Advertisement

Kukke ದೇವಳ ವಾರ್ಷಿಕ ಆದಾಯ 123 ಕೋಟಿ ರೂ. :ಕೊರೊನಾ ಬಳಿಕ ಚೇತರಿಕೆ

08:16 PM Apr 16, 2023 | Team Udayavani |

ಸುಬ್ರಹ್ಮಣ್ಯ: ರಾಜ್ಯದ ಪ್ರಸಿದ್ಧ ಯಾತ್ರಾ ಕ್ಷೇತ್ರ, ಅತಿ ಹೆಚ್ಚಿನ ಆದಾಯ ಹೊಂದಿರುವ ರಾಜ್ಯದ ನಂಬರ್‌ ವನ್‌ ಸ್ಥಾನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಕಳೆದೆರಡು ವರ್ಷಗಳಲ್ಲಿ ಕೋವಿಡ್‌ ಕಾರಣದಿಂದ ಕಡಿಮೆ ಆದಾಯಕ್ಕೆ ತೃಪ್ತಿಪಟ್ಟುಕೊಂಡಿದ್ದರೆ, 2022-23ನೇ ಸಾಲಿನಲ್ಲಿ ಮತ್ತೆ ಎದ್ದು ನಿಂತಿದೆ. ಈಗಷ್ಟೇ ಮುಗಿದ ಆರ್ಥಿಕ ವರ್ಷದಲ್ಲಿ ದೇವಾಲಯ 123 ಕೋಟಿ ರೂ. ಆದಾಯ ಪಡೆದಿದೆ.

Advertisement

2022ರ ಏಪ್ರೀಲ್‌ನಿಂದ 2023 ಮಾರ್ಚ್‌ 31ರ ತನಕದ ಆರ್ಥಿಕ ವರ್ಷದಲ್ಲಿ 123,64,49,480.47 ರೂ. ಆದಾಯ ಗಳಿಸಿರುವ ಕುಕ್ಕೆ ಕ್ಷೇತ್ರ ಈ ಬಾರಿಯೂ ರಾಜ್ಯದಲ್ಲಿ ನಂಬರ್‌ ವನ್‌ ಸ್ಥಾನ ಪಡೆಯುವ ನಿರೀಕ್ಷೆ ಇದೆ.

ದೇವಸ್ಥಾನಕ್ಕೆ ಮುಖ್ಯವಾಗಿ ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಆದಾಯ ಬರುತ್ತದೆ. 2021-22ನೇ ಆರ್ಥಿಕ ವರ್ಷದಲ್ಲಿ ದೇವಳವು 72,73,23,758.07 ರೂ. ಆದಾಯ ಗಳಿಸುವ ಮೂಲಕ ಕೊರೊನಾ ಹೊಡೆತ ಪ್ರತಿಫ‌ಲಿಸಿತ್ತು. ಕೊರೊನಾ ಹಿನ್ನೆಲೆಯಲ್ಲಿ ಭಕ್ತರ ಪ್ರವೇಶ ನಿರ್ಭಂಧವಿದ್ದ ಕಾರಣ 2019ರಿಂದ 22ರವರೆಗೆ ಆದಾಯ ಇಳಿಮುಖವಾಗಿತ್ತು. 2019-20ರಲ್ಲಿ 98,92,24,193.34 ರೂ., 2020-21ರಲ್ಲಿ-68,94,88,039.17 ರೂ., 2021-22ರಲ್ಲಿ 72,73,758,07 ಆದಾಯ ಗಳಿಸಿತ್ತು.

ಆದಾಯದಲ್ಲಿ ಏರಿಕೆ:
2006-07ರಲ್ಲಿ ದೇವಳದ ಆದಾಯ 19.76 ಕೋಟಿ ರೂ. ಆಗಿತ್ತು. 2007-08ರಲ್ಲಿ 24.44 ಕೋಟಿ ರೂ.ಗಳಿಗೆ ಏರಿ ರಾಜ್ಯದ ಶ್ರೀಮಂತ ದೇವಾಲಯವಾಗಿ ಗುರುತಿಸಿಕೊಂಡಿತು.

ನಂತರದ ವರ್ಷಗಳಲ್ಲಿ ರಾಜ್ಯದ ನಂ.1 ದೇವಸ್ಥಾನವೆಂಬ ಖ್ಯಾತಿಗೂ ಪಾತ್ರವಾಯಿತು. 2008-09ರಲ್ಲಿ 31 ಕೋಟಿ, 2009-10ರಲ್ಲಿ 38.51 ಕೋಟಿ ರೂ., 2011-12ರಲ್ಲಿ 56.24 ಕೋಟಿ, 2012-13ರಲ್ಲಿ 66.76 ಕೋಟಿ ರೂ., 2013-14ರಲ್ಲಿ 68 ಕೋಟಿ ರೂ, 2014-15ರಲ್ಲಿ 77 ಕೋ., 2015-16ರಲ್ಲಿ 88 ಕೋಟಿ, 2016-17ರಲ್ಲಿ 91.69 ಕೋಟಿ, 2017-18ರಲ್ಲಿ 95.92 ಕೋಟಿ, 2018-19ರಲ್ಲಿ 92,09 ಕೋಟಿ, 2019-20ರಲ್ಲಿ 98.92 ಕೋಟಿ, 2020-21ರಲ್ಲಿ 68.94 ಕೋಟಿ, 2021-22ರಲ್ಲಿ 72.73 ಕೋಟಿ ಆದಾಯ ಗಳಿಸಿ ಸತತ ರಾಜ್ಯದ ನಂಬರ್‌ ವನ್‌ ಆದಾಯ ಗಳಿಕೆಯ ದೇವಳವಾಯಿತು. ಕುಕ್ಕೆಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರುತ್ತಿದ್ದು, ಆದಾಯವೂ ಹೆಚ್ಚಿದೆ. ಈ ವರ್ಷ ಕೂಡ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆಯಬಹುದು ಎಂದು ಅಂದಾಜಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next