ಪಣಜಿ : ಕರ್ನಾಟಕದಿಂದ ಗೋವಾಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಆರಂಭಗೊಂಡಿದ್ದರೂ ಕೂಡ ಬಸ್ ನಲ್ಲಿ ಪ್ರಯಾಣಿಕರ ಕೊರತೆ ಎದುರಾಗಿದೆ. ಗೋವಾ ಪ್ರವೇಶಕ್ಕೆ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಖಡ್ಡಾಯಗೊಳಿಸಿರುದರಿಂದ ಗೋವಾಕ್ಕೆ ಆಗಮಿಸುವ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ.
ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಪ್ರತಿದಿನ ಹಲವು ಕೆ.ಎಸ್.ಆರ್.ಟಿ.ಸಿ ಬಸ್ ಗೋವಾಕ್ಕೆ ಆಗಮಿಸುತ್ತಿದವೆ. ಬಸ್ ನಲ್ಲಿ ಗೋವಾಕ್ಕೆ ಆಗಮಿಸುವವರು ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದಿರುವುದು ಖಡ್ಡಾಯವಾಗಿದೆ. 72 ಗಂಟೆಗಳ ಒಳಗಿನ ಪ್ರಮಾಣಪತ್ರವನ್ನು ಹೊಂದಿರಬೇಕಿದೆ. ನೆಗೆಟಿವ್ ಪ್ರಮಾಣಪತ್ರ ಹೊಂದಿರದವರನ್ನು ಗೋವಾ ಗಡಿಯಲ್ಲಿ ತಪಾಸಣೆ ನಡೆಸಲಾಗುತ್ತದೆ.
ಇದನ್ನೂ ಓದಿ : ಗೋವಾ : ಜುಲೈ 15 ಅಥವಾ 16 ಕ್ಕೆ ನೂತನ ರಾಜ್ಯಪಾಲರ ಪ್ರಮಾಣ ವಚನ : ಪ್ರಮೋದ್ ಸಾವಂತ್
ಗೋವಾದಲ್ಲಿ ಉತ್ತರ ಕರ್ನಾಟಕದ ಜನರು ಬಹುಮುಖ್ಯ ಮಾಗಿ ಗೋವಾದಲ್ಲಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಮತ್ತು ವಿವಿಧ ಕೂಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುವವರು ಕರ್ನಾಟಕಕ್ಕೆ ಬಂದು-ಹೋಗುತ್ತಿರುತ್ತಾರೆ. ಆದರೆ ಸದ್ಯ ಬಸ್ ಆರಂಭಗೊಂಡಿದ್ದರೂ ಕೂಡ ಗೋವಾಕ್ಕೆ ಆಗಮಿಸಲು ಕೋವಿಡ್ ನೆಗೆಟಿವ್ ವರದಿ ಖಡ್ಡಾಯವಾಗಿರುವುದರಿಂದ ಗೋವಾಕ್ಕೆ ಆಗಮಿಸಲು ಕೂಲಿ ಕಾರ್ಮಿಕರು ಭಯಪಡುವಂತಾಗಿದೆ.
ಕಳೆದ ಕೆಲ ದಿನಗಳಿಂದ ಗೋವಾಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಆರಂಭಗೊಂಡಿದ್ದರೂ ಪ್ರಯಾಣಿಕರ ಕೊರತೆ ಎದ್ದು ಕಾಣುವಂತಾಗಿದೆ.
ಇದನ್ನೂ ಓದಿ : ಮೋದಿ ಸಂಪುಟ ಪುನರ್ ರಚನೆ : ಉಡುಪಿ, ಚಿಕ್ಕಮಗಳೂರು ಸಂಸದೆ ಶೋಭಾ ಕಂರಂದ್ಲಾಜೆ ಪ್ರಮಾಣ ವಚನ