Advertisement

ಕೆಟಿಎಂ ಹವಾ

11:03 AM Oct 16, 2017 | |

ಫ‌ಸ್ಟೋ.. ಸೆಕೆಂಡೋ… ಅದಾವುದೋ ಒಂದು ಫ್ಲೋರ್‌ನಲ್ಲಿ ನಿಂತಿರುವ ಗರ್ಲ್ಫ್ರೆಂಡ್‌ ನೋಡುತ್ತಿರುವಾಗ ಒಂದೊಳ್ಳೆ ಬೈಕ್‌ನಲ್ಲಿ ಕಾಲೇಜು ಕ್ಯಾಂಪಸ್‌ ಪ್ರವೇಶಿಸಿದರೆ ಹೇಗಿರುತ್ತೆ? ಅದೆಷ್ಟೋ ಯುವಕರು ಹೀಗೊಮ್ಮೆ ಯೋಚಿಸಿರುತ್ತಾರೆ. ಹಾಗೇ… ಕಾಲೇಜ್‌ ಕ್ಯಾಂಪಸ್‌ ಗೇಟ್‌ ಮೂಲಕ ಬೈಕ್‌ನಲ್ಲಿ ಬುರ್ರೆಂದು ಒಳ ಪ್ರವೇಶಿಸುವ ಹ್ಯಾಂಡ್‌ಸಮ್‌ ಹುಡುಗನನ್ನು ಕಾರಿಡಾರ್‌ನಿಂದಲೇ ಎರಗಿ ನೋಡುವ ಹುಡುಗಿಯರೂ ಕಡಿಮೆ ಇಲ್ಲ.

Advertisement

ಅದರಲ್ಲೂ ಕಳೆದ ಆರೆಂಟು ವರ್ಷಗಳಿಂದೇಚೆ ಬೈಕ್‌ ಇಲ್ಲದೇ ಕಾಲೇಜು ಮೆಟ್ಟಿಲೇರುವ ಹುಡುಗ ಅಥವಾ ಸ್ಕೂಟರ್‌ ಇಲ್ಲದೇ ಹೋಗುವ ಹುಡುಗಿಯರ ಪ್ರಮಾಣ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಲೇ ಇದೆ. ಇದನ್ನೇ ಗುರಿಯಾಗಿಸಿಕೊಂಡ ಆಟೋಮೊಬೈಲ್‌ ಕಂಪನಿಗಳು ಯುವಕ-ಯುವತಿಯರ ಬೇಡಿಕೆಗೆ ತಕ್ಕುದಾದ ಸ್ಟೈಲಿಶ್‌ ಬೈಕ್‌, ಸ್ಕೂಟರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ.

ಹೌದು, ಇಂಥ ಕ್ರೇಜಿ ಹುಡುಗರನ್ನು ಆಕರ್ಷಿಸಿ, ಜನಪ್ರಿಯತೆ ಗಳಿಸಿದ ಬೈಕ್‌ಗಳಲ್ಲಿ ಕೆಟಿಎಂ ಕೂಡ ಒಂದು. ಸದ್ಯ ಭಾರತದಲ್ಲಿ ಕೆಟಿಎಂ ಡ್ನೂಕ್‌ 390 ಎಬಿಎಸ್‌ ಮತ್ತು ಕೆಟಿಎಂ ಆರ್‌ಸಿ 390 ಸಾಕಷ್ಟು ಬೇಡಿಕೆ ಇರುವ ಕೆಟಿಎಂನ ಉತ್ತಮ ಶ್ರೇಣಿ ಬೈಕ್‌ಗಳಾಗಿವೆ. 22ರಿಂದ 32ರ ವಯೋಮಾನದ ಯುವಕರು ಅದೆಷ್ಟು ಲೈಕ್‌ ಮಾಡುತ್ತಾರೋ ಹೆಚ್ಚಾಕಡಿಮೆ 40ರೊಳಗಿನ ವಯಸ್ಸಿನವರೂ ಈಗ ಈ ಬೈಕ್‌ಗಳನ್ನು ಓಡಿಸುವ ಕ್ರೇಜ್‌ ಬೆಳೆಸಿಕೊಂಡಿದ್ದಾರೆ.

