Advertisement
ಕ್ಷೇತ್ರದ ಪ್ರಧಾನ ಅರ್ಚಕ ವೇ| ಮೂ| ಸೀತಾರಾಮ ಎಡಪಡಿತ್ತಾಯ ಅವರು ವಿವಿಧ ವೈಧಿಕ ವಿದಿವಿಧಾನಗಳೊಂದಿಗೆ ಮೂಲ ಪ್ರಸಾದ ತೆಗೆದರು. ಆ ಬಳಿಕ ಪುರೋಹಿತರು, ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಸದಸ್ಯರು,ಅಧಿಕಾರಿಗಳು, ಸಿಬಂದಿಗೆ ನೀಡಲಾಯಿತು. ಭಕ್ತರು ಮೃತ್ತಿಕಾ ಪ್ರಸಾದ ಸ್ವೀಕರಿಸಿದರು. ಅಪರಾಹ್ನ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು.
Related Articles
ಕ್ಷೇತ್ರದಲ್ಲಿ ಡಿ.1ರಿಂದ 15ರ ವರೆಗೆ ಚಂಪಾಷಷ್ಠಿ ಮಹೋತ್ಸವ ನಡೆಯಲಿದೆ. ಡಿ.1ರಂದು ಕೊಪ್ಪರಿಗೆ ಏರುವ ಮೂಲಕ ಜಾತ್ರಾ ಮಹೋ ತ್ಸವ ಆರಂಭವಾಗಲಿದೆ. ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ ನೆರವೇರಲಿದೆ.
Advertisement
ಸರ್ಪ ಸಂಸ್ಕಾರ ಇಲ್ಲಚಂಪಾಷಷ್ಠಿ ಪ್ರಯುಕ್ತ ಡಿ.1ರಿಂದ ಡಿ. 15ರಂದು ಕೊಪ್ಪರಿಗೆ ಇಳಿಯುವ ತನಕ ಕ್ಷೇತ್ರದಲ್ಲಿ ಸರ್ಪ ಸಂಸ್ಕಾರ ಸೇವೆ ನಡೆಯುವುದಿಲ್ಲ. ಡಿ.16ರಿಂದ ಸರ್ಪ ಸಂಸ್ಕಾರ ಸೇವೆ ಆರಂಭವಾಗಲಿದೆ.