Advertisement

Kuluru: ಹೆಚ್ಚುತ್ತಿರುವ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕ್ರಮಕ್ಕೆ ಆಗ್ರಹ; ಸಿಸಿಟಿವಿಗೂ ಬೇಡಿಕೆ

06:31 PM Oct 11, 2024 | Team Udayavani |

ಕೂಳೂರು: ಕೂಳೂರು ಸೇತುವೆಯ ಮೇಲಿಂದ ನದಿಗೆ ಹಾರುವ ಪ್ರಕರಣಗಳು ಹೆಚ್ಚುತ್ತಿದೆ. 20203-24ರಲ್ಲಿ 5ಕ್ಕೂ ಅಧಿಕ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಉಳ್ಳಾಲ ಸೇತುವೆಯಂತೆ ಕೂಳೂರು ಸೇತುವೆಗೂ ಭದ್ರತೆಯ ಅಗತ್ಯವಿದೆ ಎಂದ ಒತ್ತಾಯ ಕೇಳಿಬಂದಿದೆ.

Advertisement

ಇತ್ತೀಚೆಗೆ ಅನ್ಯ ರಾಜ್ಯದ ಮಹಿಳೆಯೊಬ್ಬರು ನದಿ ಹಾರಿ ಆತ್ಮಹತ್ಯೆಗೆ ಯತ್ನಿಸಿದಾಗ ಸ್ಥಳೀಯ ಮೀನುಗಾರರು ರಕ್ಷಿಸಿದ್ದರು. ಇದೀಗ ಪ್ರಭಾವಿ ವ್ಯಕ್ತಿ ಮಮ್ತಾಜ್‌ ಅಲಿ ಪ್ರಕರಣದ ಬಳಿಕ ಇದೀಗ ಭದ್ರತೆಯ ಅಗತ್ಯ ಕಂಡು ಬರುತ್ತಿದೆ.

ಕೂಳೂರು ಸೇತುವೆಯಲ್ಲಿ ಇದುವರೆಗೆ ಬೀದಿ ದೀಪ ಹಾಕುವ ಯೋಜನೆಯೇ ಜಾರಿಯಾಗಿಲ್ಲ. ಇದರಿಂದ ಯಾವುದೇ ದುರ್ಘ‌ಟನೆ ಆದರೂ ಕಾಣದಂತಹ ಸ್ಥಿತಿಯಿದೆ. ಈ ಹಿಂದೆ ಹಲವಾರು ವಾಹನ ಗಳು ಇಲ್ಲಿನ ಅಪಾಯಕಾರಿ ಸೇತುವೆ ಕೆಳಭಾಗಕ್ಕೆ ಉರುಳಿ ಪ್ರಾಣಹಾನಿಯಾಗಿದೆ, ವಾಹನ ಹಾನಿಯಾಗಿದೆ. ಉಡುಪಿ ಕಡೆ ಯಿಂದ ಸೇತುವೆಯು ತಿರುವು ಹೊಂದಿದ್ದು ಹೊಸದಾಗಿ ಸಂಚರಿಸುವ ವಾಹನ ಸವಾರರಿಗೆ, ಲಾರಿ ಚಾಲಕರಿಗೆ ಹೆಚ್ಚಾಗಿ ತಿಳಿಯದೆ ಸೇತುವೆಯ ತಡೆಗೋಡೆಗೆ ಢಿಕ್ಕಿ ಯಾಗಿ ತಡೆಗೋಡೆಯೇ ಬಿರುಕು ಬಿಟ್ಟಿದೆ.

ಇದೀಗ ಆತ್ಮಹತ್ಯೆಯಂತಹ ಪ್ರಕರಣಗಳು ಉಳ್ಳಾಲದಿಂದ ಕೂಳೂರು ಕಡೆಗೆ ಶಿಫಾrಗಿದ್ದು, ಉಳ್ಳಾಲ ಸೇತುವೆಯಲ್ಲಿ ಸುರಕ್ಷ ಕ್ರಮವನ್ನು ತೆಗೆದುಕೊಂಡ ರೀತಿಯಲ್ಲೇ ಕೂಳೂರು ಸೇತುವೆಯಲ್ಲಿ ಸಿಸಿ ಟಿವಿ, ಎರಡೂ ಕಡೆಗಳಲ್ಲಿ ನೆಟ್‌ ಆಳವಡಿಸುವೆಗೆ ಕುರಿತಂತೆ ಕ್ರಮ ಜರಗಿಸಬೇಕು ಎಂಬ ಆಗ್ರಹವಿದೆ.

ಜಿಲ್ಲಾಧಿಕಾರಿಗೆ ಮನವಿ
ಕೂಳೂರು ಸೇತುವೆ ಅಪಘಾತ ಹಾಗೂ ಆತ್ಮಹತ್ಯೆಯ ತಾಣವಾಗಿ ಬದಲಾಗುವ ಬಗ್ಗೆ ಕೂಳೂರು ನಾಗರಿಕ ಹಿತರಕ್ಷಣಾ ಸಮಿತಿ ಜಿಲ್ಲಾಧಿಕಾರಿಗಳ ಗಮನ ಸೆಳೆಯಲು ನಿರ್ಧರಿಸಿದೆ. ಕಳೆದ ಒಂದು ತಿಂಗಳಲ್ಲಿ ಮೂರು ಪ್ರಕರಣ ದಾಖಲಾಗಿದೆ. ಇದನ್ನು ತಡೆಯಬೇಕಿದೆ.ಬೀದಿ ದೀಪ, ಫೆನ್ಸಿಂಗ್‌ ಹಾಕುವ ಮೂಲಕ ಆತ್ಮಹತ್ಯೆ ಪ್ರಕರಣವನ್ನು ತಡೆಯಬೇಕಿದೆ.
– ಗುರುಚಂದ್ರ ಹೆಗ್ಡೆ ಗಂಗಾರಿ ಕೂಳೂರು, ಅಧ್ಯಕ್ಷರು ನಾಗರಿಕ ಹಿತರಕ್ಷಣಾ ಸಮಿತಿ ಕೂಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next