Advertisement

ಲೊಂಗೆವಾಲಾ ಹೀರೋ ನಿಧನ

06:00 AM Nov 18, 2018 | |

ಚಂಡೀಗಢ‌: 1971ರ “ಇಂಡೋ ಪಾಕ್‌’ ಯುದ್ಧದ ಲೊಂಗೆವಾಲಾ ಕದನದ ವೇಳೆ, ಕೆಚ್ಚೆದೆಯಿಂದ ಹೋರಾಡಿ, ಸಾವಿರಾರು ಯುವಕರಲ್ಲಿ ದೇಶಭಕ್ತಿಯ ಸ್ಫೂರ್ತಿ ತುಂಬಿದ ನಿವೃತ್ತ ಬ್ರಿಗೇಡಿಯರ್‌ ಕುಲ್ದೀಪ್‌ ಸಿಂಗ್‌ ಚಾಂದ್‌ಪುರಿ (78) ಶನಿವಾರ ಮೊಹಾ ಲಿಯ ಆಸ್ಪತ್ರೆಯಲ್ಲಿ ನಿಧನರಾದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಸೋಮವಾರ, ಸಕಲ ಸೇನಾ ಮರ್ಯಾದೆ ಯೊಂದಿಗೆ ಅವರ ಅಂತ್ಯಸಂಸ್ಕಾರ ನಡೆಸಲಾಗುವುದು. ಇಂಡೋ-ಪಾಕ್‌ ಯುದ್ಧದ ಒಂದು ಭಾಗ ‌ವಾದ ಲೊಂಗೆವಾಲಾ ಕದನದಲ್ಲಿ ಅವರು ತೋರಿದ ಸಾಹಸಕ್ಕಾಗಿ, ಸೇನೆಯಲ್ಲಿ ನೀಡಲಾಗುವ 2ನೇ ಅತಿ ಪ್ರತಿಷ್ಠಿತ ಶೌರ್ಯ ಪ್ರಶಸ್ತಿಯಾದ ಮಹಾವೀರ ಚಕ್ರವನ್ನು ಅವರಿಗೆ ನೀಡಿ ಗೌರವಿಸಲಾಗಿತ್ತು.  

Advertisement

ಏನಿದು ಲೊಂಗೆವಾಲಾ ಕದನ: ಇಂಡೋ- ಪಾಕ್‌ ಕದನ ವೇಳೆ, ರಾಜಸ್ಥಾನದ ಥಾರ್‌ ಮರುಭೂಮಿಯ ಭಾಗವಾದ ಲೊಂಗೆ ವಾಲಾದ ಕಡೆಯಿಂದ ಭಾರತದ ಮೇಲೆ ಪಾಕಿ ಸ್ತಾನ ಸೈನಿಕರು 1971ರ ಡಿ. 4ರ ರಾತ್ರಿ ಏಕಾಏಕಿ ಆಕ್ರಮಣ ಮಾಡಿದ್ದರು. ಪಾಕಿ ಸ್ತಾನದ ಅಂದಾಜು 3000 ಸೈನಿಕರ ವಿರುದ್ಧ ತಮ್ಮೊಂದಿಗಿದ್ದ ಕೇವಲ 120 ಸೈನಿಕರೊಂದಿಗೆ ಹೋರಾಡಿದ್ದ ಬ್ರಿಗೇಡಿ ಯರ್‌ ಚಾಂದ್‌ಪುರಿ, ಪಾಕಿ ಸ್ತಾನದ ಯಾವೊಬ್ಬ ಸೈನಿ ಕನೂ ಭಾರತದ ಗಡಿಯೊಳಗೆ ಕಾಲಿಡದಂತೆ ನೋಡಿಕೊಂಡಿದ್ದರು. 1997ರಲ್ಲಿ ತೆರೆಕಂಡಿದ್ದ ಹಿಂದಿ ಚಿತ್ರ “ಬಾರ್ಡರ್‌’, ಇದೇ ಯುದ್ಧದ ಕಥೆಯನ್ನು ಹೊಂದಿದ್ದು ಅದರಲ್ಲಿ ಬ್ರಿಗೇಡಿಯರ್‌ ಚಾಂದ್‌ಪುರಿ ಪಾತ್ರವನ್ನು ನಟ ಸನ್ನಿ ಡಿ ಯೋಲ್‌ ನಿರ್ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next