಡಿರುವುದು ಸಂತಸ. ನಿವೇಶ ನದ ನಿರೀಕ್ಷೆಯಲ್ಲಿದ್ದ ಫಲಾನುಭವಿಗಳಲ್ಲಿ ನಗು ಮೂಡು ವಂತಾಗಿದ್ದು, ವರ್ಷಗಳ ಬೇಡಿಕೆ ಈಡೇರಿದೆ.
– ರಾಜೇಶ್ವರಿ ಕನ್ಯಾಮಂಗಲ
ಉಪಾಧ್ಯಕ್ಷರು, ತಾ.ಪಂ ಪುತ್ತೂರು ಸತತ ಪ್ರಯತ್ನದಿಂದ ಹಕ್ಕುಪತ್ರ
ಕುಮಾರಮಂಗಲದಲ್ಲಿ ಗ್ರಾ.ಪಂ.ನಿಂದ ಕಾಯ್ದಿರಿಸಿದ ನಿವೇಶನಕ್ಕೆ 2010-11 ಸಾಲಿನಲ್ಲಿ ಆಯ್ಕೆ ಮಾಡಿದ ಫಲಾನುಭವಿಗಳಿಗೆ ಹಕ್ಕು ಪತ್ರ ದೊರಕಿದ್ದು 2017-18ನೇ ಸಾಲಿನಲ್ಲಿ. ಆದರೆ ನಿವೇಶನದ ಗಡಿಗುರುತು ಮಾಡದೇ ಫಲಾನುಭವಿಗಳಿಗೆ ನಿವೇಶನ ದೊರಕಿರಲಿಲ್ಲ .ಈ ಹಿಂದಿನ ಅವಧಿ ಮತ್ತು ಈಗಿನ ಅವಧಿಯಲ್ಲಿ ಹಲವು ಬಾರಿ ಸಾಮಾನ್ಯ ಸಭೆಯಲ್ಲಿ,ಕಂದಾಯ ಅದಾಲತ್‌ನಲ್ಲಿ ಪ್ರಸ್ತಾವಿಸಲಾಗಿತ್ತು. ಈಗ ಎಲ್ಲರ ಸತತ ಪ್ರಯತ್ನದಿಂದ ದೊಡ್ಡ ಸಮಸ್ಯೆಯೊಂದು ಬಗೆಹರಿದಿದೆ.
-ಗಿರಿಶಂಕರ ಸುಲಾಯ,
ಗ್ರಾ.ಪಂ. ಸದಸ್ಯ, ಸವಣೂರು ಪ್ರವೀಣ್ ಚೆನ್ನಾವರ