ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಸಾರ್ಟಿಸಿ) ವಿವಿಧ ವಿಭಾಗಗಳಲ್ಲಿ ರಾಷ್ಟ್ರಮಟ್ಟದ 9 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.
ಇದರಲ್ಲಿ 6 ಎಡಿವರ್ಲ್ಡ್ ಶೋಡೌನ್ ಚಿನ್ನದ ಪ್ರಶಸ್ತಿ, 2 ಗ್ರೋ ಕೇರ್ ಇಂಡಿಯಾ ಮತ್ತು 1 ಪಿಆರ್‌ಎಸ್‌ಐ ರಾಷ್ಟ್ರೀಯ ಪ್ರಶಸ್ತಿ ಸೇರಿದೆ.
ಅಶ್ವಮೇಧ ಕ್ಲಾಸಿಕ್ ಬಸ್‌ಗಳ ಪರಿಚಯ ಮತ್ತು ಪರಿಣಾಮಕಾರಿ ಸಾರ್ವಜನಿಕ ಸಂಪರ್ಕ ಉಪಕ್ರಮ, ಅಂಬಾರಿ ಉತ್ಸವ ಬಸ್ ಅತ್ಯುತ್ತಮ ಬ್ರ್ಯಾಂಡ್ ಅನುಭವ, ಅಶ್ವಮೇಧ ಕ್ಲಾಸಿಕ್ ಬಸ್‌ಗಳು- ಅತ್ಯುತ್ತಮ ಕಾರ್ಪೊರೇಟ್ ಸಂವಹನ ಹಾಗೂ ನಿರ್ವಹಣೆ, ಪಲ್ಲಕ್ಕಿ ಬಸ್‌ಗಳ ಅತ್ಯುತ್ತಮ ಗ್ರಾಹಕ ಸ್ವೀಕೃತಿ, ಪ್ರತಿಷ್ಠಿತ ಬಸ್ ಸೇವೆಗಳ ಬ್ರ್ಯಾಂಡಿಂಗ್- ಅತ್ಯುತ್ತಮ ಸಾರ್ವಜನಿಕ ಸಂಪರ್ಕ, ಅಶ್ವಮೇಧ ಕ್ಲಾಸಿಕ್ ಬಸ್‌ಗಳು- ವರ್ಷದ ಅತ್ಯುತ್ತಮ ಬ್ರ್ಯಾಂಡ್ ಗೆ ಎಡಿವರ್ಲ್ಡ್ ಶೋಡೌನ್ ಪ್ರಶಸ್ತಿ ಲಭಿಸಿದೆ.
ಅದೇ ರೀತಿ, ನಿಗಮವು ಅತ್ಯುತ್ತಮ ಪರಿಸರ ನಿರ್ವಹಣೆ ಹಾಗೂ ವಿನೂತನ ಮಾನವ ಸಂಪನ್ಮೂಲ ಯೋಜನೆಗಳ ಅನುಷ್ಠಾನಕ್ಕಾಗಿ ಗ್ರೋ ಕೇರ್ ಇಂಡಿಯಾದ 2 ವಿಭಾಗಗಳಲ್ಲಿ ಪ್ರಶಸ್ತಿ ಹಾಗೂ ಕಾರ್ಪೋರೆಟ್ ಚಿತ್ರ ವಿಭಾಗದಲ್ಲಿ ನಿಗಮಕ್ಕೆ ಪಿಆರ್‌ಎಸ್‌ಐ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ. ಎಡಿವರ್ಲ್ಡ್ ಪ್ರಶಸ್ತಿಯು ದಿಲ್ಲಿಯಲ್ಲಿ ಮತ್ತು ಗ್ರೋ ಕೇರ್ ಇಂಡಿಯಾ ಪ್ರಶಸ್ತಿಯು ಗೋವಾ ಮತ್ತು ಪಿಆರ್‌ಎಸ್‌ಐ ಪ್ರಶಸ್ತಿಯನ್ನು ರಾಯಪುರದಲ್ಲಿ ಈಚೆಗೆ ಪ್ರದಾನ ಮಾಡಲಾಯಿತು ಎಂದು ನಿಗಮದ ಪ್ರಕಟನೆ ತಿಳಿಸಿದೆ.