Advertisement
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯ ಸರಿಯಾಗಿ 300 ರನ್ನಿಗೆ ಆಲೌಟಾಗಿದ್ದು, ಕೊನೆಯಲ್ಲಿ ಒಂದು ಓವರ್ ಆಡಿದ ಭಾರತ ಇನ್ನೂ ರನ್ ಖಾತೆ ತೆರೆದಿಲ್ಲ.
Related Articles
Advertisement
ಭಾರತಕ್ಕೆ ಇಲ್ಲಿ ಕೊನೆಯ ಇನ್ನಿಂಗ್ಸ್ ಬ್ಯಾಟಿಂಗ್ ಅವಕಾಶ ಸಿಗು ವುದರಿಂದ ಇದೊಂದು ಕಠಿನ ಸವಾಲಾಗಬಹುದು. ಆದ್ದರಿಂದ ಮೊದಲ ಸರದಿಯಲ್ಲಿ ದೊಡ್ಡ ಮೊತ್ತ ಪೇರಿಸಿದರೆ ಸೇಫ್.
ಕುಲದೀಪ್ ಮಿಂಚಿನ ದಾಳಿಆಸ್ಟ್ರೇಲಿಯ ಮ್ಯಾಟ್ ರೆನ್‌ಶಾ (1) ಅವರನ್ನು ದ್ವಿತೀಯ ಓವರಿ ನಲ್ಲೇ ಕಳೆದುಕೊಂಡರೂ ವಾರ್ನರ್-ಸ್ಮಿತ್ ಜೋಡಿ ಭಾರತದ ಮೇಲೆ ಘಾತಕವಾಗಿ ಎರಗಿತು. ಇವರಿಬ್ಬರು ಸೇರಿಕೊಂಡು ಲಂಚ್ ಒಳಗಾಗಿ ತಂಡದ ಮೊತ್ತವನ್ನು 131ಕ್ಕೆ ಒಯ್ದರು. ಇದೇ ರಭಸದಲ್ಲಿ ಮುನ್ನುಗ್ಗಿದ್ದರೆ ಆಸೀಸ್ ಮೊದಲ ದಿನದಲ್ಲೇ ಇನ್ನೂ ಕೆಲವು ವಿಕೆಟ್ ಉಳಿಸಿಕೊಂಡು 350ರ ಗಡಿ ದಾಟುವ ಎಲ್ಲ ಸಾಧ್ಯತೆ ಇತ್ತು. ಆದರೆ ಕುಲದೀಪ್ ಯಾದವ್ ಕಾಂಗರೂಗಳ ಕಾಲೆಳೆದೇ ಬಿಟ್ಟರು! ದ್ವಿತೀಯ ಅವಧಿಯಲ್ಲಿ ವಾರ್ನರ್ (56), ಹ್ಯಾಂಡ್ಸ್‌ಕಾಂಬ್ (8) ಮತ್ತು ಮ್ಯಾಕ್ಸ್‌ವೆಲ್ (8) ವಿಕೆಟ್‌ಗಳನ್ನು ಕಿತ್ತೆಸೆದ ಕುಲದೀಪ್ ಭಾರತದ ಪಾಲಿನ ಆಶಾಕಿರಣವಾಗಿ ಗೋಚರಿಸಿದರು. ಉಮೇಶ್ ಯಾದವ್ ಮತ್ತು ಅಶ್ವಿನ್ ಕೂಡ ಈ ಅವಧಿಯಲ್ಲಿ ಒಂದೊಂದು ವಿಕೆಟ್ ಕಿತ್ತರು. ಟೀ ವೇಳೆ ಆಸೀಸ್ ಸ್ಥಿತಿ 6ಕ್ಕೆ 208 ಎಂಬಲ್ಲಿಗೆ ಮುಟ್ಟಿತು. ಸ್ವೀವ್ ಸ್ಮಿತ್ 3ನೇ ಶತಕ
ಕಪ್ತಾನನ ಆಟವಾಡಿದ ಸ್ಟೀವನ್ ಸ್ಮಿತ್ 173 ಎಸೆತಗಳಿಂದ 111 ರನ್ ಬಾರಿಸಿ ಮೆರೆದರು (14 ಬೌಂಡರಿ). ಇದು ಈ ಸರಣಿಯಲ್ಲಿ ಸ್ಮಿತ್ ಬಾರಿಸಿದ 3ನೇ ಶತಕ. ಇದರೊಂದಿಗೆ ಅವರು ಭಾರತದ ಸರಣಿಯೊಂದರ ವೇಳೆ ಅತ್ಯಧಿಕ 3 ಸೆಂಚುರಿ ಹೊಡೆದ ಆಸ್ಟ್ರೇಲಿಯದ ಮೊದಲ ಹಾಗೂ ಒಟ್ಟಾರೆಯಾಗಿ ಕೇವಲ 2ನೇ ನಾಯಕನೆನಿಸಿದರು. 2012-13ರ ಸರಣಿ ವೇಳೆ ಇಂಗ್ಲೆಂಡ್ ನಾಯಕ ಅಲಸ್ಟೇರ್ ಕುಕ್ ಕೂಡ 3 ಸಲ ನೂರರ ಗಡಿ ದಾಟಿದ್ದರು. ಸ್ಮಿತ್ ಅವರ ಉಳಿದೆರಡು ಶತಕಗಳು ಪುಣೆ (109) ಮತ್ತು ರಾಂಚಿಯಲ್ಲಿ (ಅಜೇಯ 178) ದಾಖಲಾಗಿವೆ. ಒಟ್ಟಾರೆಯಾಗಿ ಇದು ಸ್ಮಿತ್ ಅವರ 20ನೇ ಟೆಸ್ಟ್ ಶತಕ. ಅಂತಿಮವಾಗಿ ಅವರು ಅಶ್ವಿನ್ ಮೋಡಿಗೆ ಸಿಲುಕಿದರು. ಆರಂಭಕಾರ ವಾರ್ನರ್ ಅವರಿಂದ ಈ ಸರಣಿಯಲ್ಲಿ ಮೊದಲ ಅರ್ಧ ಶತಕ ದಾಖಲಾಯಿತು. ಅವರ ಗಳಿಕೆ 56 ರನ್. 87 ಎಸೆತ ಗಳ ಈ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ, ಒಂದು ಸಿಕ್ಸರ್ ಸೇರಿತ್ತು. ಆಸೀಸ್ ಸರದಿಯ ಮತ್ತೂಂದು ಫಿಫ್ಟಿ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಬ್ಯಾಟಿ ನಿಂದ ಬಂತು (127 ಎಸೆತ, 57 ರನ್, 4 ಬೌಂಡರಿ, 1 ಸಿಕ್ಸರ್).