ಇನ್ನೊಂದು ಗಮನಾರ್ಹ ಸಂಗತಿ ಏನೆಂದರೆ ಆಸ್ಟ್ರೇಲಿಯಾ ಮೂಲದ ಈ ಕಂಪನಿ ಭಾರತದಲ್ಲಿ ಅಲ್ಪಾವಧಿಯಲ್ಲಿ ಉತ್ತಮ ಮಾರುಕಟ್ಟೆ ಕಂಡುಕೊಂಡಿದೆ. 
ಸ್ಫೋರ್ಟ್ಸ್ ಲುಕ್‌ ಇರುವ ತನ್ನ ಬೈಕ್‌ಗಳನ್ನು ಪರಿಚಯಿಸಿ ಯುವಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಇತ್ತೀಚೆಗೆ ಹುಡುಗಿಯರೂ ಇಂಥ ನ್ಪೋರ್ಟ್ಸ್ ಬೈಕ್‌ಗಳನ್ನು ಓಡಿಸುತ್ತಿರುವುದನ್ನೂ ಗಮನಿಸಬಹುದಾಗಿದೆ.

ತಂತ್ರಜ್ಞಾನ ಮತ್ತು ಸುರಕ್ಷತೆ
ಕೆಟಿಎಂ ಡಿಜಿಟಲ್‌ ಅಳವಡಿಕೆಯಲ್ಲಿ ಉಳಿದೆಲ್ಲಾ ಬೈಕ್‌ಗಳಿಗಿಂಥ ಒಂದು ಹೆಜ್ಜೆ ಮುಂದೆ ಇದೆ ಎನ್ನಬಹುದು. ಸ್ಪೀಡೋಮೀಟರ್‌, ಟೆಕೋ ಮೀಟರ್‌, ಟ್ರಿಪ್‌ ಮತ್ತು ಫ್ಯೂಲ್‌ ಇಂಡಿಕೇಟರ್‌, ಸೆಲ್ಫ್ ಸ್ಟಾರ್ಟ್‌ ಬಟನ್‌ಗಳೆಲ್ಲವೂ ಆಧುನಿಕ ತಂತ್ರಜ್ಞಾನಗಳಿಂದ ಕೂಡಿವೆ. ಡ್ನೂಕ್‌ ಹಾಗೂ ಆರ್‌ಸಿ ಬೈಕ್‌ಗಳಲ್ಲಿ ಗುರುತಿಸಬಹುದಾದ ಪ್ರಮುಖ ಅಂಶ ಇಷ್ಟೆ. ಡ್ನೂಕ್‌ ಸಾಫ್ಟ್ ರೋಡ್‌ಗಳಲ್ಲಿ ಒಳ್ಳೆಯ ರೈಡ್‌ ಅನುಭವ ನೀಡುತ್ತದೆ. ಆರ್‌ಸಿ ರಫ್ ರೋಡ್‌ಗಳಿಗೆ ಹೇಳಿಮಾಡಿಸಿದ ಬೈಕ್‌ ಎನ್ನಬಹುದು.

Advertisement

ಕೆಟಿಎಂ ಮೋಡಿ ಏನು?
ನ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್‌ಗ‌ಳ ಸಾಲಿಗೆ ಸೇರಿದ್ದು ಅನ್ನೋದೇ ಕೆಟಿಎಂ ಬೈಕ್‌ಗಳಲ್ಲಿನ ವಿಶೇಷ ಗುಣ. ಈ ಮೂಲಕವೇ ಕೆಟಿಎಂ ಭಾರತದಲ್ಲಿ ಮಾರುಕಟ್ಟೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕೆಲವು ತಿಂಗಳ ಹಿಂದಷ್ಟೇ ಒಂದಿಷ್ಟು ಬದಲಾವಣೆ ಮೂಲಕ ಮಾರುಕಟ್ಟೆ ಕಂಡುಕೊಂಡಿರುವ ಡ್ನೂಕ್‌ 390 ಎಬಿಎಸ್‌, ಆರ್‌ಸಿ 90 ಹಾಗೂ ನಂತರದ ಶ್ರೇಣಿ ಬೈಕ್‌ಗಳು 350ಕ್ಕೂ ಜಾಸ್ತಿ ಸಿಸಿ ಹೊಂದಿರುವ ಕಾರಣ ಸಹಜವಾಗಿಯೇ ಜಗ್ಗುವ ಸಾಮರ್ಥ್ಯ ಹೆಚ್ಚು. 9000 ಆರ್‌ಪಿಎಸ್‌ ಜತೆಗೆ 43ಬಿಎಚ್‌ಪಿ ಪವರ್‌ ಇರುವ ಕಾರಣ ವೇಗ ಅತ್ಯಧಿಕ. ಇಂದಿನ ಯುವಕರು ಇದನ್ನು ಇಷ್ಟ ಪಡಲಿಕ್ಕೂ ಇದೊಂದು ಪ್ರಮುಖ ಕಾರಣವಾಗಿದೆ.