ಭಾರತದ ಪರ ದಾಳಿಗಿಳಿದ ಎಲ್ಲ 5 ಬೌಲರ್‌ಗಳೂ ವಿಕೆಟ್ ಕೀಳುವಲ್ಲಿ ಯಶಸ್ವಿಯಾದರು. ಕುಲದೀಪ್ ಹೊರತುಪಡಿಸಿದರೆ ಉಮೇಶ್ ಯಾದವ್ ಹೆಚ್ಚಿನ ಯಶಸ್ಸು ಸಂಪಾದಿಸಿದರು (69ಕ್ಕೆ 2). ಸ್ಕೋರ್ ಪಟ್ಟಿ
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್
ಡೇವಿಡ್ ವಾರ್ನರ್ ಸಿ ರಹಾನೆ ಬಿ ಕುಲದೀಪ್ 56
ಮ್ಯಾಟ್ ರೆನ್‌ಶಾ ಬಿ ಯಾದವ್ 1
ಸ್ಟೀವನ್ ಸ್ಮಿತ್ ಸಿ ರಹಾನೆ ಬಿ ಅಶ್ವಿನ್ 111
ಶಾನ್ ಮಾರ್ಷ್ ಸಿ ಸಾಹಾ ಬಿ ಯಾದವ್ 4
ಪೀಟರ್ ಹ್ಯಾಂಡ್ಸ್‌ಕಾಂಬ್ ಬಿ ಕುಲದೀಪ್ 8
ಗ್ಲೆನ್ ಮ್ಯಾಕ್ಸ್‌ವೆಲ್ ಬಿ ಕುಲದೀಪ್ 8
ಮ್ಯಾಥ್ಯೂ ವೇಡ್ ಬಿ ಜಡೇಜ 57
ಪ್ಯಾಟ್ ಕಮಿನ್ಸ್ ಸಿ ಮತ್ತು ಬಿ ಕುಲದೀಪ್ 21
ಸ್ಟೀವ್ ಓ’ಕೀಫ್ ರನೌಟ್ 8
ನಥನ್ ಲಿಯೋನ್ ಸಿ ಪೂಜಾರ ಬಿ ಭುವನೇಶ್ವರ್ 13
ಜೋಶ್ ಹ್ಯಾಝಲ್‌ವುಡ್ ಔಟಾಗದೆ 2
ಇತರ 11
ಒಟ್ಟು (ಆಲೌಟ್) 300
ವಿಕೆಟ್ ಪತನ: 1-10, 2-144, 3-153, 4-168, 5-178, 6-208, 7-245, 8-269, 9-298.
ಬೌಲಿಂಗ್:
ಭುವನೇಶ್ವರ್ ಕುಮಾರ್ 12.3-2-41-1
ಉಮೇಶ್ ಯಾದವ್ 15-1-69-2
ಆರ್. ಅಶ್ವಿನ್ 23-5-54-1
ರವೀಂದ್ರ ಜಡೇಜ 15-1-57-1
ಕುಲದೀಪ್ ಯಾದವ್ 23-3-68-4
ಭಾರತ ಪ್ರಥಮ ಇನ್ನಿಂಗ್ಸ್
ಕೆ.ಎಲ್. ರಾಹುಲ್ ಬ್ಯಾಟಿಂಗ್ 0
ಮುರಳಿ ವಿಜಯ್ ಬ್ಯಾಟಿಂಗ್ 0
ಇತರ 0
ಒಟ್ಟು (ವಿಕೆಟ್ ನಷ್ಟವಿಲ್ಲದೆ) 0
ಬೌಲಿಂಗ್:
ಜೋಶ್ ಹ್ಯಾಝಲ್‌ವುಡ್ 1-1-0-0