ಗುಣಮಟ್ಟದ ಎಂಜಿನ್‌ ಬಳಕೆ
ಸಿಂಗಲ್‌ ಸಿಲಿಂಡರ್‌ ಹೊಂದಿರುವ 4ಸ್ಟ್ರೋಕ್‌ ಲಿಕ್ವಿಡ್‌ ಕೂಲ್ಡ್‌ ಎಂಜಿನ್‌ಗಳನ್ನು ಕೆಟಿಎಂ ಡ್ನೂಕ್‌ನಲ್ಲಿ ಬಳಸಿಕೊಳ್ಳಲಾಗಿದ್ದರೆ, ಆರ್‌ಸಿ ಕೂಡ ಸಿಂಗಲ್‌ ಸಿಲಿಂಡರ್‌ 4ಸ್ಟ್ರೋಕ್‌ ಹೊಂದಿದೆ. ಡ್ನೂಕ್‌ ಮತ್ತು ಆರ್‌ಸಿ ಪ್ರತಿ ಗಂಟೆಗೆ 180 ಮತ್ತು 179 ಕಿ.ುà. ಓಡುವ ಸಾಮರ್ಥ್ಯ ಹೊಂದಿದೆ. ಈ ಎರಡೂ ಬೈಕ್‌ಗಳೂ 4 ಸೆಕೆಂಡ್‌ಗಳಲ್ಲಿ 0-60 ಕಿ.ುà. ವೇಗದ ಗುರಿ ಮುಟ್ಟುವಂತೆ ವಿನ್ಯಾಸಗೊಳಿಸಲಾಗಿದೆ. ಇಂಥ ವೇಗ ಸಾಮರ್ಥ್ಯ ಇರುವ ಕಾರಣಕ್ಕಾಗಿಯೇ ಡ್ನೂಕ್‌ ಬೈಕಿಗೆ ಆ್ಯಂಟಿ ಲಾಕ್‌ ಬ್ರೇಕ್‌ ಸಿಸ್ಟಮ್‌ ಅಳವಡಿಸಲಾಗಿದೆ. ಇದನ್ನು ಆರ್‌ಸಿ ಬೈಕ್‌ಗಳಿಗೆ ನೀಡಲಾಗಿಲ್ಲ. ಆದರೆ ಈ ಎರಡೂ ಬೈಕ್‌ಗಳೂ ಕಡಿಮೆ ಅವಧಿಯಲ್ಲಿ ಕಂಟ್ರೋಲ್‌ಗೆ ಬರುವಂತೆ ವಿನ್ಯಾಸಗೊಂಡಿವೆ.

ಬೆಲೆ ಎಷ್ಟು?
-1.69 ಲಕ್ಷ ರೂ.ಡ್ನೂಕ್‌ 390
-1.99 ಲಕ್ಷ ರೂ.ಆರ್‌ಸಿ 390
-170 ಮಿ.ಮೀ. ಡ್ನೂಕ್‌ನ ಗ್ರೌಂಡ್‌ ಕ್ಲಿಯರೆನ್ಸ್‌
-157 ಮಿ.ಮೀ. ಆರ್‌ಸಿ ಗ್ರೌಂಡ್‌ ಕ್ಲಿಯರೆನ್ಸ್‌
-11 ಲೀಟರ್‌ ಪೆಟ್ರೋಲ್‌ ಶೇಖರಣೆ ಸಾಮರ್ಥ್ಯ
-154 160 ಕೆಜಿ ಬೈಕ್‌ನ ಭಾರ

* ಅಗ್ನಿಹೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next